Header Ads Widget

ಸರ್ಚ್ ಕೂರ್ಗ್ ಮೀಡಿಯ

ಗೌರಿ ಗಣೇಶ ಹಬ್ಬ; ಪರವಾನಿಗೆಯನ್ನು ನಗರ ಸ್ಥಳೀಯ ಸಂಸ್ಥೆಗಳಿಂದ ಪಡೆದುಕೊಳ್ಳಿ


ಗೌರಿ ಗಣೇಶ ಹಬ್ಬ; ಪರವಾನಿಗೆಯನ್ನು ನಗರ ಸ್ಥಳೀಯ ಸಂಸ್ಥೆಗಳಿಂದ ಪಡೆದುಕೊಳ್ಳಿ

ಮಡಿಕೇರಿ ಆ.26: ಗೌರಿ ಗಣೇಶದ ಹಬ್ಬದ ಪ್ರಯುಕ್ತ ಮೂರ್ತಿಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಲು ಹಾಗೂ ವಿಸರ್ಜಿಸಲು ಉದ್ದೇಶಿಸಿರುವ ಆಯೋಜಕರು/ ಸಂಘ ಸಂಸ್ಥೆಗಳು/ ಸಮಿತಿಗಳು ಅನುಮತಿಗಾಗಿ ವಿವಿಧ ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೊಲೀಸ್ ಇಲಾಖೆ, ಸೆಸ್ಕ್, ಆಗ್ನಿಶಾಮಕ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಯ ಸಿಬ್ಬಂದಿಗಳನ್ನೊಳಗೊಂಡ ಏಕಗವಾಕ್ಷಿ ಕೇಂದ್ರವನ್ನು ತೆರೆದು ಅದರ ಮೂಲಕ ಅನುಮತಿಯನ್ನು ನೀಡಲು ಜಿಲ್ಲಾಡಳಿತದಿಂದ ನಿರ್ದೇಶನ ನೀಡಲಾಗಿದೆ.

ಆದ್ದರಿಂದ ಆಯೋಜಕರು/ ಸಂಘ ಸಂಸ್ಥೆಗಳು/ ಸಮಿತಿಗಳು ನಗರ ಸ್ಥಳೀಯ ಸಂಸ್ಥೆಗಳಲ್ಲಿ ತೆರೆಯಲಾಗಿರುವ ಏಕಗವಾಕ್ಷಿ ಕೇಂದ್ರದಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಫಾರಂಗಳನ್ನು ಪಡೆದುಕೊಂಡು ಪರವಾನಿಗೆಯನ್ನು ನಗರ ಸ್ಥಳೀಯ ಸಂಸ್ಥೆಗಳಿಂದ ಪಡೆಯತಕ್ಕದ್ದು ಹಾಗೂ ಸರ್ಕಾರದಿಂದ/ ಜಿಲ್ಲಾಡಳಿತದಿಂದ ಕಾಲಕಾಲಕ್ಕೆ ನೀಡುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ  ಸೌಹಾರ್ದಯುತವಾಗಿ ಆಚರಣೆ ಮಾಡುವಂತೆ ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.