Header Ads Widget

Responsive Advertisement

ಎಲೆಕ್ಟ್ರೀಷಿಯನ್ ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆ ವತಿಯಿಂದ ಟೂಲ್ ಕಿಟ್ ವಿತರಣೆ


ಎಲೆಕ್ಟ್ರೀಷಿಯನ್ ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆ ವತಿಯಿಂದ ಟೂಲ್ ಕಿಟ್ ವಿತರಣೆ

ಮಡಿಕೇರಿ ಜು.22: ರಾಜಪೇಟೆ ವಿಧಾನಸಭಾ ಕ್ಷೇತ್ರದ 9 ಮಂದಿ ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆ ವತಿಯಿಂದ ಎಲೆಕ್ಟ್ರೀಷಿಯನ್ ಟೂಲ್‍ಕಿಟ್ ಅನ್ನು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಶುಕ್ರವಾರ ವಿತರಿಸಿದರು. 

ಎಲೆಕ್ಟ್ರೀಷಿಯನ್ ಟೂಲ್‍ಕಿಟ್‍ನಲ್ಲಿ ಡ್ರಿಲ್ಲಿಂಗ್ ಯಂತ್ರ, ಡ್ರಿಲ್ ಬಿಟ್‍ಗಳು, ಮರದ ಡ್ರಿಲ್ ಬಿಟ್‍ಗಳು, ತಿರುಪು ಮೊಳೆಗಳು, ವಾಲ್ ಪ್ಲಗ್‍ಗಳು, ಸ್ಕ್ರೂಡ್ರೈವರ್‍ಗಳು, ಕಾಂಕ್ರೀಟ್ ಡ್ರಿಲ್ ಬಿಟ್‍ಗಳು, ಡಿಜಿಟಲ್ ಮಲ್ಟಿ ಮೀಟರ್, ಟೇಪ್, ಸ್ಲೈಡಿಂಗ್ ನೈಫ್, ಸುತ್ತಿಗೆ, ವೈರ್ ಕಟ್ಟರ್‍ಗಳು ಮತ್ತು ಟೂಲ್ ಕಿಟ್ ಬ್ಯಾಗ್ ಅನ್ನು 9 ಮಂದಿ ಎಲೆಕ್ಟ್ರೀಷಿಯನ್ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಮಡಿಕೇರಿ ತಾಲ್ಲೂಕು ಹಿರಿಯ ಕಾರ್ಮಿಕ ನಿರೀಕ್ಷರಾದ ಎಂ.ಎಂ.ಯತ್ನಟ್ಟಿ ಅವರು ತಿಳಿಸಿದರು. 

ಕಾರ್ಯಕ್ರಮದಲ್ಲಿ ಮಡಿಕೇರಿ ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ, ಶ್ರೀ ಭಗಂಡೇಶ್ವರ ತೋಟಗಾರಿಕ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷರಾದ ಕೋಡಿ ಪೊನ್ನಪ್ಪ, ಕಾರ್ಮಿಕ ಇಲಾಖೆಯ ಡಿ.ಒ.ಜರೀನಾ. ಪ್ರಸನ್ನ, ರಕ್ಷಿತ್ ಇತರರು ಇದ್ದರು.