ನೂತನ ಉಪ ಕಾರ್ಯದರ್ಶಿ ಮತ್ತು ಯೋಜನಾ ನಿರ್ದೇಶಕರಿಂದ ಅಧಿಕಾರ ಸ್ವೀಕಾರ
ಮಡಿಕೇರಿ: ಕೊಡಗು ಜಿಲ್ಲಾ ಪಂಚಾಯತ್‍ಗೆ ನೂತನ ಉಪ ಕಾರ್ಯದರ್ಶಿಗಳಾಗಿ ಜಿ.ಧನರಾಜು ಮತ್ತು ಯೋಜನಾ ನಿರ್ದೇಶಕರಾಗಿ ಜಗದೀಶ್ ಅವರು ಶುಕ್ರವಾರ ಅಧಿಕಾರ ಸ್ವೀಕಾರ ಮಾಡಿದರು.
ಹಿಂದಿನ ಉಪ ಕಾರ್ಯದರ್ಶಿ ಆಗಿದ್ದ ಪಿ.ಲಕ್ಷ್ಮಿ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಜಿ.ಧನರಾಜು ಮತ್ತು ಯೋಜನಾ ನಿರ್ದೇಶಕರಾಗಿದ್ದ ಶ್ರೀಕಂಠಮೂರ್ತಿ ಅವರ ವಯೋನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ಜಗದೀಶ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಆ ದಿಸೆಯಲ್ಲಿ ನೂತನ ಉಪ ಕಾರ್ಯದರ್ಶಿ ಮತ್ತು ಯೋಜನಾ ನಿರ್ದೇಶಕರನ್ನು ಸಹಾಯಕ ಕಾರ್ಯದರ್ಶಿ ಜೀವನ್ ಕುಮಾರ್ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು.
ನೂತನ ಉಪ ಕಾರ್ಯದರ್ಶಿ ಜಿ.ಧನರಾಜು ಅವರು ಈ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಉಪ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹಾಗೆಯೇ ನೂತನ ಯೋಜನಾ ನಿರ್ದೇಶಕರಾದ ಜಗದೀಶ್ ಅವರು ಈ ಹಿಂದೆ ದಾವಣಗೆರೆಯಲ್ಲಿ ಯೋಜನಾ ನಿರ್ದೇಶಕರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network