Header Ads Widget

Responsive Advertisement

ಅಂತರರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಕಾರಾಗೃಹದ ಬಂಧಿಗಳು ಹಾಗೂ ಸಿಬ್ಬಂದಿಗಳಿಗೆ ಯೋಗ ತರಬೇತಿ ಕಾರ್ಯಕ್ರಮ


ಅಂತರರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಕಾರಾಗೃಹದ ಬಂಧಿಗಳು ಹಾಗೂ ಸಿಬ್ಬಂದಿಗಳಿಗೆ ಯೋಗ ತರಬೇತಿ ಕಾರ್ಯಕ್ರಮ

ಶಾಂತಿ, ನೆಮ್ಮದಿಗೆ ಯೋಗ ಸಹಕಾರಿ ರಮೇಶ್ ಹೊಳ್ಳ

ಮಡಿಕೇರಿ ಜೂ.15: ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ, ಜಿಲ್ಲಾ ಕಾರಾಗೃಹ ವಿಭಾಗ ವತಿಯಿಂದ ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ಅಂತರರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಕಾರಾಗೃಹದ ಬಂಧಿಗಳು ಹಾಗೂ ಸಿಬ್ಬಂದಿಗಳಿಗೆ ಯೋಗ ತರಬೇತಿ ಕಾರ್ಯಕ್ರಮಕ್ಕೆ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ ಅವರು ಚಾಲನೆ ನೀಡಿದರು. 

ನಗರದ ಹೊರವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಜೂನ್, 21 ರವರೆಗೆ ನಡೆಯುವ ಯೋಗ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ರಮೇಶ್ ಹೊಳ್ಳ ಅವರು ಯೋಗ ದಿನಾಚರಣೆ ಹಿನ್ನೆಲೆ ಇಡೀ ವಿಶ್ವ ಭಾರತದ ಕಡೆ ತಿರುಗಿ ನೋಡುವಂತಾಗಿದೆ ಎಂದರು. 

ಪ್ರಾಣಯಾಮ, ಯೋಗ, ಧ್ಯಾನದಿಂದ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ, ಸಹನೆ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ಇವುಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. 

ಕಾರಾಗೃಹದಲ್ಲಿರುವ ಬಂಧಿಗಳು ಮನಸ್ಸನ್ನು ಪರಿವರ್ತನೆ ಮಾಡಿಕೊಂಡು ಸಮಾಜದಲ್ಲಿ ಇತರರಂತೆ ಬದುಕು ನಡೆಸುವಂತಾಗಬೇಕು ಎಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದರು. 

ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಸಂಜಯ್ ಜತ್ತಿ ಅವರು ಮಾತನಾಡಿ ಪ್ರತೀ ದಿನ ಯೋಗ, ಧ್ಯಾನ ಮಾಡುವುದರಿಂದ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ, ದೊರೆಯಲಿದೆ. ಯೋಗ ತರಬೇತಿ ಶಿಬಿರದ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಂತಾಗಬೇಕು ಎಂದರು. 

ಪ್ರಮುಖರಾದ ಕೆ.ಡಬ್ಲ್ಯು ಬೋಪಯ್ಯ, ಕೃಷ್ಣ ಬೋಪಯ್ಯ, ಯೋಗ ತರಬೇತಿದಾರರಾದ ಶಂಕರಿ, ಯಶೋಧ, ಸುರೇಶ, ಇತರರು ಇದ್ದರು.