ಸಕಾಲಕ್ಕೆ ಸ್ಪಂದಿಸಿದ ಮಡಿಕೇರಿ ನಗರ ಸಭಾ ಆಯುಕ್ತರು; ಸಾರ್ವಜನಿಕರಿಂದ ಪ್ರಶಂಸೆ
ಮಡಿಕೇರಿ: ನಗರದ ಮೈಸೂರು ರಸ್ತೆಯಿಂದ ಪುಟಾಣಿ ನಗರಕ್ಕೆ ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಮನೆ ನಿವೇಶನಕ್ಕೆ ಸಮತಟ್ಟು ಮಾಡಲು ಜೆ.ಸಿ.ಬಿ.ಯಿಂದ ಮಣ್ಣನ್ನು ಅಗೆದು ಅದನ್ನು ಟ್ರ್ಯಾಕ್ಟರ್ ಮುಖಾಂತರ ರಸ್ತೆಯಲ್ಲಿ ಸಾಗಿಸುವ ಸಂದರ್ಭ ಅಲ್ಲಲ್ಲಿ ಮಣ್ಣನ್ನು ಚೆಲ್ಲಿದ್ದಾರೆ.
ಮಳೆ ಬಂದ ಕಾರಣ ರಸ್ತೆ ತುಂಬಾ ಕೆಸರು ಮಯವಾಗಿ ರಸ್ತೆಯಲ್ಲಿ ಸಾರ್ವಜನಿಕರು ನಡೆದಾಡಲು ಸಾಧ್ಯವಾಗದಂತ ಪರಿಸ್ಥಿತಿ ತಲೆದೊರಿತ್ತು. ಹಾಗೆ ಹಲವಾರು ದ್ವಿಚಕ್ರ ವಾಹನ ಸವಾರರು ಜಾರಿ ಬಿದಿದ್ದಾರೆ. ಇದನ್ನು ಮನಗಂಡ ಸ್ಥಳೀಯ ನಿವಾಸಿಗಳು ನಗರಸಭಾ ಆಯುಕ್ತರಿಗೆ ಮೊಬೈಲ್ ಕರೆ ಮುಖಾಂತಾರ ಗಮನಕ್ಕೆ ತಂದಿದ್ದಾರೆ. ಸಕಾಲಕ್ಕೆ ಸ್ಪಂದಿಸಿದ ಮಡಿಕೇರಿ ನಗರ ಸಭಾ ಆಯುಕ್ತರು ರಸ್ತೆಯಲ್ಲಿರುವ ಕೆಸರನ್ನು ನಗರಸಭಾ ಸಿಬ್ಬಂದಿಗಳ ಮೂಲಕ ತಕ್ಷಣವೆ ತೆರವುಗೊಳಿಸಿ ಸಾರ್ವಜನಿಕರ ಒಡಾಟಕ್ಕೆ ಹಾದಿ ಸುಗಮ ಗೊಳಿಸಿಕೊಟ್ಟಿದ್ದಾರೆ. ನಗರ ಸಭಾ ಆಯುಕ್ತರಾದ ವಿಜಯ ರವರ ಸಕಾಲದ ಸ್ಫಂದನೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network