Header Ads Widget

ಸರ್ಚ್ ಕೂರ್ಗ್ ಮೀಡಿಯ

ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಯಾನವನ ಉದ್ಘಾಟನೆ


ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಯಾನವನ ಉದ್ಘಾಟನೆ

ವಿರಾಜಪೇಟೆ ತಾಲ್ಲೂಕಿನ ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ ನಿರ್ಮಾಣಗೊಂಡ ಉದ್ಯಾನವನನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಉದ್ಘಾಟಿಸಿದರು. 


ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಈಗಾಗಲೇ ಜಿಲ್ಲೆಯ ಹಲವು  ಶಾಲಾ ಆವರಣಗಳಲ್ಲಿ ಹಾಗೂ  ಪಂಚಾಯಿತಿ ಆವರಣಗಳಲ್ಲಿ  ಉದ್ಯಾನವನಗಳು ನಿರ್ಮಾಣವಾಗುತ್ತಿದ್ದು ,  ಉದ್ಯೋಗ ಖಾತ್ರಿ ಯೋಜನೆಯಡಿ ವಿರಾಜಪೇಟೆ  ತಾಲ್ಲೂಕಿನಲ್ಲಿ ಒಟ್ಟು 35 ಉದ್ಯಾನವನಗಳು  ಪ್ರಗತಿಯಲ್ಲಿದೆ, ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ  ಹಾಗೂ ಪಂಚಾಯಿತಿ ಆವರಣಗಳಲ್ಲಿ  ಉದ್ಯಾನವನಗಳು ಕಂಗೊಳಿಸಲಿದೆ ಎಂದರು. 


ಹಾಗೆಯೇ ಹಾಲುಗುಂದ ಗ್ರಾಮ ಪಂಚಾಯಿತಿಯ ಸ್ವಚ್ಚತಾ ಘಟಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಹಾಲುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸೀತಮ್ಮ ವೈ.ಬಿ. ಉಪಾಧ್ಯಕ್ಷರಾದ ದಿನೇಶ್. ಸಿ.ಎ. , ಗ್ರಾಮ‌ ಪಂಚಾಯಿತಿಯ ಸದಸ್ಯರುಗಳು, ಪಂಚಾಯಿತಿ ಅಭಿವೃದ್ಧಿ ಕಾಂಚನಾ , ಶಾಲಾ‌ ಮುಖ್ಯ‌ ಶಿಕ್ಷಕರುಗಳು, ಎಸ್.ಬಿ.ಎಮ್  ಸೂರಜ್ , ತಾಂತ್ರಿಕ ಸಂಯೋಜಕರಾದ ನಿರಂಜನ್, ತಾಲ್ಲೂಕು ಐ.ಇ.ಸಿ.ಸಂಯೋಜಕ ನರೇಂದ್ರ ಹಾಗೂ ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ‌