ಇತ್ತೀಚೆಗೆ ನಡೆದ "ಕೊಡವ ತಕ್ಕಾಫ್-2022" ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ "ಕೊಡಗ್ ಕೂಟ" ತಂಡ ಪ್ರಥಮ ಬಹುಮಾನ ಪಡೆದುಕೊಂಡಿದೆ.
ಏಳು ದೇಶಗಳ ನಡುವಿನ ಈ ಅಂತರಾಷ್ಟ್ರೀಯ ಕೊಡವ ತಕ್ಕಾಫ್ ಪೈಪೋಟಿಯಲ್ಲಿ ವಿವಿಧ ದೇಶದ ಏಳು ತಂಡಗಳು ಭಾಗವಹಿಸಿ ಕೊಡಗು ತಂಡ ಪ್ರಥಮ ಬಹುಮಾನ ಪಡೆದುಕೊಂಡರೆ, ಯು.ಎಸ್.ಎ ತಂಡ ದ್ವಿತೀಯ ಹಾಗೂ ಮಿಡಲ್ ಈಸ್ಟ್ ತಂಡ ತೃತೀಯ ಬಹುಮಾನವನ್ನು ಪಡೆದುಕೊಂಡಿದೆ.
ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಜಾಲ ಮಾಧ್ಯಮದಲ್ಲಿ ಬಲ್ಲಚಂಡ ನೈನಾ ಹಾಗೂ ಮರ್ಕರ ಹೋಮ್ ಆಫೀಸ್ ಆಯೋಜಿಸುತ್ತಿರುವ "ಕೊಡವ ತಕ್ಕಾಫ್" ಪೈಪೋಟಿಯಲ್ಲಿ ಮೊದಲ ವರ್ಷವೇ ಕೊಡಗು ತಂಡ ಜಯಗಳಿಸಿದ್ದರೆ, ಈ ಬಾರಿ ಕೂಡ ಕೊಡಗು ತಂಡ 20 ಅಂಕಗಳ ಅಂತರದಲ್ಲಿ "ಕೊಡವ ತಕ್ಕಾಫ್-2022" ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಅಕ್ಟೋಬರ್ 1ರಂದು ಹಾಗೂ ಅಕ್ಟೋಬರ್ 9ರಂದು ನಡೆದ ಎರಡು ಹಂತದ ಪೈಪೋಟಿಯಲ್ಲಿ ಕೊಡಗು ತಂಡದ ಪರ ಬಾಳೆಯಡ ದಿವ್ಯಾ ಮಂದಪ್ಪ ನೇತೃತ್ವದಲ್ಲಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಮುಲ್ಲೇಂಗಡ ಮಧೋಶ್ ಪೂವಯ್ಯ, ಬೊಳ್ಳಾಜೀರ ಯಮುನಾ ಅಯ್ಯಪ್ಪ ಹಾಗೂ ಚಮ್ಮಟೀರ ಪ್ರವೀಣ್ ಉತ್ತಪ್ಪ ಭಾಗವಹಿಸಿದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network