Header Ads Widget

ಸರ್ಚ್ ಕೂರ್ಗ್ ಮೀಡಿಯ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನೂತನ ಕುಟ್ಟ ಶಾಖೆ ಉದ್ಘಾಟನೆ


ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನೂತನ ಕುಟ್ಟ ಶಾಖೆ ಉದ್ಘಾಟನೆ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನೂತನ ಕುಟ್ಟ ಶಾಖೆಯನ್ನು, ಕುಟ್ಟದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪಿ.ಎಂ. ಗಣಪತಿಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಒತ್ತಡ ತುಂಬಿದ ಜೀವನದಲ್ಲಿ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಜ್ಞಾನ ಹಾಗೂ ರಾಜಯೋಗ ಶಿಕ್ಷಣ ಅತ್ಯವಶ್ಯಕವಾಗಿದೆ ಇಂತಹ ಗ್ರಾಮೀಣ ಪ್ರದೇಶದಲ್ಲಿ ಈಶ್ವರಿಯ ವಿಶ್ವವಿದ್ಯಾಲಯ ಸೇವಾ ಕೇಂದ್ರವನ್ನು ತೆರೆದು ಜನರಿಗೆ ಉಚಿತವಾಗಿ ರಾಜಯೋಗ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಜನ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅಭಿಪ್ರಾಯಪಟ್ಟರು. 

ಸಭೆಯ ಅಧ್ಯಕ್ಷತೆಯನ್ನು ವಹಿಸಿದಂತಹ ಮಡಿಕೇರಿ   ಬ್ರಹ್ಮಕುಮಾರಿ ಶಾಖೆಯ  ಧನಲಕ್ಷ್ಮಿ ಅಕ್ಕನವರು ಮಾತನಾಡಿ ನಶ್ವರವಾದ ಈ ಪ್ರಪಂಚದಲ್ಲಿ ಭಗವಂತನನ್ನು ಅರಿತು ಅವನ ಚಿಂತನೆ ಹಾಗೂ ಧ್ಯಾನದ ಮೂಲಕ ಸತ್ಯವಾದ ಸುಖ ಶಾಂತಿ ನೆಮ್ಮದಿಯನ್ನು ಕಂಡುಕೊಂಡು ಜೀವನವನ್ನು ಸಾರ್ಥಕತೆಯ ಕಡೆಗೆ ಕೊಂಡೊಯ್ಯಬಹುದೆಂದರು.

ಸಮಾರಂಭದಲ್ಲಿ ಅತಿಥಿಗಳಾಗಿ ಕುಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದಿವ್ಯ ಪಿ.ಎಂ ಹಾಗೂ ಎಸ್ .ಎನ್.ಡಿ.ಪಿಯ ಕುಟ್ಟ ಶಾಕೆಯ ಅಧ್ಯಕ್ಷರಾದ ಪಿ.ಕೆ. ಅರುಣ್ ಕುಮಾರ್  ಮಾತನಾಡಿದರು. ವಿರಾಜಪೇಟೆ ಬ್ರಹ್ಮಕುಮಾರೀಸ್ ಶಾಖೆಯ ಸಂಚಾಲಕರು ಬಿ.ಕೆ.ಕೋಮಲ ಅಕ್ಕನವರು  ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪರಿಚಯವನ್ನು ನೀಡಿದರು. ಗೋಣಿಕೊಪ್ಪ ಶಾಖೆಯ ಸಂಚಾಲಕಿ ಬ್ರಹ್ಮಕುಮಾರಿ ಚಂದ್ರಿಕಾ ಅಕ್ಕನವರು ಮಾತನಾಡಿ ಪ್ರತಿಯೊಬ್ಬರೂ ದಿನದ ಸ್ವಲ್ಪ ಸಮಯವನ್ನು ಅಧ್ಯಾತ್ಮ, ಜ್ಞಾನ, ಯೋಗಕ್ಕೆ ಮೀಸಲಿಟ್ಟು  ಸುಖಕರ ಜೀವನವನ್ನು ನಡೆಸಬೇಕೆಂದು ಕರೆನೀಡಿದರು. ನೂರೇರ ಬಬಿತ ದೇವಿ ಗೀತೆಯನ್ನು ಹಾಡಿದರೆ, ಸ್ವಾಗತ ಭಾಷಣವನ್ನು ಶಿಬು ಅಣ್ಣನವರು ಮಾಡಿದರು. ಬಿ.ಕೆ ರದೀಶ್, ಬಿ.ಕೆ.ಸಂತೋಷ್, ಮಾಚಿಮಾಡ ಕಾಂತಿ  ಅವರು ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಅಬ್ಯಾಸದಿಂದ ತಮಗಾದ  ಅನುಭವಗಳನ್ನು ಸಭೆಯಲ್ಲಿ  ಹಂಚಿಕೊಂಡರು. ಬಿಕೆ ರೇಷ್ಮ ಅವರು ವಂದನಾರ್ಪಣೆಯನ್ನು ಮಾಡಿದರು.