ಸಹಕಾರಿಗಳಿಂದಲೇ ಚೆಟ್ಟಳ್ಳಿ ಸಹಕಾರಸಂಘ ದೇಶದಲ್ಲೇ ಮಾದರಿಯಾಗಿದೆ; ಬಲ್ಲಾರಂಡ ಮಣಿ ಉತ್ತಪ್ಪ
ಚೆಟ್ಟಳ್ಳಿ ಸಹಕಾರ ಸಂಘದ ಮಾಹಾಸಭೆ
ಚೆಟ್ಟಳ್ಳಿ : ಸಂಘದ ಸದಸ್ಯರ ಸಂಪೂರ್ಣ ಸಹಕಾರವಿದ್ದರೆ ಸಹಕಾರ ಸಂಘ ಅಭಿವ್ರದ್ದಿಯತ ಸಾಗಲು ಸಾಧ್ಯವೆಂದು ಚೆಟ್ಟಳ್ಳಿ ಸಹಕಾರ ಸಂಘವೇ ದೇಶದಲ್ಲಿ ಮಾದರಿಯಾಗಿದೆ ಎಂದು ಚೆಟ್ಟಳ್ಳಿ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದರು.
ಚೆಟ್ಟಳ್ಳಿ ಸಹಕಾರ ಸಂಘ ಈ ಬಾರಿ 50ಲಕ್ಷ ಲಾಭಗಳಿಸಿದ್ದು ಸದಸ್ಯರಿಗೆ ಶೇ.15 ಡಿವಿಡೆಂಡು ಹಾಗು ಮಾಹಾಸಭೆಗೆ ಹಾಜರಾಗುವ ಸದಸ್ಯರಿಗೆ ರೂ 400 ಊಟದ ಭತ್ಯೆ ನೀಡುತೇವೆಂದರು.
ಚೆಟ್ಟಳ್ಳಿ ಸಹಕಾರ ಸಂಘಕ್ಕೆ ಜಾಗಖರೀದಿ, ನರೇಂದ್ರ ಮೋದಿ ಭವನ,ಪುಣ್ಯಕೋಟಿ ಭವನ, ಈರಳೆ ಶಾಖೆಯಲ್ಲಿ ಪಂಚಮುಖಿ ವಾಯು ಪುತ್ರ ವಾಣಿಜ್ಯ ಸಂಕೀರ್ಣ ಹಾಗು ವಸತಿಗ್ರಹ,ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ 5 ರೂಪಾಯಿಗೆ ನೀರಿನ ಘಟಕ, ಕಾಫಿ ಗುಣಮಟ್ಟ ಕೇಂದ್ರ , ಸಿಸಿ ಕ್ಯಾಮಾರಾ ಅಳವಡಿ ಸುವ ಮೂಲಕ ಸಹಕಾರ ಸಂಘದ ಮಾದರಿಯಾಗಿ ದೆ. ಸಂಘದ ಕೆಲವು ಸದಸ್ಯರು ಸಂಘದ ಮೇಲೆ ದಾವೆ ಹೂಡಿರುವುದರಿಂದ ರಾಜ್ಯ ಮಟ್ಟ ದಲ್ಲಿ ಗುರತಿಸ ಬೇಕಿದ್ದ ಚೆಟ್ಟಳ್ಳಿ ಸಹಕಾರ ಸಂಘಕ್ಕೆ ಹಿನ್ನಡೆ ಉಂಟಾ ಗಿದೆಂದು ಮಣಿ ಉತ್ತಪ್ಪ ಬೇಸರ ವ್ಯಕ್ತ ಪಡಿಸಿದರು.
ಚೋಳಪಂಡ ಕುಟುಂಬಸ್ಥರು 25 ಸೆಂಟು ಜಾಗವನ್ನು ದಾನ ನೀಡಿದ್ದ ಫಲವಾಗಿ ಈರಳೆ ಶಾಖೆ ಇದ್ದೂ ಸಂಘದ ಕಟ್ಟಡ ದುರಸ್ಥಿ ತಡೆಒಡ್ಡಿದರೂ ಕಟ್ಟಡ ಕಾರ್ಯ ಮುಗಿದಿದೆಂದರು. ಸಹಕಾರ ಸಂಘ ದಲ್ಲಿ ಸದಸ್ಯದಾರವೇ ಚೆಟ್ಟಳ್ಳಿ ಪಂಚಾಯಿತಿ ಸದಸ್ಯರಾಗಿದ್ದರೂ ಸಹಕಾರ ಸಂಘದ ಜಾಗಪಡೆಯಲು ತಡೆ ಒಡ್ಡುತಿದ್ದು ಮುಂದಿನ ದಿನ ಗಳಲ್ಲಿ ಕಾನೂನುನಿನ ಮೂಲಕ ಸಹಕಾರ ಸಂಘಕ್ಕೆ ಜಾಗಪಡೆದೇ ಪಡೆಯು ತೇವೆಂದರು. ರೈತರ ಹೆಸರಿನಲ್ಲಿ ಜಾಗದ ದಾಖಲೆ ಸರಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರಿಗೆ ಸರಕಾರದ ಸೌವಲತ್ತನ್ನು ಪಡೆಯಲು ತೊಂದರೆ ಯಾಗಲಿ ದೆಂದರು.
ಸಹಕಾರ ಸಂಘದಿಂದ ಪೆಟ್ರೋಲ್ ಬಂಕ್ ಸ್ಥಾಪನೆಗೆ ಹೆಚ್ಚಿನ ಹೊರೆ ಯಾಗುವುದರಿಂದ ಕೈಬಿಡಲಾಗಿದ್ದು ಮುಂದಿನ ದಿನಗಳಲ್ಲಿ ಡೆಯಾಲಿಸ್ ಕೇಂದ್ರ ಪ್ರಾರಂಭಿಸಲಾಗುವುದು.
ಚೆಟ್ಟಳ್ಳಿ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ ಸಂಘದ ಶ್ರೀ ನರೇಂದ್ರ ಮೋದಿ ರೈತ ಸಹಕಾರ ಭವನದಲ್ಲಿ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ನವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಮ್ರತ ಪಟ್ಟ ಸದಸ್ಯರುಗಳಿಗೆ ಸಂತಾಪಸೂಚಿಸಲಾಯಿತು.2020-213ನೇ ಸಾಲಿನ ಮಹಾಸಭೆಯ ನಡಾವಳಿಕೆಯ ಅಂಗಿಕಾರ, ಆಡಳಿತ ಮಂಡಳಿ ವರದಿ, ಮುಂದಿನ ಬಡ್ಜೆಟ್ ಅಂಗಿಕಾರ,ಮುಂದಿನಯೋಜನೆ,ನಿವ್ವಳ ಲಾಭದ ವಿಲೇವಾರಿ ಮಾಡಲಾ ಯಿತು. ಸಂಘದ ಮುಂದಿನ ಅಭಿವ್ರ ದ್ದಿಯ ಬಗ್ಗೆ ಚರ್ಚಿಸಲಾಯಿತು. ಸಹಕಾರ ಸಂಘಕ್ಕೆ ಮಣಿಉತ್ತಪ್ಪನವರ ನಿರಂತರ ಹೋರಾಟ ಹಾಗು ಸೇವೆಯ ಬಗ್ಗೆ ಉಪಾದ್ಯಾಕ್ಷರಾದ ಕಣಜಾಲು ಪೂವಯ್ಯನವರು ಶ್ಲಾಘಿಸಿದರು.
ಮುಖ್ಯಕಾರ್ಯನಿವಹಣಾಧಿಕಾರಿ ನಂದಿನಿ ಪ್ರಾರ್ಥಿಸಿ ಮಣಿಉತ್ತಪ್ಪ ಸ್ವಾಗತಿಸಿದರು. ಉಪಾದ್ಯಾಕ್ಷರಾದ ಕಣಜಾಲು ಪೂವಯ್ಯವಂದಿಸಿದರು.
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ನೂಜಿಬೈಲು ನಾಣಯ್ಯ, ಪುತ್ತರಿರ ಸೀತಮ್ಮ, ಕೊಗೇಟಿರ ವಾಣಿ ಕಾಳಪ್ಪ, ಪುತ್ತರಿರ ಶಿವುನಂಜಪ್ಪ, ಬಟೀರ ಅಪ್ಪಣ್ಣ, ಮರದಾಳು ಉಲ್ಲಾಸ, ಅಡಿಕೇರ ಜಯಾ, ಪೇರಿಯನ ಪೂಣಚ್ಚ, ಧನಂಜಯ,ಕಾಶಿ, ಆಂತರಿಕ ಲೆಕ್ಕಪರಿಶೋಧಕರಾದ ರಮೇಶ್, ಡಿಸಿಸಿ ಬ್ಯಾಂಕ್ ಪ್ರತಿನಿಧಿ ಜ್ಯೋತಿ ಹಾಜರಿದ್ದರು.
ಸನ್ಮಾನ :
✍️.... ಪುತ್ತರಿರ ಕರುಣ್ ಕಾಳಯ್ಯ
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network