Header Ads Widget

Responsive Advertisement

ಶ್ರೀಮಂಗಲ ನಾಡು ಕೊಡವ ಸಮಾಜದಲ್ಲಿ ಗಿಡ ನೆಡುವ ಕಾರ್ಯಕ್ರಮ


ಶ್ರೀಮಂಗಲ  ನಾಡು  ಕೊಡವ ಸಮಾಜದಲ್ಲಿ ಗಿಡ  ನೆಡುವ  ಕಾರ್ಯಕ್ರಮ

ಶ್ರೀಮಂಗಲ  ನಾಡು  ಕೊಡವ ಸಮಾಜದಲ್ಲಿ ಇಂದು  ಗಿಡ  ನೆಡುವ  ಕಾರ್ಯಕ್ರಮ ನಡೆಯಿತು. ಮುಖ್ಯ  ಅತಿಥಿಗಳಾಗಿ  ವಲಯ  ಅರಣ್ಯಧಿಕಾರಿ  ಡೆನ್ಸಿ  ದೇಚಮ್ಮ,  ಟಿ ಶೆಟ್ಟಿಗೇರಿ ಗ್ರಾಮ  ಪಂಚಾಯತಿ  ಸದಸ್ಯ  ಕೆ ಪಿ ಪ್ರಭು  ಉಪಸ್ಥಿತರಿದ್ದರು. ಪೋಮ್ಮಕ್ಕಡ  ಕೂಟದ  ಅಧ್ಯಕ್ಷಣಿ  ನಿನಾ  ಪೂಣಚ್ಚ  ಅಧ್ಯಕ್ಷತೆ  ವಹಿಸಿದ್ದರು. 

ಕೊಡವ  ಸಮಾಜದ  ಆವರಣದಲ್ಲಿ  ಸುಮಾರು  200 ತೇಗ, ಸಿಲ್ವರ್, ಮಹಾಗಣಿ, ಹಣ್ಣಿನ ಹಾಗೂ ಹೂವಿನ  ಗಿಡ ಗಳನ್ನು  ನೆಡೆಲಾಯಿತು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ  ಅಧಿಕಾರಿಗಳು  ಭಾಗವಹಿಸಿದ್ದರು. ವನ  ಮಹೋತ್ಸವದ  ಮಹತ್ವದ  ಬಗ್ಗೆ ಡೆನ್ಸಿ ದೇಚಮ್ಮನವರು  ಮಾಹಿತಿ  ನೀಡಿದರು. 


ಗಿಡ  ನೆಡುವ  ಅಭಿಯಾನ ಏರ್ಪಡಿಸಿದ  ಕೊಡವ  ಸಮಾಜದ  ಎಂ.ಟಿ.ಕಾರ್ಯಪ್ಪ  ಮಾತನಾಡಿ  ಗಿಡ  ನೆಡುವ  ಬೆಳೆಸುವ  ಬಗ್ಗೆ ಮಾಹಿತಿ  ನೀಡಿದರು. ಮುಂದಿನ  ದಿನಗಳಲ್ಲಿ  ಕೊಡವ  ಸಮಾಜದಲ್ಲಿ  ಸುಂದರ  ಉದ್ಯಾನವನ  ಮಾಡಲು  ಅರಣ್ಯ  ಇಲಾಖೆಯ  ಸಹಕಾರ  ಕೋರಿದರು.  ಕಾರ್ಯಕ್ರಮ ದಲ್ಲಿ ವಕೀಲರಾದ  ರಾಜಿತ್, ಮದ್ರಿರ ವಿಷ್ಣು, ಕಟ್ಟೆರೆ ಜನಕ, ಕೊಡವ  ಸಮಾಜದ  ಪದಾಧಿಕಾರಿಗಳು  ಇದ್ದರು. ಸ್ವಾಗತವನ್ನು ಮಚ್ಚಾಮಾಡ  ರೇಷ್ಮಾ ಗೌರಮ್ಮ  ಮಾಡಿದರು.