ಅಬ್ಬೂರುಕಟ್ಟೆ ಜೇನು ಕುರುಬರ ಹಾಡಿಯಲ್ಲಿ ವೈದ್ಯಕೀಯ ತಪಾಸಣಾ ಶಿಬಿರ
ಸೇವಾಭಾರತಿ, ವನವಾಸಿ ಕಲ್ಯಾಣ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ, ಸೋಮವಾರಪೇಟೆ ಬಳಿಯ ಅಬ್ಬೂರುಕಟ್ಟೆ ಜೇನು ಕುರುಬರ ಹಾಡಿಯಲ್ಲಿ ವೈದ್ಯಕೀಯ ತಪಾಸಣಾ ಶಿಬಿರ ನಡೆಯಿತು. 68 ಮಂದಿ ಹಾಡಿಯ ಮತ್ತು ಸುತ್ತಲಿನ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು.
ಡಾ. ರೂಪೇಶ್ ಗೋಪಾಲ್ ರ ಮಾರ್ಗದರ್ಶನದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಒದಗಿಸಿದ ಔಷಧಗಳನ್ನು ಅವಶ್ಯಕತೆ ಇರುವವರಿಗೆ ವೈದ್ಯರ ಸಲಹೆಯ ಪ್ರಕಾರ ವಿತರಿಸಲಾಯಿತು.
ವೈದ್ಯ ವಿದ್ಯಾರ್ಥಿಗಳಾದ ಡಾ. ಸಹನಾರಾಜ್, ಡಾ. ಸಾಯಿಶ್ರೀ, ಡಾ. ಶಿವಪ್ರಸಾದ್, ಡಾ. ಲಿಖಿತ್ ಹಾಗೂ ನರ್ಸಿಂಗ್ ಅಸಿಸ್ಟೆಂಟ್ ಶ್ರೀ ಮಹೇಶ್ವರ ಇವರು ಸಮರ್ತವಾಗಿ ರೋಗಿಗಳ ತಪಾಸಣೆ, ಸೂಕ್ತ ಸಲಹೆಯೊಂದಿಗೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದರು.
ಸೇವಾಭಾರತಿ ಸಂಘಟನೆಯ ತಮ್ಮಪ್ಪಣ್ಣ ಶಿಬಿರದ ಉದ್ದೇಶ ತಿಳಿಸಿ ಎಲ್ಲರನ್ನೂ ವಂದಿಸಿದರು. ಹಾಡಿಯವರೊಂದಿಗೆ ಸಂಪರ್ಕವಿಟ್ಟುಕೊಂಡು ಎಲ್ಲರೂ ತಪಾಸಣೆಗೆ ಬರುವಂತೆ ವನವಾಸಿ ಕಲ್ಯಾಣದ ಶ್ರೀ ಹರೀಶ್‌ರವರ ಪ್ರಯತ್ನ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ದ ತಾಲೂಕು ಕಾರ್ಯವಾಹ ಶ್ರೀ ಸಂತೋಷ್‌ರವರರಿಂದ ಕಾರ್ಯಕರ್ತರಿಗೆ ಉಟೋಪಚಾರದ ವ್ಯವಸ್ಥೆಯನ್ನು ಸಮರ್ಪಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಶಿಬಿರದಲ್ಲಿ ಸೇವಾಭಾರತಿ ಸಂಘಟನೆಯ ಉಡೋತ್ ರಾಜು, ಮಹೇಶ್ ಕುಮಾರ್ ಉಪಸ್ಥಿತರಿದ್ದರು.
ಶಿಬಿರದ ಯಶಸ್ಸಿಗೆ ವ್ಯವಸ್ಥೆಗೆ ಸಹಕರಿಸಿದ ಡಾ. ರೂಪೇಶ್ ಗೋಪಾಲ್, ಡಾ.ರಾಮಚಂದ್ರ ಕಾಮತ್ ಹಾಗೂ ಎಲ್ಲರಿಗೂ ಸೇವಾಭಾರತಿ ಸಂಘಟನೆಯು ವಂದನೆಗಳನ್ನು ಸಲ್ಲಿಸಿತ್ತು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network