Header Ads Widget

ಸರ್ಚ್ ಕೂರ್ಗ್ ಮೀಡಿಯ

ಮೀನುಮರಿ ಪಡೆಯಲು ಹೆಸರು ನೋಂದಾಯಿಸಿ


ಮೀನುಮರಿ ಪಡೆಯಲು ಹೆಸರು ನೋಂದಾಯಿಸಿ

ಮಡಿಕೇರಿ ಜು.06: ಪ್ರತಿ ವರ್ಷದಂತೆ 2022-23ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯಿಂದ ಸರ್ಕಾರ ನಿಗಧಿಪಡಿಸಿದ ದರಗಳಲ್ಲಿ ಬಿತ್ತನೆಗೆ ಯೋಗ್ಯವಾದ, ಮೀನುಮರಿಗಳನ್ನು ಲಭ್ಯತೆಗೆ ಅನುಗುಣವಾಗಿ ವಿತರಿಸಲಾಗುವುದು. ಆಸಕ್ತ ಕೃಷಿಕರು ತಮ್ಮ ಬೇಡಿಕೆಯನ್ನು ಸಂಬಂಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕೋರಿದೆ. 

ಹೆಚ್ಚಿನ ಮಾಹಿತಿಗೆ ಮಡಿಕೇರಿ ತಾಲ್ಲೂಕು ವಿನಯ್ 9769070850, ಸೋಮವಾರಪೇಟೆ ನಿರ್ವಾಣಿ 9448918782, 7338218782, ವಿರಾಜಪೇಟೆ ಬಿ.ಕೆ.ನಿಶಾಂತ್ 9731363143 ಮೀನುಗಾರಿಕೆ ಇಲಾಖಾ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಕೆ.ಟಿ.ದರ್ಶನಾ ಅವರು ತಿಳಿಸಿದ್ದಾರೆ.