Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡವ ನ್ಯಾಷನಲ್ ಕೌನ್ಸಿಲ್(CNC) ವತಿಯಿಂದ 28ನೇ ಸಾರ್ವತ್ರಿಕ ಕೈಲ್ ಪೊವ್ದ್ ನಮ್ಮೆ


ಕೊಡವ ನ್ಯಾಷನಲ್ ಕೌನ್ಸಿಲ್(CNC) ವತಿಯಿಂದ 28ನೇ ಸಾರ್ವತ್ರಿಕ ಕೈಲ್ ಪೊವ್ದ್ ನಮ್ಮೆ

ಮಡಿಕೇರಿ ಸೆ.1 : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ 28ನೇ ಸಾರ್ವತ್ರಿಕ ಕೈಲ್ ಪೊವ್ದ್ ನಮ್ಮೆ ಆಚರಣೆಯ ಸಂಭ್ರಮದಿಂದ ನಡೆಯಿತು. ನಗರದ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್  ಕೊಡವರ ಬೇಡಿಕೆಗಳಿಗೆ ಸ್ಪಂದಿಸುವ ಅಗತ್ಯವಿದೆ ಎಂದರು. ಕೊಡಗು ಜಿಲ್ಲೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರದ ಅಗತ್ಯವಿದೆ, ಕೊಡಗಿನ ಸಂಸದರೊಬ್ಬರು ಸಂಸತ್ ನಲ್ಲಿದ್ದರೆ ಜಿಲ್ಲೆಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಬಹುದಾಗಿದೆ. ದೇಶದ ಕೆಲವು ರಾಜ್ಯಗಳಲ್ಲಿ ಎರಡು, ಎರಡೂವರೆ ಲಕ್ಷ ಜನಸಂಖ್ಯೆ ಇರುವ ಜಿಲ್ಲೆಗೂ ಪ್ರತ್ಯೇಕ ಲೋಕಸಭಾ ಸ್ಥಾನ ನೀಡಲಾಗಿದೆ. ಕೊಡಗಿನಲ್ಲಿ ನಾಲ್ಕೂವರೆ ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದು, ಲೋಕಸಭಾ ಕ್ಷೇತ್ರವನ್ನು ನೀಡುವ ಅನಿವಾರ್ಯತೆ ಇದೆ ಎಂದರು.

ಕೊಡಗು ಶೌರ್ಯದ ನಾಡು, ಜೀವನದಿ ಕಾವೇರಿಯ ನೆಲೆಬೀಡು. ಪ್ರತ್ಯೇಕ ರಾಜ್ಯವಾಗಿದ್ದ ಕೊಡಗು ಸ್ವಾತಂತ್ರö್ಯ ನಂತರ ಜಿಲ್ಲೆಯಾಗಿ ರೂಪುಗೊಂಡಿತು. ಕಾವೇರಿ ನದಿ ತುಂಬಿ ಹರಿಯುವಾಗ ಕೊಡಗು ಹಲವು ಕಷ್ಟ, ನಷ್ಟಗಳನ್ನು ಅನುಭವಿಸುತ್ತದೆ. ಆದರೆ ಹೊರಗಿನ ಜನ ಕಾವೇರಿ ನೀರಿನಿಂದ ಲಾಭ ಪಡೆಯುತ್ತಾರೆ. ಕಾವೇರಿ ಋಣ ಪ್ರತಿಯೊಬ್ಬರ ಮೇಲಿದೆ, ಜಿಲ್ಲೆಯನ್ನು ಮೂಲಭೂತ ಕೊರತೆಗಳು ಕಾಡುತ್ತಿವೆ ಎನ್ನುವ ಕೊರಗಿದೆ. ಇದರೊಂದಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ಕೂಡ ಇಲ್ಲದಾಗಿದೆ. ಮಂಗಳೂರು ಕ್ಷೇತ್ರದೊಂದಿಗಿದ್ದ ಕೊಡಗು ಇದೀಗ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ.

ಕೊಡಗಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಕೇಂದ್ರಕ್ಕೆ ಮನದಟ್ಟು ಮಾಡಿಕೊಡಲು ಪ್ರತ್ಯೇಕ ಲೋಕಸಭಾ ಕ್ಷೇತ್ರದ ಅಗತ್ಯವಿದೆ ಎಂದು ವಿಶ್ವನಾಥ್ ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವರು ಬೇಟೆ ಮತ್ತು ಸಮರ ಕೌಶಲ್ಯವನ್ನು ರಕ್ತಗತವಾಗಿ ಅಂತರ್ಗತ ಮಾಡಿಕೊಂಡ ಯೋಧ ಸಮುದಾಯದವರಾಗಿದ್ದಾರೆ ಎಂದರು. ಕೊಡವರು ತಮ್ಮದೇ  ಆದ ಸೂಕ್ಷ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಒಳಕೋಶಗಳನ್ನ ಹೊಂದಿದ್ದಾರೆ.

ಮಾನವ ಕುಲ ಸೃಷ್ಟಿಯಾದಾಗಲೇ ಈ ನೆಲದಲ್ಲಿ ಉತ್ಪತ್ತಿಯಾದ ಕೊಡವ ಕುಲ ಮತ್ತು ಈ ಭೂ ಮಂಡಲ ಸೃಷ್ಟಿಯೊಂದಿಗೆ ಉದ್ಭವವಾದ ಕೊಡವ ಜನ್ಮ ಭೂಮಿ ಸೂರ್ಯ–ಚಂದ್ರರಷ್ಟೆ ಪ್ರಾಚೀನವಾಗಿದೆ. ಕೊಡವ ಮೂಲ ವಂಶಸ್ಥರ ಧಾರ್ಮಿಕ ಸಂಸ್ಕಾರವಾದ ತೋಕ್/ಗನ್‌ ಒಂದಕ್ಕೊಂದು ಬೆಸುಗೆಯಾಗಿದೆ. ಕೊಡವರ ಪ್ರಾಚೀನತೆಯು ಮತ್ತು ಕೊಡವರ ಪೂರ್ವಜತೆಯು ಈ ಮೇಲ್ಕಾಣಿಸಿದ ಪವಿತ್ರ ಸಿದ್ದಾಂತಗಳೊಂದಿಗೆ ತಳಕು ಹಾಕಿದೆ ಎಂದು ಇಡೀ ಜಗತ್ತಿಗೆ ತೋರಿಸಲು ಮತ್ತು ಆ ಮೂಲಕ ರಾಜ್ಯಾಂಗ ಖಾತ್ರಿಯ ಸ್ವೀಕಾರಕ್ಕಾಗಿ ಕೊಡವರ ಎಲ್ಲಾ ಜನಪದೀಯ ಹಬ್ಬ ಹರಿದಿನಗಳನ್ನು ಮತ್ತು ಧಾರ್ಮಿಕ ಸಂಸ್ಕಾರಗಳನ್ನು ಸಿ.ಎನ್.ಸಿ ತನ್ನಆಂದೋಲನದೊಂದಿಗೆ ಸಾರ್ವತ್ರಿಕಗೊಳಿಸಿದೆ ಎಂದರು.

ಜನಮಾನಸದಲ್ಲಿ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಮತ್ತು ಸರ್ಕಾರಕ್ಕೆ ನಮ್ಮ ಆಶೋತ್ತರಗಳನ್ನು ಪರಿಗಣಿಸುವ ಸಲುವಾಗಿ ಶಾಂತಿಯುತವಾಗಿ ಕಳೆದ ಮೂರು ದಶಕಗಳಿಂದ ಹಕ್ಕೊತ್ತಾಯ ಮಂಡಿಸುತ್ತಾ ಬಂದಿದ್ದೇವೆ. ಮೂರು ಸಿದ್ಧಾಂತಗಳೆಂದರೆ, ನಮ್ಮ ಪ್ರಾಚೀನ ಜನಾಂಗೀಯ ಹೆಗ್ಗುರುತು, ನಮ್ಮಜನ್ಮ ಭೂಮಿ ಮತ್ತು ನಮ್ಮ ಧಾರ್ಮಿಕ ಸಂಸ್ಕಾರ ಅರ್ಥಾತ್ ನೆಲೆ-ನೆಲ, ಕೊಡವ ಜನಾಂಗ ಮತ್ತು ಬಂದೂಕು. ಇದು ಒಂದಕ್ಕೊಂದು ಬಿಡಿಸಲಾಗದ ಅವಿನಾಭಾವ ಸಂಬಂಧದಿಂದ ಕೂಡಿದ್ದು, ನಮ್ಮಆತ್ಮ ಮತ್ತು ಹೃದಯವಿದ್ದಂತೆ ಇದು ಯಾವುದಾದರೊಂದನ್ನು ಕಳೆದುಕೊಂಡರೂ ಆಪತ್ತು ಎದುರಾಗಲಿದೆ ಎಂದು ನಾಚಪ್ಪ ಹೇಳಿದರು. ಇದೆಲ್ಲವನ್ನು ಪ್ರಾಚೀನ ಆದರ್ಶ ಮತ್ತು ಇಂದಿನ ವಾಸ್ತವಗಳ ಸಮತೋಲನ ಕಾಯ್ದುಕೊಂಡು ಶಾಸನ ಬದ್ಧವಾಗಿ ರಕ್ಷಿಸಿ ಉಳಿಸುವ ಸಲುವಾಗಿ 20ನೇ ಶತಮಾನದ ಅತೀ ಶ್ರೇಷ್ಟರಾಜಕೀಯ ಮುತ್ಸದ್ಧಿಯಾದ ಡಾ.ಬಿ.ಆರ್.ಅಂಬೇಡ್ಕರ್‌ ಅವರು ರಚಿಸಿದ ಪವಿತ್ರ ಸಂವಿಧಾನದ ಅಡಿಯಲ್ಲಿ ಜೋಪಾನ ಮಾಡಬೇಕಾಗಿದೆ ಎಂದರು. ಸಭೆಯಲ್ಲಿ ಈ ಕೆಳಗಿನ ಪ್ರಧಾನ ಹಕ್ಕೋತ್ತಾಯಗಳು ಮತ್ತು ಆಶೋತ್ತರಗಳ ಕುರಿತು ನಿರ್ಣಯ ಕೈಗೊಳ್ಳಲಾಯಿತು.

1. ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯನ್ನ ಸಂವಿಧಾನ 371 (ಕೆ) ವಿಧಿಯನ್ವಯ ಸ್ಥಾಪಿಸಬೇಕು. ಆಂತರಿಕರಾಜಕೀಯ ಸ್ವಯಂ ನಿರ್ಣಯ ಹಕ್ಕು ದಕ್ಕಬೇಕು.

2. ಕೊಡವ ಮೂಲ ವಂಶಸ್ಥ ರೇಸ್‌ಗೆ ಸಂವಿಧಾನದ 340 ಮತ್ತು 342ನೇ ವಿಧಿಯನ್ವಯರಾಜ್ಯಾಂಗಖಾತ್ರಿ ನೀಡಬೇಕು.

3. ಪ್ರಾಚೀನವು ಸಂಮೃದ್ಧವೂ ಮತ್ತು ಶ್ರೀಮಂತವೂ ಆದ ಕೊಡವ ತಕ್ಕನ್ನ ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು.

4. ಕೊಡವರಧಾರ್ಮಿಕ ಸಂಸ್ಕಾರಗನ್/ತೋಕ್‌ಗೆ ಸಿಖ್ ಸಮುದಾಯದ ಕಿರ್ಪಾಣ್ ಮಾದರಿಯಲ್ಲಿ ಸಂವಿಧಾನದ 25 ಮತ್ತು 26ನೇ ವಿಧಿ ಪ್ರಕಾರ ಶಾಶ್ವತ ಭದ್ರತೆ ಒದಗಿಸಬೇಕು.

5. ಕೊಡವಜನಪದ ಮತ್ತು ಸಾಂಸ್ಕೃತಿಕ ಪರಂಪರೆಯನ್ನ ವಿಶ್ವರಾಷ್ಟç ಸಂಸ್ಥೆಯ ಯುನೆಸ್ಕೊದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕು.

6. ಜೀವ ನದಿ ಮತ್ತುಜಲಧಾತೆಕಾವೇರಿಗೆ ಲೀವಿಂಗ್‌ಎಂಟಿಟಿ ವಿತ್ ಲೀಗಲ್ ಪರ್ಸನ್ ಸ್ಟೇಟಸ್ (ಜೀವಂತಅಸ್ಥಿತ್ವ ಮತ್ತುಕಾನೂನಾತ್ಮಕ ವ್ಯಕ್ತಿ) ಸ್ಥಾನಮಾನ ನೀಡಿ ಸಂರಕ್ಷಿಸಬೇಕು. ಕಾವೇರಿ ನದಿ ನೀರಿನ ಸಿಂಹ ಪಾಲು ಕೊಡಗಿನ ಬಳಕೆಗೆ ನೀಡಬೇಕು. ದೈವೀ ಸ್ವರೂಪಿಣಿಕಾವೇರಿಯಉದ್ಭವ ಸ್ಥಳ (ಜನ್ಮ ಸ್ಥಳ)ವನ್ನು ಯಹೂದಿಗಳ ಜೆರೋಸೆಲಂನ ಮೌಂಟ್ ಮೊರಯ್ಯ ಮಾದರಿಯಲ್ಲಿಕೊಡವರ ಪ್ರಧಾನ ತೀರ್ಥಕ್ಷೇತ್ರವೆಂದು ಸರ್ಕಾರ ಪರಿಗಣಿಸಬೇಕು.

7. ಅರಮನೆ ಪಿತೂರಿಯಲ್ಲಿ 201 ವರ್ಷಗಳ ಕಾಲ ಸತತ ಕೊಡವರ ರಾಜಕೀಯ ಹತ್ಯೆ ನಡೆದ ನಾಲ್ನಾಡ್‌ಅರಮನೆ ಮತ್ತು ಮಡಿಕೇರಿ ಕೋಟೆಗಳಲ್ಲಿ ಸ್ಮಾರಕಗಳನ್ನು ನಿರ್ಮಿಸಬೇಕು. 32 ಬಾರಿ ಆಕ್ರಮಣಕಾರರ ವಿರುದ್ಧ ನಡೆದ ಪರಿಣಾಮಕಾರಿ ಯುದ್ಧದಲ್ಲಿ ಭಾಗಿಯಾದ ಕೊಡವರ ನೆನಪಿಗಾಗಿ ಸುಂಟಿಕೊಪ್ಪ ಉಲುಗುಲಿಯಲ್ಲಿ ಮತ್ತು ಕುಶಾಲನಗರದ ಮುಳ್ಳುಸೋಗೆಯಲ್ಲಿ ಯುದ್ಧ ಸ್ಮಾರಕಗಳನ್ನ ಕೊಡವರ ಪರಾಕ್ರಮದ ಸಂಸ್ಮರಣೆಗಾಗಿ ಸ್ಥಾಪಿಸಬೇಕು. ಸಂವಿಧಾನದ 49ನೇ ವಿಧಿ ಹಾಗು ವೆನೀಸ್‌ಚಾರ್ಟರ್ 7 ರನ್ವಯ ಅಂತರಾಷ್ಟ್ರೀಯ ಕೊಡವ ನರಮೇಧ ಸಮಾಧಿಯನ್ನದೇವಾಟ್ ಪರಂಬ್‌ನಲ್ಲಿ ನಿರ್ಮಿಸಬೇಕು. ಈ ಎರಡು ದುರಂತಗಳನ್ನ ವಿಶ್ವರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಹತ್ಯಾಕಾಂಡ (ಹೋಲೋಕಾಸ್ಟ್) ಸ್ಮರಣೆ ಪಟ್ಟಿಯಲ್ಲಿ ಸೇರಿಸಬೇಕು.

8. ಕೊಡವಜನಸಂಖ್ಯಾ ಶಾಸ್ತ್ರ ಏರುಪೇರಾಗಿ ಬುಡಮೇಲಾಗುವ ಸ್ಥಿತಿಯನ್ನು ತಪ್ಪಿಸಲು ಹಾಗು ಕೊಡವರ ಪೂರ್ವಾಜಿತ ಸಮುದಾಯಿಕ ಭೂಮಿಗಳನ್ನು, ಕೊಡವರಆಧ್ಯಾತ್ಮಿಕ -ಪಾರಮಾರ್ತ್ರಿಕ ನೆಲೆಗಳಾದ “ಮಂದ್”ಗಳನ್ನು ದೇವಕಾಡ್‌ಗಳನ್ನು ಮತ್ತು ಕೊಡವ ಸಮುದಾಯ ಪವಿತ್ರ ಗರ್ಭಗುಡಿಗಳೆಂದು ಪರಿಗಣಿಸಿರುವ ತೂಟ್‌ಂಗಳ-ಕ್ಯಾಕೊಳ, ಮಚನಿ ಕಾಡುಗಳನ್ನು, ಗೆಜ್ಜೆತಂಡ್, ಸಾಂಪ್ರದಾಯಿಕಕಾಯ್ದೆ, ಜನಪದ ಕಾಯ್ದೆಗಳನ್ನ ಹಾಗು ಈ ನೆಲದಲ್ಲಿ ಕೊಡವರ ಶಾಶ್ವತ ಚಾರಿತ್ರಿಕ ನಿರಂತರತೆ–ಮುಂದುವರಿಕೆಗಾಗಿ ಭಾರತದ ಈಶಾನ್ಯ ರಾಜ್ಯಗಳ ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಿಜೋರಾಮ್‌ಗಳ ಮಾದರಿಯಲ್ಲಿಇನ್ನರ್ ಲೈನ್ ಪರ್ವಿಟ್ (ಐಎಲ್‌ಪಿ) ಅನುಷ್ಠಾನಗೊಳಿಸಬೇಕು.

9. ಸಂವಿಧಾನದ ವಿಶೇಷ ಖಾತರಿಯನ್ನುಕೊಡವರರಾಜಕೀಯ ಮತ್ತುಆರ್ಥಿಕ ಸ್ವಾತಂತ್ರ್ಯಕ್ಕಾಗಿ ನೀಡಬೇಕು ಎಂದು ಒತ್ತಾಯಿಸಲಾಯಿತು.

ಕೈಲ್ ಪೊವ್ದ್ ಸಂಭ್ರಮ:

ತೋಕ್ ಮತ್ತು ಒಡಿಕತ್ತಿಗಳನ್ನು ತೋಕ್‌ಪೂ”ನಿಂದಸಿಂಗರಿಸುವ ಮೂಲಕ ಕ್ಯಾಪಿಟಲ್‌ವಿಲೇಜ್“ ಮಂದ್”ನಲ್ಲಿ ಸಾಂಸ್ಕೃತಿಕ ವಿಧಿವಿಧಾನಗಳ ಮೂಲಕ ಗೌರವಾರ್ಪಣೆ ಸಲ್ಲಿಸಿ, ಗುರು -ಕಾರೋಣರಿಗೆಮೀದಿ/ನೈವೇದ್ಯ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿದುಡಿಕೊಟ್ಟ್ ಪಾಟ್, ಮಹಿಳೆಯರು ಮತ್ತು ಪುರುಷರಿಗೆತೆಂಗೆಬೊಡಿ ಸ್ಪರ್ಧೆ ನಡೆಯಿತು.ಸಭಾ ಕಾರ್ಯಕ್ರಮದ ನಂತರ ಕೊಡವ ಸಾಂಪ್ರದಾಯಿಕ ಅಡುಗೆಯನ್ನು ಬಡಿಸಲಾಯಿತು. ಮುಕ್ಕೋಡ್ಲು ವ್ಯಾಲಿಡ್ಯೂ ಸಾಂಸ್ಕೃತಿಕ ಕಲಾತಂಡದಿಂದ ಕತ್ತಿಯಾಟ್, ಕೋಲಾಟ್, ಪೀಲಿಯಾಟ್‌ ನೃತ್ಯದೊಂದಿಗೆ ಮಹಿಳೆಯರು ಪುರುಷರುತೋಕ್ ಪ್ರದರ್ಶನದ ನೃತ್ಯ ಕೂಡ ನಡೆಯಿತು.

ಪುಲ್ಲೇರ ಸ್ವಾತಿ ಕಾಳಪ್ಪ, ಲೆಪ್ಟಿನೆಂಟ್‌ ಕರ್ನಲ್ ಪಾರ್ವತಿ, ಅರೆಯಡ ಸವಿತ, ಬೊಟ್ಟಂಗಡ ಸವಿತ, ಚೋಳಪ್ಪಂಡ ಜ್ಯೋತಿ, ನಂದಿನೆರವಂಡ ನಿಶ, ಐಲಪಂಡ ಉನ್ನತಿ, ಐಲಪಂಡ ಉದಿತಿ, ಐಲಪಂಡ ಪೂವಮ್ಮ, ಕರವಂಡ ಸರಸು, ಕೊಟ್‌ಕತ್ತಿರ ದಿವ್ಯರೋಷನ್, ಕಲಿಯಂಡ ಪ್ರಕಾಶ್, ಬಾಚಿರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಬೇಪಡಿಯಂಡ ಬಿದ್ದಪ್ಪ, ಪುಲ್ಲೇರ ಕಾಳಪ್ಪ, ಮಂದರೀರ ಕರುಂಭಯ್ಯ, ಕೊಡಂದೇರ ಸುಬ್ಬಯ್ಯ, ಜಮ್ಮಡ ಮೋಹನ್, ಪಾರುವಂಗಡ ನವೀನ್, ಚಂಬಂಡ ಜನತ್, ಕೊರಿಮಂಡ ದಿನಮಣಿ, ಪುಳ್ಳಂಗದ ನಟೇಶ್ ಐಲಪ್ಪಂಡ ಮಿಟ್ಟು, ಮಣುವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ದೇವಯ್ಯ, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್‌, ಕೂಪದಿರ ಸಾಬು, ಬೊಜ್ಜಂಗಡ ನಂದ, ಅಪ್ಪಾರಂಡ ಪ್ರಸಾದ್, ಪಾಲೇಕಂಡ ಪ್ರತಾಪ್, ಮಂಡಪಂಡ ಮನೋಜ್, ಮಂದಪಂಡ ಸೂರಜ್, ಬೊಟ್ಟಂಗಡ ಜಯಂತ್ ಬೋಪಣ್ಣ, ಅಂಚೆಟ್ಟಿರ ಮನುಮುದ್ದಪ್ಪ, ಮಂದಪಂಡ ಮನೋಜ್, ನಂದಿನೆರವಂಡ ವಿಜು, ನಂದಿನೆರವಂಡ ಬೋಪಣ್ಣ, ನಂದಿನೆರವಂಡ ಅಪ್ಪಯ್ಯ, ನಂದಿನೆರವಂಡ ಮಧು, ಬೇಪಡಿಯಂಡ ದಿನು, ಅಜ್ಜಿಕುಟ್ಟಿರ ಅಪ್ಪಯ್ಯ ಚಂಡೀರರಾಜ, ಐಲಪಂಡ ರಂಜನ್, ಕಿರಿಯಮಾಡ ಶರೀನ್, ಚೋಳಪಂಡ ನಾಣಯ್ಯ, ಅಪ್ಪೆಯಂಗಡ ಮಾಲೆ ಪೂಣಚ್ಚ, ಮಂಡಪಂಡ ಸೂರಜ್, ಐಯಂಡ ಮಾದಪ್ಪ, ನಂದಿನೆರವಂಡ ದಿನೇಶ್‌ ಭಾಗಹವಹಿಸಿದ್ದರು. ಸೂರ್ಯ–ಚಂದ್ರ, ಭೂತಾಯಿ, ಜಲದೇವತೆ, ವನದೇವಿ ಮತ್ತು ಪರ್ವತದೇವಿ ಹಾಗೂ ಸಂವಿಧಾನದ ಹೆಸರಿನಲ್ಲಿ ಸಿ.ಎನ್.ಸಿ ಯ ಹೋರಾಟದಲ್ಲಿ ಭಾಗವಹಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.