ಅತೀ ಸಣ್ಣ ಕೈಗಾರಿಕಾ ಪ್ರಾರಂಭಿಸಲು ಇಚ್ಚಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಮಡಿಕೇರಿ ಆ.22: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ 2022-23ನೇ ಸಾಲಿನ ವಿಶೇಷ ಘಟಕ ಯೋಜನೆ/ ಗಿರಿಜನ ಉಪ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಅಭ್ಯರ್ಥಿಗಳಿಗೆ ಅತೀ ಸಣ್ಣ ಕೈಗಾರಿಕಾ ಘಟಕವನ್ನು ಪ್ರಾರಂಭಿಸಲು ಶೇ.60 ರ ಸಹಾಯಧನ, ಸಾಫ್ಟ್ ಸೀಡ್ ಕ್ಯಾಪಿಟಲ್, ಸಾಲ ಸಂಸ್ಕರಣಾ ಶುಲ್ಕ ಮರುಪಾವತಿ ಹಾಗೂ ವಿದ್ಯುಚ್ಛಕ್ತಿ ತೆರಿಗೆ ಮರುಪಾವತಿ ಬಾಪ್ತುಗಳಡಿ ಆರ್ಥಿ ಸೌಲಭ್ಯ ಕಲ್ಪಿಸಲಾಗುವುದು.
ಆದ್ದರಿಂದ ಅತೀ ಸಣ್ಣ ಕೈಗಾರಿಕಾ ಪ್ರಾರಂಭಿಸಲು ಇಚ್ಚಿಸುವ ಅಭ್ಯರ್ಥಿಗಳು ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಹಿನೂರು ರಸ್ತೆ, ಮಡಿಕೇರಿ (ದೂ.ಸಂ.08272-228431/ 228746) ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network