Header Ads Widget

ಸರ್ಚ್ ಕೂರ್ಗ್ ಮೀಡಿಯ

ಕುಂದಚೇರಿ ಗ್ರಾ.ಪಂ ಪಿಡಿಒ ಗೆ ಬೀಳ್ಕೊಡುಗೆ : ಕರ್ತವ್ಯ ನಿಷ್ಠೆಯ ಬಗ್ಗೆ ಶ್ಲಾಘನೆ


ಕುಂದಚೇರಿ ಗ್ರಾ.ಪಂ ಪಿಡಿಒ ಗೆ ಬೀಳ್ಕೊಡುಗೆ : ಕರ್ತವ್ಯ ನಿಷ್ಠೆಯ ಬಗ್ಗೆ ಶ್ಲಾಘನೆ 

ಮಡಿಕೇರಿ ಜೂ.14 : ಕುಂದಚೇರಿ (ಚೆಟ್ಟಿಮಾನಿ) ಗ್ರಾ.ಪಂ ಯಲ್ಲಿ 11 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಪಿ.ಗೀತಾಂಜಲಿ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.

ಕುಂದಚೇರಿ (ಚೆಟ್ಟಿಮಾನಿ) ಸಮುದಾಯ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿವರ್ಗ ಪಿಡಿಒ ಅವರ ಸೇವೆಯನ್ನು ಶ್ಲಾಘಿಸಿ ಸನ್ಮಾನಿಸಿದರು. 

ಉಪಾಧ್ಯಕ್ಷ ಕೆ.ವಿ.ಪ್ರವೀಣ್ ಕುಮಾರ್ ಹಾಗೂ ಗ್ರಾಮ ಲೆಕ್ಕಿಗರಾದ ಶ್ರದ್ಧಾ ಮಾತನಾಡಿ ಗೀತಾಂಜಲಿ ಅವರ ಕರ್ತವ್ಯ ನಿಷ್ಠೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಸದಸ್ಯರಾದ ದಿನೇಶ್, ಬಸಪ್ಪ, ಬೇಬಿ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷೆ ಸವಿತ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯ ಕೆ.ಯು.ಹಾರಿಸ್ ಸ್ವಾಗತಿಸಿ, ದಮಯಂತಿ ರಾಣಿ ನಿರೂಪಿಸಿ, ಭುವನೇಶ್ವರಿ ವಂದಿಸಿದರು.