Header Ads Widget

ಸರ್ಚ್ ಕೂರ್ಗ್ ಮೀಡಿಯ

ಸಾಧನೆ ಮತ್ತು ಪರಿಶ್ರಮದಿಂದ ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳಲು ಸಾಧ್ಯ


ಸಾಧನೆ ಮತ್ತು ಪರಿಶ್ರಮದಿಂದ ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳಲು ಸಾಧ್ಯ

ಮಡಿಕೇರಿ ಆ.29: ಸತತ ಸಾಧನೆ, ಪರಿಶ್ರಮದಿಂದ ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ರಾಷ್ಟ್ರೀಯ ಕ್ರೀಡಾಪಟು ಮತ್ತು ರಾಷ್ಟ್ರೀಯ ತರಬೇತುದಾರರಾದ ಅಂತೋನಿ ಡಿಸೋಜ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು  ಕ್ರೀಡಾ ಇಲಾಖೆ ಇದರ ವತಿಯಿಂದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್ ಹುಟ್ಟುಹಬ್ಬದ ಪ್ರಯುಕ್ತ  ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇತ್ತೀಚೆಗೆ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಅನೇಕ ಪದಕಗಳು ಬಂದಿವೆ. ಇನ್ನು ಮುಂದೆ ಬರುವ ಕ್ರೀಡಾಕೂಟದಲ್ಲಿ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಧನೆ ಮಾಡುವಂತಾಗಬೇಕು. ತಮ್ಮ ಗುರಿಯನ್ನು ಮುಟ್ಟಲು ದಿನನಿತ್ಯ ಪರಿಶ್ರಮ ಪಡಬೇಕು. ಯಾವ ಹಂತದಲ್ಲೂ ಕುಗ್ಗದೆ ಕ್ರೀಡಾ ಚಟುವಟಿಕೆಯಲ್ಲಿ ಮುನ್ನಡೆಯಬೇಕು ಎಂದರು. 

ನಾವು ಜಾಗತಿಕವಾಗಿ ಜನಸಂಖ್ಯೆಯಲ್ಲಿ ಮುಂಚೂಣಿಗೆ ಬರುತ್ತಿದ್ದೇವೆ. ಹಾಗೆಯೇ ಕ್ರೀಡಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಬೇಕು ಎಂದರು. ಕೊಡಗಿನಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿದ್ದಾರೆ ಎಂದು ನುಡಿದರು. 

ಮುಂದೆ ಹೆಚ್ಚು ಕ್ರೀಡಾಪಟುಗಳು ಸಾಧನೆಯನ್ನು ಮಾಡುವಂತಾಗಬೇಕು. ಮುಂದಿನ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಹೆಚ್ಚಿನ ಪದಕಗಳು ಬರುವಂತಾಗಲಿ ಎಂದು ಹಾರೈಸಿದರು. ಈ ಸಂದರ್ಭ ಹಾಕಿ ಮಾಂತ್ರಿಕರಾದ ಧ್ಯಾನ್‍ಚಂದ್ ಅವರ ಕಾರ್ಯದಕ್ಷತೆ, ಕ್ರೀಡಾ ಸ್ಪೂರ್ತಿಯನ್ನು ಮೆಲುಕು ಹಾಕಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ           ಜಿ.ಎಸ್.ಗುರುಸ್ವಾಮಿ ಅವರು ಹಾಕಿಯಲ್ಲಿ ಮೇಜರ್  ಧ್ಯಾನ್ ಚಂದ್ ಅವರು ದೇಶಕ್ಕೆ ಉತ್ತಮವಾದ ಕೊಡುಗೆ ನೀಡಿದ್ದಾರೆ. ಅವರ ಜೀವನಾದರ್ಶಗಳನ್ನು ಯುವಕ-ಯುವತಿಯರು ಮೈಗೂಡಿಸಿಕೊಳ್ಳಬೇಕು. ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವಂತಾಗಬೇಕು ಎಂದರು. 

ಎಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನನಿತ್ಯ ಕಾರ್ಯ ಚಟುವಟಿಕೆಯಿಂದ ಇರಬೇಕು. ಯಾವುದಾದರೂ ಚಟುವಟಿಕೆಯಲ್ಲಿ ನಿರತರಾಗಿದ್ದರೆ ಮಾತ್ರ ಸದೃಢ ಆರೋಗ್ಯಕರ ಜೀವನವು ಲಭಿಸುವುದು. ಕ್ರೀಡೆಯಲ್ಲಿ ಒಂದೆರಡು ಪ್ರಯತ್ನ ಮಾಡಿ ತ್ಯಜಿಸುವುದಲ,್ಲ ದಿನನಿತ್ಯ ಪರಿಶ್ರಮಪಟ್ಟು ಸಾಧನೆ ಮಾಡಬೇಕು ಎಂದರು.

ರಾಷ್ಟ್ರೀಯ ಕ್ರೀಡಾಪಟು ಮತ್ತು ಕ್ರೀಡಾ ತರಬೇತುದಾರರಾದ ಅಂತೋನಿ ಡಿಸೋಜ, ಕೆ.ಕೆ.ಬಿಂದ್ಯಾ ಮತ್ತು ಸುಬ್ಬಯ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಅಧೀಕ್ಷಕರಾದ ಕೃμÉ್ಣೂೀಜಿ, ಇತರರು ಇದ್ದರು. ಜಿ.ಎಸ್.ಗುರುಸ್ವಾಮಿ ಅವರು ಸ್ವಾಗತಿಸಿದರು, ಜಸ್ಮಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ತರಬೇತುದಾರರಾದ ಮಹಾಬಲ ವಂದಿಸಿದರು.