Header Ads Widget

Responsive Advertisement

ಮಳೆಗಾಲದ ಮುನ್ನೆಚ್ಚರಿಕೆ : ಕರಿಕೆಯಲ್ಲಿ ಸ್ವಚ್ಛತಾ ಶ್ರಮದಾನ


ಮಳೆಗಾಲದ ಮುನ್ನೆಚ್ಚರಿಕೆ : ಕರಿಕೆಯಲ್ಲಿ ಸ್ವಚ್ಛತಾ ಶ್ರಮದಾನ 

ಮಡಿಕೇರಿ ಜೂ.15 : ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಸುಲುವಾಗಿ ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಕರಿಕೆ ಗ್ರಾ.ಪಂ ವತಿಯಿಂದ ಶ್ರಮದಾನ ನಡೆಯಿತು.

ಗ್ರಾ.ಪಂ ವ್ಯಾಪ್ತಿಯ ಚೆತ್ತುಕಾಯ, ಎಳ್ಳುಕೊಚ್ಚಿ, ತೋಟಂ, ಚೆಂಬೇರಿ  ಸೇರಿದಂತೆ ಸಾರ್ವಜನಿಕ ಸ್ಥಳಗಳು, ಅಂಗಡಿ ಮುಂಗಟ್ಟುಗಳು ಹಾಗೂ ರಸ್ತೆಯ ಬದಿಗಳಲಿದ್ದ ಕಸವನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ವಾರದಲ್ಲಿ ಒಂದು ದಿನ ಗ್ರಾಮದ ಎಲ್ಲಾ ಕಡೆಗಳಿಗೆ ಭೇಟಿ ನೀಡಿ ಸ್ವಚ್ಛತೆಯನ್ನು ಪರಿಶೀಲಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆಡಳಿತ ಮಂಡಳಿ ಸೂಚಿಸಿತು. 


ಪಂಚಾಯಿತಿ ಅಧ್ಯಕ್ಷೆ ಕೆ.ಕಲ್ಪನಾ ಜಗದೀಶ್, ಉಪಾಧ್ಯಕ್ಷ ಎನ್.ಬಾಲಚಂದ್ರ ನಾಯರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ಪಿ.ಗಣಪತಿ,  ಸದಸ್ಯರಾದ ಎಂ.ಹೆಚ್.ಆಯಿಷಾ, ಕೆ.ಎ.ದೇವದತ್ತ, ಜಯಶ್ರೀ, ಸುಮ, ಕೆ.ಎ.ನಾರಾಯಣ, ದೀಪಿಕಾ ಹಾಗೂ ಸಿಬ್ಬಂದಿ ವರ್ಗದವರು, ಮಾಜಿ ಗ್ರಾ.ಪಂ ಸದಸ್ಯ ಎ.ಎಮ್.ಜಯನ್, ಪ್ರೌಢಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಟಿ.ಆರ್.ಶ್ರೀನಿವಾಶ್ ಮುಖ್ಯ ಶಿಕ್ಷಕ ಅಶೋಕ್, ಶಿಕ್ಷಕಿ ದೀಪ್ತಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಕಾರ್ಯದರ್ಶಿ ಎಂ.ಎಂ.ರೆಲ್ಸನ್, ಸದಸ್ಯರುಗಳಾದ ಬಿ.ಆರ್.ಬಾಲಕೃಷ್ಣ, ಕೆ.ಕೆ.ಜಗದೀಶ್, ಅನಿಲ್ ಎಳ್ಳುಕೊಚ್ಚಿ, ನ್ಯೂ ಫ್ರೆಂಡ್ಸ್ ಯುವಕ ಸಂಘದ ಅಧ್ಯಕ್ಷ ಶಿವಪ್ಪ, ತೋಟಂ ರಾಜೀವ್ ರತ್ನ ಯುವಕ ಸಂಘದ ಅಧ್ಯಕ್ಷ ಎ.ಯು.ಉಮ್ಮರ್, ಗ್ಲೋಬಲ್ ಅಕಾಡೆಮಿಯ ಜೋಶಿ ಜಾರ್ಜ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.