Header Ads Widget

Responsive Advertisement

ಬೆಳೆ ಸಾಲ ಅವಧಿಗೆ ಸರಿಯಾಗಿ ಮರುಪಾವತಿಸಿ ಹೊಸ ಸಾಲ ಪಡೆಯಿರಿ: ಬಾಂಡ್ ಗಣಪತಿ


ಬೆಳೆ ಸಾಲ ಅವಧಿಗೆ ಸರಿಯಾಗಿ ಮರುಪಾವತಿಸಿ ಹೊಸ ಸಾಲ ಪಡೆಯಿರಿ: ಬಾಂಡ್ ಗಣಪತಿ 

ಮಡಿಕೇರಿ ಜು.18: ಜಿಲ್ಲೆಯಲ್ಲಿ ಡಿ.ಸಿ.ಸಿ. ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪ್ರೂಟ್ಸ್ ತಂತ್ರಾಂಶದಲ್ಲಿನ ರೈತರು ಹೊಂದಿರುವ ವಿಶಿಷ್ಟ ಗುರುತಿನ ಸಂಖ್ಯೆಗೆ ಅನುಗುಣವಾಗಿ ಸ್ಥಿರಾಸ್ತಿ ಮತ್ತು ಸಾಲದ ಮಾಹಿತಿ ಅಳವಡಿಸಿ ಉಪ ನೋಂದಾಣಾಧಿಕಾರಿಗಳ ಕಚೇರಿಗೆ ನಮೂನೆ-3ರ ದಾಖಲಾತಿ ಸಂಬಂಧ ತಂತ್ರಾಂಶದ ಮೂಲಕ ಸಲ್ಲಿಸಿದ  ಸಂದರ್ಭದಲ್ಲಿ ನೋಂದಣಿ  ಮಹಾಪರೀಕ್ಷಕರು ಮತ್ತು ಮುದ್ರಾಂಕ ಆಯುಕ್ತರ ಹಿಂಬರಹ ಸಂಖ್ಯೆ STP-54/11-22  ದಿನಾಂಕ 21.09.2011 ರನ್ವಯ ಉಪ ನೋಂದಣಾಧಿಕಾರಿ ಕಾಫಿ ಬೆಳೆಗೆ ಮುದ್ರಾಂಕ ಶುಲ್ಕದಿಂದ ವಿನಾಯಿತಿ ಇಲ್ಲವೆಂದು“Coffee Crop cannot be selected for Form-3, kindly select mortgage transaction”  ಎನ್ನುವುದರೊಂದಿಗೆ ಬೆಳೆ ಸಾಲ ಪಡೆದ ರೈತರ ನಮೂನೆ-3ರ ನೋಂದಣಿ ದಾಖಲಾತಿಯು ಸ್ಥಗಿತಗೊಂಡಿದೆ. 

       ಇದರಿಂದಾಗಿ ರಾಜ್ಯ ಸರ್ಕಾರದ ಶೂನ್ಯ ಬಡ್ಡಿ ದರದ ಬೆಳೆ ಸಾಲ ವಿತರಣೆಗೆ ಅಡಚಣೆಯಾಗಿದೆ. ಮತ್ತು ಪ್ರೂಟ್ಸ್ ತಂತ್ರಾಂಶದಡಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದೇ ಇರುವುದರಿಂದ ರೈತರ ಕಾಫಿ ಬೆಳೆ ಆಧಾರಿತ ಬೆಳೆ ಸಾಲವನ್ನು ಸಕಾಲದಲ್ಲಿ ರೈತರಿಗೆ ವಿತರಣೆ ಮಾಡುವಲ್ಲಿ ಗೊಂದಲ ಉಂಟಾಗಿದೆ.

ಜಿಲ್ಲೆಯು ಪ್ರಮುಖವಾಗಿ ಕಾಫಿ ಬೆಳೆಯನ್ನು ಅವಲಂಭಿಸಿದ್ದು, ರೈತರು ಈ ಕಾಫಿ ಬೆಳೆಯ ಆಧಾರದಲ್ಲಿ ಸಹಕಾರ ಸಂಘಗಳು ಮತ್ತು ಡಿಸಿಸಿ ಬ್ಯಾಂಕಿನಿಂದ ಅಲ್ಪಾವಧಿ ಬೆಳೆ ಸಾಲವನ್ನು ಪಡೆಯುತ್ತಿದ್ದು, ರಾಜ್ಯ ಸರ್ಕಾರವು ಪ್ರೂಟ್ಸ್ ತಂತ್ರಾಂಶದಡಿ ರೈತರು ಪಡೆಯುವ ಬೆಳೆ ಸಾಲದ ನಮೂನೆ-3ರ ದಾಖಲಾತಿಗಾಗಿ e-sಚಿಚಿಟಚಿ ತಂತ್ರಾಂಶವನ್ನು ಹೊರತಂದ ನಂತರದಲ್ಲಿ “ಕಾಫಿ ಬೆಳೆಗೆ” ಮುದ್ರಾಂಕ ಶುಲ್ಕದಿಂದ ವಿನಾಯಿತಿ ಇಲ್ಲವೆಂದು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವುದನ್ನು ಮನಗಂಡು ಮತ್ತು ನೆರೆಯ ಕಾಫಿ ಬೆಳೆಯುವ ಜಿಲ್ಲೆಗಳಾದ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಫಿ ಬೆಳೆಗಾರರಿಂದ ಮುದ್ರಾಂಕ ಶುಲ್ಕ ಪಡೆಯದೇ ನಮೂನೆ-3ರ ದಾಖಲಾತಿಯನ್ನು ಮಾಡುತ್ತಿರುವುದನ್ನು ತಿಳಿದು - ಜಿಲ್ಲೆಯ ರೈತರು ಮತ್ತು ಸಹಕಾರ ಸಂಘಗಳ ಹಿತದೃಷ್ಟಿಯಿಂದ – ಇತರೆ ಆಹಾರ ಬೆಳೆಗಳಿಗೂ ಇರುವಂತೆ-ಕಾಫಿ ಬೆಳೆಗೂ ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿ ಕೊಡಿಸಿಕೊಡುವಂತೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ಕೋರಿದ್ದಾರೆ. 

        ರಾಜ್ಯದ ಮುಖ್ಯಮಂತ್ರಿ, ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಎಲ್ಲಾ ಶಾಸಕರುಗಳು, ಜಿಲ್ಲೆಯ ವಿಧಾನ ಪರಿಷತ್ ಸದಸ್ಯರುಗಳು ಹಾಗೂ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು. 

        ಮುಖ್ಯಮಂತ್ರಿ ಅವರು ತಮ್ಮ ಅಧೀನ ಕಾರ್ಯದರ್ಶಿಗಳ ಪತ್ರದ ಮುಖಾಂತರ ಮಾನ್ಯ ಅಧ್ಯಕ್ಷರ ಮನವಿಗೆ ಸ್ಪಂದಿಸಿ ಪ್ರಸ್ತಾವನೆಯನ್ನು ಕಂದಾಯ ಇಲಾಖೆಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಿಕೊಟ್ಟಿರುವುದಾಗಿ ಪತ್ರ ಸಂಖ್ಯೆ off/CM/4379221/2022  ದಿನಾಂಕ 08.07.2022 ರಲ್ಲಿ ತಿಳಿಸಿದ್ದಾರೆ.

        ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಕಾಫಿ ಬೆಳೆಗೆ ನಮೂನೆ-3ರ ದಾಖಲಾತಿ ಮಾಡುವ ಸಂದರ್ಭದಲ್ಲಿ ಮುದ್ರಾಂಕ ಶುಲ್ಕ ವಿಧಿಸುತ್ತಿರುವುದಕ್ಕೆ ವಿನಾಯಿತಿಯನ್ನು ಕೊಡಿಸಿಕೊಡುವಂತೆ ಕಂದಾಯ ಇಲಾಖೆಗೆ ಸೂಚಿಸಿರುವುದಾಗಿ ತಮ್ಮ ಪತ್ರ ಪ್ರಾ.ಪ್ರೌ.ಸ.ಸ/099/1/2021-22 ದಿನಾಂಕ 01.07.2022 ರಲ್ಲಿ ಸ್ಪಂದಿಸಿದ್ದು, ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿಗಳಿಗೆ ತಮ್ಮ ಪತ್ರ ಸಂಖ್ಯೆ 01/2022-23 ದಿನಾಂಕ 14.07.2022 ರಲ್ಲಿ ಪತ್ರ ಬರೆದು-ಕಾವೇರಿ ಫ್ರೂಟ್ಸ್ (Kaveri-Fruits)  ಸಂಯೋಜಿತ ತಂತ್ರಾಂಶದಲ್ಲಿ ಸೂಕ್ತ ಮಾರ್ಪಾಡುಗಳನ್ನು ಅಳವಡಿಸಿ ಕಾಫಿ ಬೆಳೆಗಾರರು ಬರದುಕೊಡುವ ಫಾರಂ-3 ಡಿಕ್ಲರೇಷನ್‍ಗಳಿಗೆ ಮುದ್ರಾಂಕ ಶುಲ್ಕ ಆಕರಣೆಯಿಂದ ಬೇರೆ ರೈತರಿಗೆ ವಿನಾಯಿತಿ ನೀಡಿದಂತೆ ಕಾಫಿ ಬೆಳೆಗಾರರಿಗೂ ಸಹ ವಿನಾಯಿತಿ ನೀಡಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಬಗ್ಗೆ ಕೋರಿದ್ದಾರೆ. 

         ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಮಾಡಿಕೊಂಡಿರುವ ಮನವಿ ಪತ್ರಗಳ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಹಾಲಿ ಕಾಫಿ ಬೆಳೆ ಆಧಾರದಲ್ಲಿ ಪಡೆಯುತ್ತಿರುವ ಬೆಳೆ ಸಾಲದ ಫಾರಂ-3ರ ನೋಂದಾಣಿಯಲ್ಲಿನ ಮುದ್ರಾಂಕ ಶುಲ್ಕಕ್ಕೆ ಶೀಘ್ರ ವಿನಾಯಿತಿ ದೊರಕುವ ಆಶಾಭಾವನೆಯನ್ನು ಹೊಂದಿದ್ದು, ಜಿಲ್ಲೆಯ ರೈತರು ಗೊಂದಲಕ್ಕಿಡಾಗದೇ ಡಿಸಿಸಿ ಬ್ಯಾಂಕ್ ಮತ್ತು ಸಹಕಾರ ಸಂಘಗಳು ಒದಗಿಸಿರುವ ಬೆಳೆ ಸಾಲವನ್ನು ಅವಧಿಗೆ ಸರಿಯಾಗಿ ಮರುಪಾವತಿಸಿ ಹೊಸ ಸಾಲ ಪಡೆದುಕೊಳ್ಳುವಂತೆ ಕೊಡಂದೇರ ಬಾಂಡ್ ಗಣಪತಿ ಅವರು ಸಲಹೆ ಮಾಡಿದ್ದಾರೆ. 

        ಹಿಂದಿನ ಅವಧಿಯಲ್ಲಿ ಪಡೆದ ಬೆಳೆ ಸಾಲವನ್ನು ಅವಧಿಗನುಗುಣವಾಗಿ ಮರುಪಾವತಿಸಿದ ರೈತರ ಪರವಾಗಿ ರಾಜ್ಯ ಸರ್ಕಾರವು ಭರಿಸಿಕೊಡಲಿರುವ ವ್ಯತ್ಯಾಸದ ಬಡ್ಡಿ ಸಹಾಯಧನವನ್ನು ಕ್ಲೇಂ ಮಾಡಿಕೊಡುವಲ್ಲಿಯೂ ಡಿಸಿಸಿ ಬ್ಯಾಂಕ್ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಕೊಡಗು ಡಿಸಿಸಿ ಬ್ಯಾಂಕ್‍ನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ತಿಳಿಸಿದ್ದಾರೆ.