Header Ads Widget

ಸರ್ಚ್ ಕೂರ್ಗ್ ಮೀಡಿಯ

ಇನ್ನು ಪೋಲಿಸ್ ಸ್ಟೇಷನ್ ಗಳಲ್ಲಿ ನಳನಳಿಸಲಿವೆ ಔಷಧೀಯ ಸಸ್ಯಗಳು; ಕೊಡಗು ನಿಮಾ ವತಿಯಿಂದ ಅಮೃತ ಮಹೋತ್ಸವದ ಪರಿಸರ ದಿನಾಚರಣೆ


ಇನ್ನು ಪೋಲಿಸ್ ಸ್ಟೇಷನ್ ಗಳಲ್ಲಿ ನಳನಳಿಸಲಿವೆ ಔಷಧೀಯ ಸಸ್ಯಗಳು; ಕೊಡಗು ನಿಮಾ ವತಿಯಿಂದ ಅಮೃತ ಮಹೋತ್ಸವದ ಪರಿಸರ ದಿನಾಚರಣೆ

ಮಡಿಕೇರಿ: ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ನೇಷನಲ್ ಇಂಟೆಗ್ರೇಟೆಡ್ ಮೆಡಿಕಲ್ ಎಸೋಸಿಯೇಷನ್ ನ ಕೊಡಗು ಜಿಲ್ಲಾ ಶಾಖೆಯು  ಇದೇ ಜೂನ್ 5 ರಂದು ಪೋಲಿಸ್ ಇಲಾಖೆಗೆ ಔಷಧೀಯ ಮಹತ್ವದ ಸಿಮರೂಬಾ (ಲಕ್ಷ್ಮೀ ತರು), ಕರಂಜ, ಜಂಬೂ ಮೊದಲಾದ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ದಿನವನ್ನು ಆಚರಿಸಿತು. ಇಲಾಖೆಯ ಪರವಾಗಿ ಜಿಲ್ಲಾ ಪೋಲಿಸ್ ಎಸ್. ಪಿ. ಕ್ಯಾಪ್ಟನ್ ಐಯಪ್ಪನವರು ಇವುಗಳನ್ನು ವಿವಿಧ ಠಾಣೆಗಳಲ್ಲಿ ಬೆಳೆಸುವ ಭರವಸೆಯಿತ್ತರು.  ನಿಮಾ ಕೊಡಗು ಅಧ್ಯಕ್ಷ ಡಾ ರಾಜಾರಾಮ್, ನಿಮಾ ಸಂಪರ್ಕಾಧಿಕಾರಿ ಡಾ. ಉದಯ ಶಂಕರ್, ಮಹಿಳಾ ವಿಭಾಗದ ಕಾರ್ಯದರ್ಶಿ ಡಾ. ಸೌಮ್ಯ ಗಣರಾಜ್ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.


ಮಡಿಕೇರಿಯ ಬಾಲಭವನದ ಮಕ್ಕಳಿಗೆ ‘ನಮ್ಮ ಕನಸುಗಳ ಉಳಿವಿಗಾಗಿ ಮರ ಬೆಳೆಸೋಣ’ ಎಂಬ ವಿಷಯದ ಕುರಿತು ವರ್ಣ ಚಿತ್ರರಚನಾ ಸ್ಪರ್ಧೆ ಯನ್ನು  ಏರ್ಪಡಿಸಲಾಗಿತ್ತು.  



ಹದಿಹರೆಯದ ವಿದ್ಯಾರ್ಥಿನಿಯರಿಗೆ ಋತುಸ್ರಾವದ ವೇಳೆಯಲ್ಲಿನ ನೈರ್ಮಲ್ಯ ಪಾಲನೆ ಹಾಗೂ ಇನ್ನಿತರ ಸಮಸ್ಯೆಗಳ ಕುರಿತಾಗಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ರೇಣುಕಾ ಮಾಹಿತಿ ನೀಡಿದರು.  ಕಾರ್ಯಕ್ರಮವನ್ನು ನಿಮಾ ಮಹಿಳಾ ವಿಭಾಗ ಆಯೋಜಿಸಿದ್ದು  ಕಾರ್ಯದರ್ಶಿ ಡಾ. ಸೌಮ್ಯ ಗಣರಾಜ್, ಸ್ಯಾನಿಟರಿ ಪ್ಯಾಡ್ ಗಳನ್ನು ಹಂಚಿದರು.