Header Ads Widget

Responsive Advertisement

ತಲಕಾವೇರಿ ಜಾತ್ರೆ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ


ತಲಕಾವೇರಿ ಜಾತ್ರೆ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ

ಭಾಗಮಂಡಲ, ತಲಕಾವೇರಿ ತೀರ್ಥ ಉದ್ಭವ ಪ್ರಯುಕ್ತ  ವಿರಾಜಪೇಟೆ ತಾಲ್ಲೂಕಿನ ಮಹಿಳಾ ಮೋರ್ಚಾದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಲಕಾವೇರಿ ಯಿಂದ ಭಾಗಮಂಡಲವರೆಗೆ ರಸ್ತೆ ಬದಿಯ ಕಸ ಸಂಗ್ರಹಿಸಿ ಸ್ವಚ್ಚತೆ ಮಾಡಲಾಯಿತು. 


ಸ್ವಚ್ಚತಾ  ಕಾರ್ಯಕ್ರಮಕ್ಕೆ ಮಾಜಿ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅದ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ತಲಕಾವೇರಿಯಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿರಾಜಪೇಟೆ ತಾಲ್ಲೂಕಿನ ಮಹಿಳಾ ಮೋರ್ಚಾದ ಅದ್ಯಕ್ಷೆ  ಕವಿತಾ ಬೋಜಪ್ಪ್  ಪ್ರಾಧಾನ ಕಾರ್ಯದರ್ಶಿ ಶಿಲ್ಪ, ಪ್ರಮುಖರಾದ ರಮೇಶ್ ಹೊಳ್ಳ, ಯಮುನಾ ಚಂಗಪ್ಪಅಯ್ಯಂಗೇರಿ ಗ್ರಾ.ಪಂ. ಅದ್ಯಕ್ಷ ಕುಯ್ಯಮುಡಿ  ರಂಜು, ಶಕ್ತಿ ಕೇಂದ್ರ ಪ್ರಮುಖ ರಾಜೀವ್, ಎಸ್ಟಿ ಮೋರ್ಚಾದ ಅದ್ಯಕ್ಷ ಮಿಟ್ಟು ರಂಜಿತ್, ಸೇರಿದಂತೆ ಇತರೆ ಪ್ರಮುಖರು ಐವತ್ತಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು.