Header Ads Widget

Responsive Advertisement

ಕೋಟ್ಪಾ ಕಾಯ್ದೆ ಉಲ್ಲಂಘನೆ ಅನಿರೀಕ್ಷಿತ ಭೇಟಿ; ಪರಿಶೀಲನೆ


ಕೋಟ್ಪಾ ಕಾಯ್ದೆ ಉಲ್ಲಂಘನೆ ಅನಿರೀಕ್ಷಿತ ಭೇಟಿ; ಪರಿಶೀಲನೆ 

ಮಡಿಕೇರಿ ಆ.30: ನಗರದ ಅಂಗಡಿ ಮತ್ತು ಹೋಟೆಲ್‍ಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಹಾಗೂ ಕೋಟ್ಪಾ(COTPA)) ಕಾಯ್ದೆ ಉಲ್ಲಂಘನೆ ಕುರಿತು ಮಂಗಳವಾರ 13 ಅಂಗಡಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಯಿತು. 

ಸೆಕ್ಷನ್ 04 ಅಡಿಯಲ್ಲಿ 12 ಪ್ರಕರಣಗಳಿಗೆ ರೂ.1900 ದಂಡ ಹಾಗೂ ಸೆಕ್ಷನ್ 60 ಅಡಿಯಲ್ಲಿ 1 ಪ್ರಕರಣಕ್ಕೆ ರೂ 100 ವಿಧಿಸಿ,  ಒಟ್ಟು 14 ಪ್ರಕರಣಗಳಿಗೆ ರೂ.2000 ದಂಡ ವಿಧಿಸಿ ಆರೋಗ್ಯ ಶಿಕ್ಷಣ ಮಾಹಿತಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ನೀಡಿದರು.  

ಸಂಗ್ರಹಣೆಯಾದ ದಂಡವನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಜಂಟಿ ಖಾತೆಗೆ ಜಮೆ ಮಾಡಲಾಯಿತು. ಅನಿರೀಕ್ಷಿತ ಭೇಟಿ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಧಿಕಾರಿಗಳು, ಜಿಲ್ಲಾ ಸಮಾಜ ಕಾರ್ಯಕರ್ತರು, ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರು ಮತ್ತು ಪೆÇಲೀಸ್ ಇಲಾಖೆ ಸಿಬ್ಬಂಧಿಗಳು ಇದ್ದರು.