Header Ads Widget

ಸರ್ಚ್ ಕೂರ್ಗ್ ಮೀಡಿಯ

2022ನೇ ಸಾಲಿನ ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾಗಿ ಬಿ.ಎನ್.ಪ್ರಕಾಶ್


2022ನೇ ಸಾಲಿನ ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾಗಿ ಬಿ.ಎನ್.ಪ್ರಕಾಶ್

ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿಯ 45 ನೇ ವರ್ಷದ ದಸರಾ ಆಚರಣೆಯ 2022ನೇ ಸಾಲಿನ ಅಧ್ಯಕ್ಷರಾಗಿ ಬಿ.ಎನ್.ಪ್ರಕಾಶ್ ಸರ್ವಾನುಮತದಿಂದ ಆಯ್ಕೆಯಾದರು. ಇಂದು ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೋಣಿಕೊಪ್ಪಲು ದಸರಾ ಇತಿಹಾಸದಲ್ಲಿಯೇ 45 ನೇ ವರ್ಷದ ದಸರಾ ಆಚರಣೆಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ರೂ.50 ಲಕ್ಷ ಬಿಡುಗಡೆಯಾಗಿದೆ. ಜನ ಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತಹ ಉತ್ತಮ ನವರಾತ್ರಿ ಕಾರ್ಯಕ್ರಮ ಆಯೋಜನೆಗೆ ಸಕಲ ಪ್ರಯತ್ನ ನಡೆದಿದೆ. ಸರ್ವರ  ಸಹಕಾರದೊಂದಿಗೆ ಅದ್ಧೂರಿ ದಸರಾ ಆಚರಣೆಗೆ ಶೀಘ್ರದಲ್ಲಿಯೆ ಪೂರ್ವಭಾವಿ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.