ಗೋಣಿಕೊಪ್ಪ ಕಾವೇರಿ ದಸರಾ ಸಮಿತಿಯ ವತಿಯಿಂದ 44ನೇ ವರ್ಷದ ಸಾಂಸೃತಿಕ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆ
26 ಸಪ್ಟೆಂಬರ್ ಇಂದ 4ನೇ ತಾರಿಕೀನವರೆಗೆ ನಡೆಯುವ ದಸರಾ ಸಾಂಸೃತಿಕ ಕಾರ್ಯಕ್ರಮದ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷರಾದ ಬಿ.ಎನ್.ಪ್ರಕಾಶ್ ರವರು ಈ ಬಾರಿ ಸಾಂಸೃತಿಕ ಕಾರ್ಯಕ್ರಮ ಮಾತ್ರವಲ್ಲದೆ, ಕ್ರೀಡೆ, ಗೋಣಿಕೊಪ್ಪ ನಗರವನ್ನು ಸಂಪೂರ್ಣವಾಗಿ ಅಲಂಕಾರ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ RMC ಇಂದ ಗೋಣಿಕೊಪ್ಪ ಟೌನ್ ರಸ್ತೆ ವರೆಗೆ 2 ಬದಿಗಳಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದೆ ಎಂದರು.
ತಮ್ಮ ಅಂಗಡಿ ಮುಂಗಟ್ಟುಗಳನ್ನು ದೀಪಾಲಂಕಾರ ಮಾಡಬೇಕೆಂದು ವರ್ತಕರಲ್ಲಿ ಕೋರಿದ ಬಿ.ಎನ್.ಪ್ರಕಾಶ್ ರವರು 10 ವಿಭಾಗದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದ್ದು, ಇದರ ಸಂಪೂರ್ಣ ಜವಾಬ್ದಾರಿ ಚೇಂಬರ್ ಆಫ್ ಕಾಮರ್ಸ್ ವಹಿಸಿಕೊಳ್ಳಲಿದ್ದು, ತೀರ್ಪುಗಾರರನ್ನು ಸಹ ಅವರೇ ನೇಮಿಸುತ್ತಾರೆ. ಎಂದು ಮಾಹಿತಿ ನೀಡಿದರು.
ಕೋರೋನ ಕಾರಣದಿಂದ 2 ವರ್ಷ ಸರಳ ದಸರಾ ನಡೆಸಲಾಗಿತ್ತು, ಅದರಿಂದ ಈ ವರ್ಷ ಅದ್ದೂರಿಯಾಗಿ ದಸರಾ ನಡೆಸಬೇಕೆಂದು ತೀರ್ಮಾನಿಸಲಾಗಿದೆ ಆದುದರಿಂದ ನಾಡಿನ ಜನತೆ ಎಲ್ಲರೂ ಆಗಮಿಸಿ ದಸರಾ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಬೇಕೆಂದು ಆಹ್ವಾನ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಜಪ್ಪು ಸುಬ್ಬಯ್ಯ, ಉಪಾಧ್ಯಕ್ಷರಾದ ಶಿವಾಜಿ, ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ರಾಮಕೃಷ್ಣ, ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಸುನಿಲ್ ಮಾದಪ್ಪ, ಖಜಾಂಜಿ ಗಾಂಧಿ, ಮತ್ತು ರಮೇಶ್ ಉಪಸ್ಥಿತರಿದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network