Header Ads Widget

ಸರ್ಚ್ ಕೂರ್ಗ್ ಮೀಡಿಯ

ಈ ಜೀವ ತಣ್ಣಗಿರಲಿ....


ಈ ಜೀವ ತಣ್ಣಗಿರಲಿ....

ಮಡಿಕೇರಿಯ ಸಕಾ೯ರಿ ಜ್ಯೂನಿಯರ್ ಕಾಲೇಜು ಗೇಟ್ ಪಕ್ಕದಲ್ಲಿಯೇ ಅಂಗಡಿಯೊಂದಿದೆ.

ವಿ.ಟಿ. ಲೋಕೇಶ್ ಎಂಬುವವರಿಗೆ ಸೇರಿದ ಈ ಅಂಗಡಿಯಲ್ಲಿ ಚಪ್ಪಲಿ, ಕ್ಯಾಪ್ ಮುಂತಾದ ವಸ್ತುಗಳು ದೊರಕುತ್ತದೆ.

ಇದೇ ಅಂಗಡಿ ಪಕ್ಕದಲ್ಲಿಯೇ ಈಗ ಗಮನ ಸೆಳೆಯುವಂಥ ಪುಟ್ಟ ಕೊಳವೊಂದು ಕಂಗೊಳಿಸುತ್ತಿದೆ.

ಕೊಳದ ಸುತ್ತ ಹಸು,ಜಿಂಕೆ, ಕೋಳಿ, ಪಕ್ಷಿಗಳ ಕಾಗದದ ಆಕೖತಿಗಳೂ ವಿಶಿಷ್ಟ ರೀತಿಯಲ್ಲಿ ರೂಪುಗೊಂಡಿದೆ.

ಕೊಳದಲ್ಲಿನ ನೀರನ್ನು ಹಸು, ಪಕ್ಷಿಗಳು ಸೇವಿಸುತ್ತಾ ನೀರಡಿಕೆ ನೀಗಿಸಿಕೊಳ್ಳುತ್ತಿದೆ.

ರಸ್ತೆ ಪಕ್ಕದಲ್ಲಿಯೇ ಇರುವುದರಿಂದ ಈ ಮಾಗ೯ದಲ್ಲಿ ಸಾಗುವ ಬಾಯಾರಿದ ಜಾನುವಾರುಗಳಿಗೆ ಈ ಪುಟ್ಟ ಕೊಳ ನೀರಿನ ಆಸರೆಯಾಗಿದೆ.

ಪ್ರಾಣಿಗಳಿಗೆ ನೀರುಣಿಸಿ ಎಂಬ ಸಂದೇಶದ ಫಲಕವನ್ನೂ ಲೋಕೇಶ್ ಕೊಳದ ಬದಿಯಲ್ಲಿ ಇರಿಸಿದ್ದಾರೆ.

ಕೋವಿಡ್ ದಿನಗಳಲ್ಲಿ ಹಸುಗಳು ನೀರು ದೊರಕದೇ ಪರದಾಡುತ್ತಿದ್ದದ್ದನ್ನು ಗಮನಿಸಿ ಲೋಕೇಶ್ ಅಂಗಡಿ ಪಕ್ಕದಲ್ಲಿಯೇ ಕೊಳ ರೂಪಿಸಿ ನೀರು ಜಾನುವಾರುಗಳಿಗೆ ಸುಲಭವಾಗಿ ದೊರಕುವಂತೆ ಮಾಡಿದರು. ನೀರು ಕುಡಿದ ಹಸುಗಳು ಕೖತಜ್ಞತೆಯಿಂದ ಲೋಕೇಶ್ ಅವರನ್ನು ಗಮನಿಸಿ ಮುಂದೆ ಸಾಗುತ್ತಿವೆ.

ಬೆಳಗ್ಗಿನ ಹೊತ್ತು ಹಸುಗಳು ಇಲ್ಲಿ ನೀರು ಕುಡಿಯೇ ಮುಂದೆ ಸಾಗುತ್ತಿದ್ದು ತನ್ನ ಶ್ರಮ ಸಾಥ೯ಕವಾಗಿದೆ ಎಂದು ಲೋಕೇಶ್ ನೆಮ್ಮದಿಯಿಂದ ಹೇಳುತ್ತಾರೆ.

ಮನಸ್ಸಿದ್ದರೆ, ಇಚ್ಚೆಯಿದ್ದರೆ ಇರುವ ಜಾಗವನ್ನೇ ಬಳಸಿಕೊಂಡು ವಿನೂತನ ಕಲ್ಪನೆಯನ್ನು ಸಾಕಾರಗೊಳಿಸಲು ಸಾಧ್ಯ ಎಂಬುದಕ್ಕೆ ಲೋಕೇಶ್ ಉದಾಹರಣೆಯಾಗಿದ್ದಾರೆ.

ಮಡಿಕೇರಿ ದಸರಾ ಸಮಿತಿಯಿಂದ ಆಯೋಜಿತ ಅಂಗಡಿ ಅಲಂಕಾರ ಸ್ಪಧೆ೯ಯಲ್ಲಿಯೂ ಲೋಕೇಶ್ ವಿ.ಟಿ. ಅವರ ಈ ವಿಶಿಷ್ಟ ಪರಿಕಲ್ಪನೆಗೆ ಪ್ರಥಮ ಬಹುಮಾನ ದೊರಕಿದ್ದು ಸಾಧನೆಗೆ ಸಂದ ಬಹುಮಾನವೇ ಹೌದು.

ಪ್ರಾಣಿಗಳ ನೀರಡಿಕೆ ನೀಗಿಸುವ ಲೋಕೇಶ್ ಅವರಂಥವರ ಸಂಖ್ಯೆ ಹೆಚ್ಚಾಗಲಿ.. ಈ ಜೀವಿಯ ಮನಸ್ಸು ತಣ್ಣಗಿರಲಿ...

ಬರಹ: ✍️.... ಅನಿಲ್ ಎಚ್.ಟಿ. 

( ಪತ್ರಕರ್ತರು )

( ಅನಿಲ್ ಎಚ್.ಟಿ. )