ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ; ಬೋಧಕ ಆಸ್ಪತ್ರೆಯ ಕೀಲು ಮೂಳೆ ವಿಭಾಗದಲ್ಲಿ ಹಲವು ಸೌಲಭ್ಯ
ಮಡಿಕೇರಿ ಜು.08: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆಯ ಕೀಲು ಮೂಳೆ ವಿಭಾಗದಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸೊಂಟದ ಕೀಲು ಪೂರ್ಣ ಪ್ರಮಾಣದಲ್ಲಿ ಬದಲಾವಣೆ ಮಾಡುವ ಶಸ್ತ್ರಚಿಕಿತ್ಸೆ ಹಾಗೂ ಮೊಣಕಾಲಿನ ಅರ್ಥೋಸ್ಕೋಪಿ ಮೂಳೆಕಟ್ಟು ಪುನರ್ ನಿರ್ಮಾಣ, ಶಸ್ತ್ರಚಿಕಿತ್ಸೆಯನ್ನು ನಡೆಸುವ ಮೂಲಕ ಕೀಲು ಮತ್ತು ಮೂಳೆ ವಿಭಾಗದಲ್ಲಿ ಹೊಸದಾಗಿ ದೊಡ್ಡ ಶಸ್ತ್ರ ಚಿಕಿತ್ಸೆಯನ್ನು ಕೈಗೊಳ್ಳಲಾಗುತ್ತಿದೆ. ಈ ಶಸ್ತ್ರ ಚಿಕಿತ್ಸೆಗಳನ್ನು ಕೀಳು ಮತ್ತುಮೂಳೆ ತಜ್ಞ ವೈದ್ಯರುಗಳಾದ ಡಾ. ಆನಂದ್ ಕುಮಾರ್ ಬಿ ಎಸ್, ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು, ಡಾ. ಮಂಜುನಾಥ ಎ, ಸಹ ಪ್ರಾಧ್ಯಾಪಕರು, ಡಾ.ವಿನಯ್ ಎನ್, ಸಹಾಯಕ ಪ್ರಾಧ್ಯಾಪಕರು, ಡಾ. ಸಂತೋಷ ಜೆ ಬಿ, ಸಹಾಯಕ ಪ್ರಾಧ್ಯಾಪಕರು ಹಾಗೂ ಡಾ. ರವಿಕುಮಾರ್ ಹೆಚ್ ಎಸ್, ಸಹಾಯಕ ಪ್ರಾಧ್ಯಾಪಕರು ಇವರ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಯಿತು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network