ಮೂರ್ನಾಡುವಿನಲ್ಲಿ ನಡೆದ ಅದ್ಧೂರಿ ಆಯುಧ ಪೂಜಾ ಸಂಭ್ರಮಾಚರಣೆ
ಮೂರ್ನಾಡು: ಮೂರ್ನಾಡುವಿನಲ್ಲಿ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಅದ್ಧೂರಿ ಆಯುಧ ಪೂಜಾ ಸಂಭ್ರಮಾಚರಣೆ ಅತಿ ವಿಜೃಂಭಣೆಯಿಂದ ಜರುಗಿತು.
ಇಲ್ಲಿನ ಪಾಂಡಾಣೆ ಶಾಲಾ ಮೈದಾನದಲ್ಲಿ ನಿರ್ಮಿಸಲಾದ ಭವ್ಯ ಅಲಂಕೃತ ವೇದಿಕೆಯಲ್ಲಿ 29ನೇ ವರ್ಷದ ಆಯುಧ ಪೂಜೆಯ ಸಂಭ್ರಮಾಚರಣೆಯಲ್ಲಿ ಅಲಂಕೃತ ವಾಹನಗಳಿಗೆ ಸಾಮೂಹಿಕ ಪೂಜೆ ನೆರವೇರಿತು. ನಂತರ ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆಯಲ್ಲಿ ವಿಶೇಷವಾಗಿ ಅಲಂಕೃತಗೊಂಡ ವಾಹನಗಳಲ್ಲಿ ಸಿರಗನ್ನಡಂ ಗೆಲ್ಗೆ, ಶಬರಿಮಲೆ ಅಯ್ಯಪ್ಪ ಸನ್ನಿಧಾನ, ಭಾರತಕ್ಕೆ ಬಂದ 9ನೇ ಚೀತಾ, ಆಧಿಶಕ್ತಿಯಿಂದ ಶುಂಭ ನಿಶುಂಭರ ವಧೆ, ಶಿವ ಮತ್ತು ಅಂಧಕಾಸುರರ ಯುದ್ದ, ಅದ್ದೂರಿ ಆಯುಧ ಪೂಜಾ ಸಮಾರಂಭದ ಚಿತ್ರಣ, ಅತಿ ಮೊಬೈಲ್ ಬಳಕೆಯಿಂದಾಗುವ ಅನಾಹುತದ ಸ್ತಭ್ಧ ಚಿತ್ತಣ, ಮೂಸಿಕಾಸುರ ವಧೆ, ಪುಲ್ವಾಮ ಭಯೋತ್ಪಾಕ ದಾಳಿಯಲ್ಲಿ ಹುತ್ಮಾತರಾದ ಸೈನಿಕರ ಸ್ತಭ್ಧ ಚಿತ್ರಗಳು ಮತ್ತು ಮೆರವಣಿಗೆಯಲ್ಲಿ ಸಾಗಿದ ಹುಣಸೂರಿನ ಮಹದೇಶ್ವರ ಯುವಕರ ಕಲಾ ತಂಡದಿಂದ ಗೊಂಬೆ ಕುಣಿತ ಮತ್ತು ವಾದ್ಯಗೋಷ್ಠಿಗಳು ವೀಕ್ಷಕರ ಗಮನ ಸೆಳೆದವು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಚಂದ್ರಶೇಖರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದುಷ್ಟರ ಸಂಹಾರ ಮಾಡಿ, ಶಿಷ್ಟರ ರಕ್ಷಣೆಗೈದ ಇಂತಹ ನಾಡ ಹಬ್ಬಗಳು ಅಲ್ಲಲ್ಲಿ ಆಚರಿಸುವುದು ಒಗ್ಗಟ್ಟಿನ ಸಂಕೇತವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ವೈದ್ಯಕೀಯ ಆಸ್ಪತ್ರೆಯ ಉಪ ಪ್ರೊ. ಡಾ. ಡಿ.ಎನ್. ಅಯ್ಯಪ್ಪ ಮಾತನಾಡಿ ಇಂತಹ ಹಬ್ಬಗಳಿಂದ ಜನರ ಮನಸ್ಸಿಗೆ ಸಂತೋಷ, ಉಲ್ಲಾಸ, ನೆಮ್ಮದಿ ಸಿಗುವುದಲ್ಲದೆ, ಜನರು ಒಗ್ಗಟಿನಿಂದ ಸಂಘಟಿತರಾಗಲು ಸಾಧ್ಯವಾಗುತ್ತದೆ. ಇಂತಹ ಸಾರ್ವಜನಿಕ ಸಮಾರಂಭಗಳು ನಾಡಿನ ಏಳಿಗೆಗೆ ಪೂರಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಬಿ.ಎಸ್. ಅರುಣ್ ರೈ (ಬಾಬಾ) ವಹಿಸಿದ್ದರು. ವೇದಿಕೆಯಲ್ಲಿ ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮುಂಡಂಡ ವಿಜು ತಿಮ್ಮಯ್ಯ, ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಬಡುವಂಡ ಅರುಣ್ ಅಪ್ಪಚ್ಚು, ಕಾಫಿ ಬೆಳೆಗಾರರಾದ ಮುಕ್ಕಾಟೀರ ರವಿ ಚೀಯಣ್ಣ, ಹೊಂಬಾಳೆ ಟ್ರೇಡರ್ಸ್ ಕೆರೆಮನೆ ಭರತ್ ನಾಯಕ್, ನಿವೃತ್ತ ಎ.ಎಸ್.ಐ ದೇರಜೆ ಟಿ. ಬಿದ್ದಪ್ಪ, ಪಿ.ಡಬ್ಲ್ಯೂ.ಡಿ ಕಾಂಟ್ರಾಕ್ಟರ್ ನೆರವಂಡ ಸಂಜಯ್ ಪೂಣಚ್ಚ, ಹಾಕತ್ತೂರು ಪೌಢಶಾಲಾ ಶಿಕ್ಷಕ ಸಿ.ಎಂ. ಮುನೀರ್, ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಗೌರವ ಅಧ್ಯಕ್ಷ ಎನ್.ಕೆ. ಕುಂಞರಾಮ, ಮೂರ್ನಾಡಿನ ನಕ್ಷತ್ರ ಆಟೊ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಉಮೇಶ್ ಬಂಗೇರ, ಸಂಘದ ಉಪಾಧ್ಯಕ್ಷ ಅಶ್ವಥ್ ರೈ, ಕಾರ್ಯದರ್ಶಿ ಎನ್.ಎನ್. ಶರಣು, ಖಜಾಂಚಿ ಬಿ.ಬಿ. ಶ್ರೀಕಾಂತ್, ಸಹ ಕಾರ್ಯದರ್ಶಿ ಕೆ.ಪುರುಷೋತ್ತಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಪಾರಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಮುಖ್ಯ ಶಿಕ್ಷಕಿ, ಸಾವಿತ್ರಿಬಾಯಿ ಪುಲೆ ರಾಷ್ಟ್ರ ಪ್ರಶಸ್ತಿ ವಿಜೇತೆ ಹೆಚ್.ಎನ್. ಶಾಂತಿ ಮತ್ತು ಮೂರ್ನಾಡು ಕೊರೋನ ವಾರಿಯರ್ಸ್ ಸಜೀವ, ಮೋಹನ್, ಪ್ರವೀಣ್, ಕುಟ್ಟಪ್ಪ ಮತ್ತು ದಿನೇಶ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಅಲಂಕೃತಗೊಡ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ, ಆರು ಚಕ್ರ ವಾಹನಗಳು ಮತ್ತು ಅಂಗಡಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನಗಳನ್ನು ಮುಖ್ಯ ಅತಿಥಿಗಳು ವಿತರಿಸಿದರು. ತಂಗಮ್ಮ ಪ್ರಾರ್ಥಿಸಿ, ಬುಟ್ಟಂಡ ಸುನೀಲ್ ಸ್ವಾಗತಿಸಿ, ಸರಳ ಶರಣು ಕಾರ್ಯಕ್ರಮ ನಿರೂಪಿಸಿ, ಎನ್.ಎನ್. ಶರಣು ಪ್ರಾಸ್ತಾವಿಕ ನುಡಿಯಾಡಿ, ಅಶ್ವಥ್ ವಂದಿಸಿದರು. ಮೂರ್ನಾಡಿನ ಗಜಾನನ ಯುವಕ ಸಂಘದ ವತಿಯಿಂದ ನೆರೆದಿದ್ದ ಎಲ್ಲಾ ಜನರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಭಾ ಕಾರ್ಯಕ್ರಮಕ್ಕೆ ಮೊದಲು ನಡೆದ ಸ್ಥಳೀಯ ಮಕ್ಕಳ ನೃತ್ಯ ಕಾರ್ಯಕ್ರಮವನ್ನು ಸಂಘದ ಗೌರವ ಅಧ್ಯಕ್ಷ ಎನ್.ಕೆ. ಕುಂಞರಾಮ ಉದ್ಘಾಟಿಸಿ ಚಾಲನೆ ನೀಡಿದರು.
ನಂತರ ಜರುಗಿದ ಮೈಸೂರಿನ ಡೈಮಂಡ್ ಮಾಯಾ ಜಾದುಗಾರ್ ಅವರಿಂದ ನಡೆದ ಜಾದೂ ಪ್ರದರ್ಶನ ಮತ್ತು ಸ್ಥಳೀಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಪ್ರೇಕ್ಷಕರ ಮನಸೂರೆಗೊಂಡವು.
ಸುದ್ದಿ-ಚಿತ್ರ ಮಾಹಿತಿ: ಟಿ.ಸಿ. ನಾಗರಾಜ್, ಮೂರ್ನಾಡು
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network