Ad Code

Responsive Advertisement

ತಾವೂರಿನಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿದ ನಾಗದೇವತಾ ಪ್ರತಿಷ್ಠಾಪನೆ


ತಾವೂರಿನಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿದ ನಾಗದೇವತಾ ಪ್ರತಿಷ್ಠಾಪನೆ

ಮಡಿಕೇರಿ ಜೂ.3: ಭಾಗಮಂಡಲ ಸಮೀಪದ ತಾವೂರು ಗ್ರಾಮದ ಕೋಳಿಬೈಲು ಮನೆಯಲ್ಲಿ ನಾಗದೇವತಾ ಪ್ರತಿಷ್ಠಾಪನೆ ಶ್ರದ್ಧಾಭಕ್ತಿಯಿಂದ ನೆರವೇರಿತು. 

ಭಾಗಮಂಡಲದ ತಂತ್ರಿಗಳಾದ ಶ್ಯಾಮ್ ಭಟ್ ಹಾಗೂ ತಂಡ ವಿವಿಧ ಪೂಜಾ ವಿಧಿವಿಧಾನಗಳನ್ನು ನೇರವೇರಿಸಿದರು.

ನಾಗಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಕೋಳಿಬೈಲು ಚಿನ್ನಪ್ಪ ವೆಂಕಟೇಶ್ ಅವರ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಕೋಳಿಬೈಲು ಕುಟುಂಬದ ಹಿರಿಯರು, ಸಮಿತಿ ಉಪಾಧ್ಯಕ್ಷ ಸುರೇಂದ್ರ ಕುಮಾರ್, ಕಾರ್ಯದರ್ಶಿ ಕೆ.ಬಿ.ಲಿಂಗರಾಜು, ಜಂಟಿ ಕಾರ್ಯದರ್ಶಿ ರೋಷನ್, ಸಮಿತಿ ಸದಸ್ಯರು, ತಾವೂರು ಗ್ರಾಮದ ಮುಖಂಡರು ಹಾಗೂ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.