Header Ads Widget

Responsive Advertisement

ಸ್ವಚ್ಛತಾ ಹಿ ಸೇವಾ ಆಂದೋಲನ


ಸ್ವಚ್ಛತಾ ಹಿ ಸೇವಾ ಆಂದೋಲನ

ಮಡಿಕೇರಿ ಅ.01: ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯವು ಗ್ರಾಮಗಳಲ್ಲಿ ಸಂಪೂರ್ಣ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಸೆಪ್ಟೆಂಬರ್, 15 ರಿಂದ ಅಕ್ಟೋಬರ್, 01 ರವರೆಗೆ ಸ್ವಚ್ಛತಾ ಹಿ ಸೇವಾ ಆಂದೋಲನವನ್ನು ಆಯೋಜಿಸಿಕೊಂಡು ಬರುತ್ತಿದೆ. ಈ ವರ್ಷವು ಸಹ ಎಲ್ಲಾ ಗ್ರಾಮಗಳಲ್ಲಿ ದೃಶ್ಯ ಸ್ವಚ್ಛತೆ (Visual cleanliness)  ಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರ ವ್ಯಾಪ್ತಿ “ಸ್ವಚ್ಛತಾ ಹಿ ಸೇವಾ ಆಂದೋಲನ”ವನ್ನು ಆಯೋಜಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಕಸ ಸಂಗ್ರಹಣೆ, ಮೂಲದಲ್ಲಿಯೇ ಕಸ ವಿಂಗಡಣೆ, ವಿಲೇವಾರಿ ಮತ್ತು ಸ್ವಚ್ಛತಾ ಶ್ರಮದಾನ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಇಡೀ ಗ್ರಾಮವನ್ನು ಕಸ ಮುಕ್ತವನ್ನಾಗಿಸುವ (ದೃಶ್ಯ ಸ್ವಚ್ಚತೆ) ಉದ್ದೇಶದೊಂದಿಗೆ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.

      ಗ್ರಾಮ ಪಂಚಾಯಿತಿ ಮಟ್ಟದಲ್ಲಿ “ಸ್ವಚ್ಛತಾ ಹಿ ಸೇವಾ ಆಂದೋಲನ”ದ ಕುರಿತು ವಿμÉೀಶ ಗ್ರಾಮ ಸಭೆಯನ್ನು ಆಯೋಜಿಸಿ ಸದರಿ ಗ್ರಾಮ ಸಭೆಯಲ್ಲಿ “ಸ್ವಚ್ಛತಾ ಹಿ ಸೇವಾ ಆಂದೋಲನ”ದ ಕುರಿತು ಹಾಗೂ ಔಆಈ+, ಶೌಚಾಲಯಗಳ ಬಳಕೆ ಮತ್ತು ಸುಸ್ಥಿರತೆ, ಘನ ತ್ಯಾಜ್ಯದ ಮೂಲದಲ್ಲಿ ವಿಂಗಡಣೆ, ತ್ಯಾಜ್ಯ ಸಂಗ್ರಹಣೆ, ತ್ಯಾಜ್ಯ ವಿಲೇವಾರಿ, ಬೂದು ನೀರು ನಿರ್ವಹಣೆ, ಕಪ್ಪು ನೀರು ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ.

      “ಸ್ವಚ್ಛತಾ ಹಿ ಸೇವಾ ಆಂದೋಲನ”ದ ಮುಖ್ಯ ಉದ್ದೇಶ ದೃಶ್ಯ ಸ್ವಚ್ಛತೆ ಆಗಿರುವುದರಿಂದ ಗ್ರಾಮಗಳಲ್ಲಿ ಶಾಲೆ, ಅಂಗನವಾಡಿ, ಸಾರ್ವಜನಿಕ ಸ್ಥಳ, ಪ್ರವಾಸಿ ತಾಣ, ಐತಿಹಾಸಿಕ ಸ್ಥಳಗಳಲ್ಲಿ ಶ್ರಮದಾನ ಹಾಗೂ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹಾಗೂ ರಸ್ತೆ, ಚರಂಡಿ ಸ್ವಚ್ಛಗೊಳಿಸುವ ಮೂಲಕ ನೈರ್ಮಲ್ಯತೆ ಬಗ್ಗೆ ತಿಳಿಸಲಾಗಿದೆ.  

       ಗ್ರಾಮ ಮಟ್ಟದಲ್ಲಿ ಘನ ತ್ಯಾಜ್ಯ ನಿರ್ವಹಣೆ- ಮನೆ, ಅಂಗಡಿ, ಹೋಟೇಲ್, ಹೊಂಸ್ಟೇ ಇತ್ಯಾದಿ ಸ್ಥಳಗಳಲ್ಲಿ ಒಣ ತ್ಯಾಜ್ಯ ವಿಂಗಡಣೆ, ಹಸಿ ತ್ಯಾಜ್ಯ ಕಾಂಪೆÇೀಸ್ಟ್ ಮಾಡುವ ಬಗ್ಗೆ, ಪ್ಲಾಸ್ಟಿಕ್ ತ್ಯಾಜ್ಯದ ದುಷ್ಪರಿಣಾಮದ ಬಗ್ಗೆ, ಏಕ ಬಳಕೆ ಪ್ಲಾಸ್ಟಿಕ್ ನಿμÉೀದದ ಬಗ್ಗೆ, ಬೂದು ನೀರು ನಿರ್ವಹಣೆ- ಮನೆ, ಅಂಗಡಿ, ಹೋಟೇಲ್, ಹೊಂಸ್ಟೇ ಇತ್ಯಾದಿ ಸ್ಥಳಗಳಲ್ಲಿ ಉತ್ಪತ್ತಿಯಾಗುವ ಬೂದು ನೀರನ್ನು ವೈಯಕ್ತಿಕ, ಸಮುದಾಯ ಇಂಗು ಗುಂಡಿ ನಿರ್ಮಾಣದ ಮೂಲಕ ನಿರ್ವಹಣೆ, ಪೌಷ್ಟಿಕ ತೋಟಗಳ ನಿರ್ಮಾಣ ಮೂಲಕ ಬೂದು ನೀರು ನಿರ್ವಹಣೆ ಮಾಡುವ ಬಗ್ಗೆ ಸಾರ್ವಜನಿಕರಿಗೆ ಜಾಥ ನಡೆಸುವ ಮೂಲಕ ಸ್ವಚ್ಛ ವಾಹಿನಿಯಲ್ಲಿ ನೈರ್ಮಲ್ಯತೆ ಕುರಿತು ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಗ್ರಾಮಸ್ಥರನ್ನು ಪಾಲ್ಗೊಳ್ಳುವಂತೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಗಿದೆ.

       ಕಪ್ಪು ನೀರು ನಿರ್ವಹಣೆ- ಮನೆ, ಅಂಗಡಿ, ಹೋಟೇಲ್, ಹೊಂಸ್ಟೇ ಇತ್ಯಾದಿ ಸ್ಥಳಗಳಲ್ಲಿ ಈಗಾಗಲೇ ಏಕ ಗುಂಡಿ ಶೌಚಾಲಯ ಇದ್ದು, ಅವುಗಳನ್ನು ಅವಳಿಗುಂಡಿಯನ್ನಾಗಿ ಪರಿವರ್ತಿಸುವ ಮಹತ್ವದ ಬಗ್ಗೆ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿಯಲ್ಲಿ ನಿರ್ಮಾಣವಾಗುವ ಮಲ ತ್ಯಾಜ್ಯ ಘಟಕದ ಸೌಲಭ್ಯ ಪಡೆಯುವ ಬಗ್ಗೆ ಸಾರ್ವಜನಿಕರಿಗೆ ಜಾಥ ನಡೆಸುವ ಮೂಲಕ ಸ್ವಚ್ಛ ವಾಹಿನಿಯಲ್ಲಿ ನೈರ್ಮಲ್ಯತೆ ಕುರಿತು ಪ್ರಚಾರ ಮಾಡುವ ಮೂಲಕ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಜಾಗೃತಿ ಮೂಡಿಸಲಾಗಿದೆ.

      ಈಗಾಗಲೇ ಪೂರ್ಣಗೊಳಿಸಲಾದ ಸ್ವಚ್ಛ ಸಂಕೀರ್ಣಗಳನ್ನು ಆಂದೋಲನದ ಸಮಯದಲ್ಲಿ ಉದ್ಘಾಟನೆ ಮಾಡುವುದು. ಹಾಗೂ ಗ್ರಾಮಸ್ಥರಿಗೆ ತ್ಯಾಜ್ಯ ನಿರ್ವಾಹಣೆಯಲ್ಲಿ ಒಣ ತ್ಯಾಜ್ಯ, ಹಸಿ ತ್ಯಾಜ್ಯ ವಿಂಗಡಣೆ ಮಾಡುವ ಅವಶ್ಯಕತೆ ಬಗ್ಗೆ ಜಾಗೃತಿ ಹಾಗೂ ಹಸಿ ತ್ಯಾಜ್ಯ ಕಾಂಪೆÇೀಸ್ಟ್ ಮಾಡಿಸುವ ಬಗ್ಗೆ ಮಾಹಿತಿ ನೀಡಲಾಗಿದೆ.

      ಜಲ ಮೂಲಗಳು ಹಾಗೂ ಗ್ರಾಮ ಪಂಚಾಯಿತಿಯ ಕುಡಿಯುವ ನೀರು ಸರಬರಾಜು ಮೂಲಗಳ ಸುತ್ತಲಿನ ಪ್ರದೇಶಗಳನ್ನು ಗ್ರಾಮಸ್ಥರ ಪಾಲ್ಗೊಳ್ಳುವ ಮುಖಾಂತರ ಸ್ವಚ್ಛಗೊಳಿಸುವುದು ಹಾಗೂ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ.

      ಈಗಾಗಲೇ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಜುಲೈ 1 ರಿಂದ ನಿμÉೀಧಿಸಲಾಗಿದ್ದು, ಇದರ ಬಳೆಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ವ್ಯಾಪಕ ಪ್ರಚಾರ ಮಾಡುವುದು ಹಾಗೂ ಪ್ಲಾಸ್ಟಿಕ್ ಉತ್ಪಾದಕರು, ವ್ಯಾಪಾರಿಗಳು, ಮಾರಾಟಗಾರರಿಗೆ ಮಾರ್ಗಸೂಚಿಯನುಸಾರ ಅನಿರೀಕ್ಷಿತ ಭೇಟಿ ನೀಡಿ ದಂಡ ವಿಧಿಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ.

      “ಎಲ್ಲೆಂದರಲ್ಲಿ ಕಸ ಬಿಸಾಡಬೇಡಿ” ಎಂಬ ವಿಷಯದ ಬಗ್ಗೆ ಸ್ಲೋಗನ್ ನ್ನು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಂದ ಬರೆಸಿ ಜಾಗೃತಿ ಮೂಡಿಸಲಾಗಿದೆ.

       ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕಸದ ರಾಶಿಯ (bಟoಛಿಞ sಠಿoಣ) ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಸ್ಪರ್ದೆಯನ್ನು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಲಾಗಿದೆ. ಕಸದ ರಾಶಿಗಳನ್ನು ಜಿಪಿಎಸ್ ಲೋಕೆಷನ್ ಹೊಂದಿರುವ ಪೆÇೀಟೋ ಮತ್ತು ವಿಡಿಯೋಗಳನ್ನು ಜಿಲ್ಲಾ ನೆರವು ಘಟಕಕ್ಕೆ ಕಳುಹಿಸುವಂತೆ ಸೂಚಿಸಿ ಈ ಕುರಿತು ಗ್ರಾಮ ಪಂಚಾಯಿತಿಗಳು ವ್ಯಾಪಕ ಪ್ರಚಾರ ಮಾಡಲು ತಿಳಿಸಲಾಗಿ ಒಟ್ಟು ಜಿಲ್ಲೆಯಾದ್ಯಾಂತ ವಿವಿಧ ಗ್ರಾಮ ಪಂಚಾಯಿತಿಯಿಂದ 24 ಕಸದ ರಾಶಿ ಗುರುತಿಸಿ ಸ್ವಚ್ಛಗೊಳಿಸಲಾಗಿದೆ. ಅತೀ ಹೆಚ್ಚು ಕಸದ ರಾಶಿ ಗುರುತಿಸಿದ ಸ್ಪರ್ಧಾಳುವಿಗೆ ಇದೇ ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನಾಚರಣೆಯಂದು ಬಹಮಾನ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.