Header Ads Widget

Responsive Advertisement

ಗ್ರಾಮ ಒನ್ ಸೇವೆ ಪಡೆದುಕೊಳ್ಳಲು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಕೋರಿಕೆ


ಗ್ರಾಮ ಒನ್ ಸೇವೆ ಪಡೆದುಕೊಳ್ಳಲು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಕೋರಿಕೆ

ಮಡಿಕೇರಿ ಸೆ.05: ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ಮುಖ್ಯಮಂತ್ರಿ ಅವರಿಂದ ಯಶಸ್ವಿಯಾಗಿ ಚಾಲನೆಗೊಂಡ ಗ್ರಾಮ ಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಎಲ್ಲಾ ಕೇಂದ್ರಗಳಲ್ಲಿ ‘ಅಭಾ” ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ಸ್(ಎಬಿಎಚ್‍ಎ) ಕಾರ್ಡ್ ಕಲ್ಪಿಸಲಾಗುತ್ತದೆ. 

ಈ ಯೋಜನೆಯನ್ವಯ ಭಾರತೀಯರು ತಮ್ಮ ಆರೋಗ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿ, ಸಂಗ್ರಹಿಸಲು ಅವಕಾಶ ಸಿಗಲಿದೆ. ಈ ಯೋಜನೆಯನ್ವಯ ಎಲ್ಲಾ ಭಾರತೀಯರು 14 ಅಂಕಿಗಳ ವಿಶಿಷ್ಟ ಆರೋಗ್ಯ ಗುರುತಿನ ಸಂಖ್ಯೆಯನ್ನು(Health identification number)  ಪಡೆಯಲಿದ್ದಾರೆ. ಈ ವೈಯಕ್ತಿಕ ಗುರುತಿನ ಸಂಖ್ಯೆಯನ್ನು ಬಳಸಿಕೊಂಡು ವೈದ್ಯರು ಮತ್ತು ವೈದ್ಯಕೀಯ ಸೇವಾ ಸಂಸ್ಥೆಗಳು ಹಿಂದಿನ ಚಿಕಿತ್ಸಾ ವಿವರಗಳನ್ನು ಪರಿಶೀಲಿಸಬಹುದು.

ಎಬಿಎಚ್‍ಎ ಕಾರ್ಡ್ ಅನ್ನು ನಾಗರಿಕರು ಯಾವುದೇ ವೆಚ್ಚವಿಲ್ಲದೆ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಡಿಜಿಟಲ್ ಹೆಲ್ತ್ ರೆಕಾರ್ಡ್/ ಅಭಾ ಕಾರ್ಡ್ ಸಂಖ್ಯೆಯನ್ನು ರೂಪಿಸಿಕೊಳ್ಳಬಹುದಾಗಿದೆ. ಆದ್ದರಿಂದ ಈ ಯೋಜನೆಯ ಅವಶ್ಯಕತೆಯನ್ನು ಪಡೆದುಕೊಳ್ಳುವ ಕುರಿತು ತಮ್ಮ ಶಾಲಾ ಹಾಗೂ ಕಾಲೇಜು ವ್ಯಾಪ್ತಿಯ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಈ ಯೋಜನೆಯನ್ನು ಹತ್ತಿರದ ಗ್ರಾಮ ಒನ್ ಕೇಂದ್ರಗಳ ಪ್ರಾಂಚೈಸಿಗಳ ಮೂಲಕ ಪಡೆದುಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಕೋರಿದ್ದಾರೆ.