‘ಸಕಾಲ ಮಿತ್ರ’ ಯೋಜನೆಗೆ ಆಹ್ವಾನ
ಮಡಿಕೇರಿ ಆ.26: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ “ಸಕಾಲ ಮಿತ್ರ”ರನ್ನು ನೇಮಕ ಮಾಡುವ ಸಂಬಂಧ ಸಕಾಲ ಮಿಷನ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಕರ್ನಾಟಕ ತಯಾರಿ ನಡೆಸಿರುತ್ತದೆ. ರಾಜ್ಯದ ನಾಗರಿಕರಿಗೆ ನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ 2012 ರಲ್ಲಿ ಪ್ರಾರಂಭಿಸಲಾದ ಸಕಾಲ ಯೋಜನೆಯಲ್ಲಿ ಪ್ರಸ್ತುತ 99 ಇಲಾಖೆಗಳ / ಸಂಸ್ಥೆಗಳ 1115 ಸೇವೆಗಳನ್ನು ಸೇರ್ಪಡೆ ಮಾಡಲಾಗಿದೆ. ನಾಗರಿಕರಲ್ಲಿ ಸಕಾಲ ಸೇವೆಗಳ ಕುರಿತು ಪೂರ್ಣ ಮಾಹಿತಿ/ವಿವರ ಲಭ್ಯವಿಲ್ಲದಿರುವುದನ್ನು ಗಮನಿಸಲಾಗಿದೆ.
ಆದ್ದರಿಂದ ನಾಗರಿಕರಲ್ಲಿ ಸಕಾಲ ಯೋಜನೆಯ ಕುರಿತು ಅರಿವು ಮೂಡಿಸುವ ಸಲುವಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಆಸಕ್ತಿ ಇರುವ ವ್ಯಕ್ತಿಗಳನ್ನು ಯಾವುದೇ ಶೈಕ್ಷಣಿಕ ಸಂಸ್ಥೆ ಅಥವಾ ಸರ್ಕಾರೇತರ ಸಂಸ್ಥೆ (ಎನ್‍ಜಿಒ) ಮುಖಾಂತರ “ಸಕಾಲ ಮಿತ್ರ”ರನ್ನು ನೇಮಕ ಮಾಡಿಕೊಳ್ಳುವಂತೆ ಅಪರ ಮಿಷನ್ ನಿರ್ದೇಶಕರು-1, ಸಕಾಲ ಮಿಷನ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಬೆಂಗಳೂರು ತಿಳಿಸಿದೆ.
“ಸಕಾಲ ಮಿತ್ರ” ಯೋಜನೆಗೆ ಆಸಕ್ತಿಯುಳ್ಳ ಯಾವುದೇ ಶೈಕ್ಷಣಿಕ ಸಂಸ್ಥೆ ಅಥವಾ ಸರ್ಕಾರೇತರ ಸಂಸ್ಥೆ (ಎನ್‍ಜಿಒ)ಗಳು ಸೆಪ್ಟೆಂಬರ್, 07 ರೊಳಗೆ ಜಿಲ್ಲಾಧಿಕಾರಿ ಅವರ ಕಚೇರಿಯನ್ನು ಸಂಪರ್ಕಿಸುವುದು. ಈ ಯೋಜನೆಯಡಿ ಯಾವುದೇ ರೀತಿಯ ಆರ್ಥಿಕ ಬಾಧ್ಯತೆ ಇರುವುದಿಲ್ಲ.
ಹೆಚ್ಚಿನ ಮಾಹಿತಿಗೆ ಸಂದೇಶ್ ಹೆಚ್.ಎಸ್., ಸಕಾಲ ಸಮಾಲೋಚಕರು, ಜಿಲ್ಲಾಧಿಕಾರಿಯವರ ಕಚೇರಿ, ಕೊಡಗು ಜಿಲ್ಲೆ ಇವರನ್ನು ಸಂಪರ್ಕಿಸಬಹುದು. (ಮೊಬೈಲ್ ಸಂಖ್ಯೆ: 9591793660) ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network