Header Ads Widget

Responsive Advertisement

ಮಡಿಕೇರಿಯಲ್ಲಿ ಆಕರ್ಷಕವಾಗಿ ಜರುಗಿದ ವಿಶ್ವ ಜಾನಪದ ದಿನಾಚರಣೆ


ಮಡಿಕೇರಿಯಲ್ಲಿ ಆಕರ್ಷಕವಾಗಿ ಜರುಗಿದ ವಿಶ್ವ ಜಾನಪದ ದಿನಾಚರಣೆ

ಜಾನಪದ ಕಲೆಯಲ್ಲಿ ನಮ್ಮೆಲ್ಲರ ಶ್ರೀಮಂತ ಸಂಸ್ಕøತಿ ಇದೆ; ಶೋಭಾ ಸುಬ್ಬಯ್ಯ.

ಮಡಿಕೇರಿ ಆ.22: ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದ್ದು, ಆ ನಿಟ್ಟಿನಲ್ಲಿ ಜಾನಪದ ಕಲೆಯ ಸಂರಕ್ಷಣೆಗೆ ಎಲ್ಲರೂ  ಕೈಜೋಡಿಸುವಂತಾಗಬೇಕು ಎಂದು  ಜಿಲ್ಲೆಯ ಹಿರಿಯ ಸಾಹಿತಿ, ಜಾನಪದ ಕಲಾವಿದೆ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಕರೆ ನೀಡಿದ್ದಾರೆ.

ನಗರದ  ಸರ್ಕಾರಿ ಜೂನಿಯರ್ ಕಾಲೇಜಿನ  ಸಭಾಂಗಣದಲ್ಲಿ ಸೋಮವಾರ  ಕರ್ನಾಟಕ ಜಾನಪದ ಪರಿಷತ್, ಕೊಡಗು ಜಿಲ್ಲಾ ಜಾನಪದ ಪರಿಷತ್, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಜಾನಪದ ದಿನಾಚರಣೆ’ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

 ಜಾನಪದ ಕಲೆಯಲ್ಲಿ ನಮ್ಮೆಲ್ಲರ ಸಂಸ್ಕøತಿ ಅಡಗಿದೆ. ಇದನ್ನು ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು. ಜಾನಪದ ಗೀತೆಗಳು ಹಳೆಯದಾದರೂ ಕೂಡ ಜಾನಪದ ಗೀತೆಗೆ ಒಂದು ವಿಶಿಷ್ಟ ಶಕ್ತಿ ಇದೆ ಎಂದು ಅವರು ಹೇಳಿದರು.

ಜಾನಪದ ಗೀತೆಯಲ್ಲಿ ಪ್ರತಿಯೊಬ್ಬರ ಶ್ರೀಮಂತ ಸಂಸ್ಕೃತಿಯನ್ನು ಸ್ಮರಿಸಬಹುದಾಗಿದೆ. ಎಲ್ಲರ ಪರಿಪಾಠಗಳನ್ನು ಎಂದಿಗೂ ಮುರಿಯಬಾರದು ಉದ್ಯೋಗ ಶಿಕ್ಷಣ ವಿವಿಧ ಉದ್ದೇಶಗಳಿಗಾಗಿ ಬೇರೆ ಕಡೆಗಳಿಗೆ ಹೋದರೂ ಕೂಡ ನಮ್ಮ ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು. ಈ ದೇಶದ ಸಂಸ್ಕೃತಿಗೆ ಸಿಗುವ ಸ್ಥಾನಮಾನ ಬೇರೆ ಎಲ್ಲಿಯೂ ಸಿಗುವುದಿಲ್ಲ ಎಂದು ಅವರು ಹೇಳಿದರು. 

ನಾಪೆÇೀಕ್ಲು ಜೂನಿಯರ್ ಕಾಲೇಜಿನ ಪ್ರಾಧ್ಯಾಪಕರು. ಕರ್ನಾಟಕ ಕನ್ನಡ ಜಾನಪದ ಪರಿಷತ್‍ನ ಜಿಲ್ಲಾ ಅಧ್ಯಕ್ಷರಾದ ಕಾವೇರಿ ಪ್ರಕಾಶ್ ಅವರು ಮಾತನಾಡಿ, ಜಾನಪದ ಸಂಸ್ಕೃತಿಯೂ ನಮ್ಮ ಹುಟ್ಟಿನೊಂದಿಗೆ ನಮಗೆ ಅಂಟಿಕೊಂಡು ಬಂದಿದೆ. ಜಾನಪದರು ಕೃಷಿ ಭೂಮಿಯನ್ನು ದೇವರೆಂದು ನೆನೆದು ಹಾಡುತ್ತಿದ್ದರು ಎಂದು ಅವರು ಹೇಳಿದರು.

ಜಾಗತಿಕ ವಿದ್ಯಾಮಾನದ ಬೆಳವಣಿಗೆಯಲ್ಲಿ ಈ ಮಣ್ಣಿನ ಜಾನಪದ ಸಂಸ್ಕೃತಿಯು ಮರೆಯಾಗುತ್ತಿದೆ. ಇದನ್ನು ಉಳಿಸಿ ಬೆಳೆಸುವ ಕೆಲಸ ನಮ್ಮೆಲ್ಲರ ಹೊಣೆಯಾಗಿದೆ. ಜಾನಪದವೇ ಸತ್ಯ ಜಾನಪದವೇ ನಿತ್ಯ ಎಂದು ಅವರು ಹೇಳಿದರು.

ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು ಮಾತನಾಡಿ, ಸರ್ವರನ್ನೂ ಸಮಾನವಾಗಿ ಗೌರವಿಸಬೇಕು. ಆ ಮೂಲಕ ಸಮಾನತೆಯ ಸಮಾಜ ನಿರ್ಮಾಣವಾಗಬೇಕು ಎಂಬುದೇ ಜಾನಪದದ ಮೂಲ ಕಲ್ಪನೆಯಾಗಿದೆ.  ಇದನ್ನು ಪರಿಪಾಲಿಸಿ ಯುವಪೀಳಿಗೆಯು  ಸಾಮರಸ್ಯದ ಜೀವನಕ್ಕೆ ನಾಂದಿ ಹಾಡುವುದರ ಜೊತೆಗೆ ಕುಟುಂಬ, ಪೆÇೀಷಕರು, ಶಿಕ್ಷಕರಿಗೆ ಗೌರವ ನೀಡಬೇಕೆಂದು ಕರೆ ನೀಡಿದರು.

ಜಾನಪದ ಕಲೆಗಳಿಗೆ ಇರುವ ಹಲವಾರು ಶತಮಾನಗಳ ಇತಿಹಾಸ ಯಾವುದೇ ಕಾರಣಕ್ಕೂ ನಶಿಸಿಹೋಗಬಾರದು ಎಂದೂ ಹೇಳಿದ ಅನಂತಶಯನ ಅವರು, ಕಲ್ಲು, ಗಿಡ, ಮರ, ಬೆಟ್ಟಗಳನ್ನೂ ದೇವರೆಂದು ನಂಬುವ ಜಾನಪದದ ಶಕ್ತಿಯೇ ಅನನ್ಯ ಎಂದರು.

ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ ಅವರು ಮಾತನಾಡಿ, ವಿಶ್ವದ ಎಲ್ಲಾ ದೇಶಗಳಲ್ಲಿಯೂ ಆಗಸ್ಟ್ 22 ರಂದು ಜಾನಪದ ದಿನಾಚರಣೆ ಆಚರಿಸಲಾಗುತ್ತಿದೆ. ಕರ್ನಾಟಕದಲ್ಲಿ ಕೊಡಗು ಜಿಲ್ಲೆಯಲ್ಲಿ ಮಾತ್ರ ಎಲ್ಲಾ 8 ಘಟಕಗಳೂ ಪ್ರತ್ಯೇಕವಾಗಿ ಜಾನಪದ ದಿನಾಚರಣೆ ಆಯೋಜಿಸಿರುವುದು ವಿಶೇಷವಾಗಿದ್ದು, 250 ಕ್ಕೂ ಅಧಿಕ ಸಕ್ರಿಯ ಸದಸ್ಯರು ಜಾನಪದ ಪರಿಷತ್‍ನಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರೀತಿ, ತಾಳ್ಮೆ, ಮಮತೆಗೆ ಕಾರಣವಾಗಿರುವ ಜಾನಪದ ಎಂದೂ ದ್ವೇμÁಸೂಯೆ ಕಲಿಸುವುದಿಲ್ಲ. ಜಾನಪದ ಮರೆತದ್ದೇ ಆದಲ್ಲಿ ಮನುಷ್ಯ, ಮನುಷ್ಯನ ನಡುವೆ ಕಂದಕ ಏರ್ಪಡುತ್ತದೆ ಎಂದರು. 

ಕೊಡಗು ಜಿಲ್ಲಾ ಜಾನಪದ ಪರಿಷತ್, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸರ್ಕಾರಿ ಜೂನಿಯರ್ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳ ಸಹಕಾರದೊಂದಿಗೆ ವಿನೂತನ ರೀತಿಯಲ್ಲಿ ಜಾನಪದ ದಿನಾಚರಣೆ ಆಯೋಜಿಸಿದೆ ಎಂದು ಅನಿಲ್ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಿಗ್ಗಾಲು ಗ್ರಾಮದ  ರಜನಿ ರಂಜಿತ್ ಅವರನ್ನು ಮಡಿಕೇರಿ ನಗರಸಭೆಯ ಉಪಾಧ್ಯಕ್ಷೆ, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ನಿರ್ದೇಶಕಿ ಸವಿತಾ ರಾಕೇಶ್ ಮತ್ತು ಜಾನಪದ ಪರಿಷತ್ ಪ್ರಮುಖರು ಸನ್ಮಾನಿಸಿದರು.

ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್, ಸರ್ವೋದಯ ಸಮಿತಿ ಜಿಲ್ಲಾ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ, ರೆಡ್‍ಕ್ರಾಸ್ ಸಂಸ್ಥೆಯ ರವೀಂದ್ರ ರೈ, ಖಜಾಂಜಿ ಎಸ್.ಎಸ್.ಸಂಪತ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉಜ್ವಲ್ ರಂಜಿತ್, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಕಾಲೇಜಿನ ಉಪ ಪ್ರಾಂಶುಪಾಲರಾದ ನಳಿನಿ, ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಶೇಖರ್, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

 ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಜಾನಪದ ಕಲಾವಿದರು ಆಕರ್ಷಕವಾದ  ಜಾನಪದ ಗೀತೆಯನ್ನು ಹಾಡಿದರು. ಶೋಭಾ ಸುಬ್ಬಯ್ಯ ಅವರು ಬ್ಯಾಂಡ್ ಬಾರಿಸುವುದರೊಂದಿಗೆ ಜನಪದ ಗೀತೆ ಹಾಗೂ ಜನಪದ ಕಲಾವಿದರಾದ ಪ್ರೇಮ ರಾಘವಯ್ಯ ಅವರು ರಾಗಿಕಲ್ಲಿನಲ್ಲಿ ರಾಗಿ ಬೀಸುವ ಮೂಲಕ ಜಾನಪದ ಹಾಡನ್ನು ಹಾಡಿ ಜನಪದ ದಿನಾಚರಣೆಯನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು.