Header Ads Widget

ಸರ್ಚ್ ಕೂರ್ಗ್ ಮೀಡಿಯ

ಪೊನ್ನಂಪೇಟೆ ತಾಲೂಕಿಗೆ ನೂತನ ಸರಕಾರಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಕಟ್ಟಡಕ್ಕೆ ಜಾಗ ಮಂಜೂರು


ಪೊನ್ನಂಪೇಟೆ ತಾಲೂಕಿಗೆ ನೂತನ ಸರಕಾರಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಕಟ್ಟಡಕ್ಕೆ ಜಾಗ  ಮಂಜೂರು

ನೂತನ ಪೋನ್ನಂಪೇಟೆ ತಾಲೂಕಿಗೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಕಟ್ಟಡಕ್ಕೆ ನಿರ್ಮಾಣಕ್ಕೆ ಪೋನ್ನಂಪೇಟೆ-ಹುದಿಕೇರಿ ಮುಖ್ಯ ರಸ್ತೆಯ ಬೆಗೂರು ಚೀನಿವಾಡದಲ್ಲಿ ಎರಡು ಏಕರೆಯಷ್ಟು ಸರಕಾರಿ  ಜಾಗವನ್ನು ರಾಜ್ಯ ಸರಕಾರವು ಅರೋಗ್ಯ ಇಲಾಖೆಗೆ  ಮಂಜೂರು  ಮಾಡಿದ್ದು, ಸದ್ಯದಲ್ಲೇ  ಕಾಮಗಾರಿ  ಪ್ರಾರಂಭವಾಗಲಿದೆ. ಜನಪ್ರಿಯ ಶಾಶಕರಾದ  ಕೆ.ಜಿ.ಬೋಪಯ್ಯನವರ  ಪ್ರಯತ್ನದಿಂದ  ಇದೀಗ  ಜಾಗ  ಮಂಜೂರಾಗಿದ್ದು ಪೋನ್ನಂಪೇಟೆ, ಹುದಿಕೇರಿ ಟಿ.ಶೆಟ್ಟಿಗೇರಿ, ಶ್ರೀಮಂಗಲ, ಬಿರುನಾಣಿ, ಕುಟ್ಟ, ನಾಗರಹೊಳೆ, ಕಾನೂರು, ಬಾಳೆಲೆ, ಗೋಣಿಕೊಪ್ಪ ಭಾಗದ  ಸಾರ್ವಜನಿಕರಿಗೆ  ತುಂಬಾ   ಪ್ರಯೋಜನ ವಾಗಲಿದೆ. ಈ ಭಾಗದ ಬಡ ಕಾರ್ಮಿಕರಿಗೆ, ಮಹಿಳೆಯರಿಗೆ ಇದರ ಪ್ರಯೋಜನ ದೊರೆಯಲಿದೆ ಎಂದು ಸ್ಥಳೀಯರಾದ  ಚೋಡುಮಾಡ  ಶ್ಯಾಮ್ ಪೂಣಚ್ಚನವರು  ಮಾಹಿತಿ  ನೀಡಿದ್ದಾರೆ.

ಸುದ್ದಿ- ಮಾಹಿತಿ:  ✍️.... ಎಂ.ಟಿ. ಕಾರ್ಯಪ್ಪ, ವಕೀಲರು, ಶ್ರೀಮಂಗಲ

ಕೂರ್ಗ್ ನ್ಯೂಸ್ 24X7