Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾಳಜಿ ಕೇಂದ್ರ ಸೇರಿದಂತೆ ಜಿಲ್ಲೆಯ ವಿವಿದೆಡೆ ರೆಡ್‍ಕ್ರಾಸ್‍ನಿಂದ ಮಾಸ್ಕ್ ವಿತರಣೆ


ಕಾಳಜಿ ಕೇಂದ್ರ ಸೇರಿದಂತೆ ಜಿಲ್ಲೆಯ ವಿವಿದೆಡೆ ರೆಡ್‍ಕ್ರಾಸ್‍ನಿಂದ ಮಾಸ್ಕ್ ವಿತರಣೆ

ಮಡಿಕೇರಿ ಜು.16: ಕೊಡಗು ರೆಡ್‍ಕ್ರಾಸ್ ವತಿಯಿಂದ ಜಿಲ್ಲೆಯಾದ್ಯಂತ ಜನರಿಗೆ ಈವರೆಗೆ 2.50 ಲಕ್ಷ ಮಾಸ್ಕ್‍ನ್ನು ಕಳೆದ 1 ತಿಂಗಳಿನಿಂದ ವಿತರಿಸಲಾಗಿದೆ.

ಬೆಂಗಳೂರು ರೆಡ್‍ಕ್ರಾಸ್ ಮೂಲಕ ಕೊಡಗು ರೆಡ್‍ಕ್ರಾಸ್‍ಗೆ 6 ಲಕ್ಷ ಮಾಸ್ಕ್‍ಗಳು ದೊರಕಿದ್ದು, ಇವುಗಳನ್ನು ಮಡಿಕೇರಿಯ ರೆಡ್‍ಕ್ರಾಸ್ ಸಮುದಾಯ ಭವನದಲ್ಲಿ ಶೇಖರಿಸಿ ಇದೀಗ ಜಿಲ್ಲೆಯಾದ್ಯಂತ ವಿತರಿಸಲಾಗುತ್ತಿದೆ.

 ರೆಡ್‍ಕ್ರಾಸ್ ಜಿಲ್ಲಾ ಸಭಾಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಸೂಚನೆಯಂತೆ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ಈಗಾಗಲೇ ಮಾಸ್ಕ್ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಿದೆ. 

ವಿರಾಜಪೇಟೆ ತಾಲೂಕಿಗೆ 70 ಸಾವಿರ, ಮಡಿಕೇರಿ ತಾಲೂಕಿಗೆ 60 ಸಾವಿರ, ಸೋಮವಾರಪೇಟೆ ತಾಲೂಕಿಗೆ 60 ಸಾವಿರ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ 30 ಸಾವಿರ ಮಾಸ್ಕ್‍ಗಳನ್ನು ಈವರೆಗೆ ವಿತರಿಸಲಾಗಿದೆ ಎಂದು ರೆಡ್‍ಕ್ರಾಸ್ ಜಿಲ್ಲಾ ಸಭಾಪತಿ ಬಿ.ಕೆ.ರವೀಂದ್ರ ರೈ ಮತ್ತು ಪ್ರಧಾನ ಕಾರ್ಯದರ್ಶಿ ಮುರಳಿ ಅವರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಗ್ರಾ.ಪಂ.ಗಳಿಗೆ ಆರೋಗ್ಯ ಸುರಕ್ಷತೆ ನಿಟ್ಟಿನಲ್ಲಿ ಮಾಸ್ಕ್ ವಿತರಣೆ ಕಾರ್ಯ ಕೈಗೊಳ್ಳಲಾಗುತ್ತದೆ. ಕಳೆದ 3 ದಿನಗಳಿಂದ ಜಿಲ್ಲೆಯಲ್ಲಿ ಮಹಾಮಳೆ ಹಿನ್ನಲೆ ಪ್ರಾರಂಭವಾಗಿರುವ ಕಾಳಜಿ ಕೇಂದ್ರಗಳಿಗೂ ರೆಡ್‍ಕ್ರಾಸ್ ವತಿಯಿಂದ ಮಾಸ್ಕ್ ವಿತರಿಸಲಾಗಿದೆ ಎಂದು ರೆಡ್‍ಕ್ರಾಸ್ ಪ್ರಕಟಣೆ ತಿಳಿಸಿದೆ.