Header Ads Widget

ಸರ್ಚ್ ಕೂರ್ಗ್ ಮೀಡಿಯ

ಆ.29 ರಂದು ದೇಶಭಕ್ತಿ ಗೀತೆ ಸ್ಪರ್ಧೆ

ಆ.29 ರಂದು ದೇಶಭಕ್ತಿ ಗೀತೆ ಸ್ಪರ್ಧೆ

ಮಡಿಕೇರಿ ಆ.22: ಸೋಮವಾಪೇಟೆ ತಾಲ್ಲೂಕು ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ 2022-23ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ 5 ರಿಂದ 16 ವರ್ಷದ ಮಕ್ಕಳಿಗೆ ವೈಯಕ್ತಿಕ ದೇಶಭಕ್ತಿ ಗೀತೆ ಸ್ಪರ್ಧೆಯು ಆಗಸ್ಟ್, 29 ರಂದು ಬೆಳಗ್ಗೆ 11 ಗಂಟೆಗೆ ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಆವರಣದ ಸ್ತ್ರೀಶಕ್ತಿ ಭವನ ಕಟ್ಟಡದಲ್ಲಿ ನಡೆಯಲಿದೆ. 

ಆಸಕ್ತ ಮಕ್ಕಳು ಸ್ಪರ್ಧೆಗೆ ಭಾಗವಹಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸೋಮವಾರಪೇಟೆ ದೂ.ಸಂ.08276-282281 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಎಂ.ಅಣ್ಣಯ್ಯ ಅವರು ತಿಳಿಸಿದ್ದಾರೆ.