Header Ads Widget

ಸರ್ಚ್ ಕೂರ್ಗ್ ಮೀಡಿಯ

ಚೆನ್ನೈ ನಲ್ಲಿ ನಡೆದ ರಾಷ್ಟ್ರಮಟ್ಟದ ಕಾರ್ಯಗಾರದಲ್ಲಿ ಗಮನ ಸೆಳೆದ ಡಾ. ಮುಲ್ಲೇಂಗಡ ರೇವತಿ ಪೂವಯ್ಯ


ಚೆನ್ನೈ ನಲ್ಲಿ ನಡೆದ ರಾಷ್ಟ್ರಮಟ್ಟದ ಕಾರ್ಯಗಾರದಲ್ಲಿ ಗಮನ ಸೆಳೆದ ಡಾ. ಮುಲ್ಲೇಂಗಡ ರೇವತಿ ಪೂವಯ್ಯ

ಇತ್ತೀಚೆಗೆ ‌ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಕಾರ್ಯಗಾರವೊಂದರಲ್ಲಿ ಭಾಗವಹಿಸಿದ ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಪನ್ಯಾಸಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಸಾಂಪ್ರದಾಯಿಕ ಕೊಡವ ಸೀರೆಯಲ್ಲಿ ಗಮನ ಸೆಳೆದರು. 

ಕೇಂದ್ರಿಯ ಸಂಸ್ಥೆಯಾದ ಚೆನ್ನೈನ "ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳ್ ಸಂಸ್ಥೆ" ಇದೇ ಅಕ್ಟೋಬರ್ 16ರಂದು ನಡೆಸಿದ "ಭಾರತೀಯ ಭಾಷಾ ಸಂಪ್ರದಾಯದಲ್ಲಿ ಶಾಸ್ತ್ರೀಯ ತಮಿಳಿನ ಕೊಡುಗೆ" ಎಂಬ ಕಾರ್ಯಗಾರದಲ್ಲಿ ಭಾಗವಹಿಸಿದ ಡಾ. ಮುಲ್ಲೇಂಗಡ ರೇವತಿ ಪೂವಯ್ಯ "ಕೊಡವ ಹಾಗು ತಮಿಳು ಭಾಷೆಯ  ತೌಲನಿಕ ನೋಟ" ಎಂಬ ವಿಷಯವಾಗಿ ಹಾಗೂ "ಕೊಡವ ಮತ್ತು ತಮಿಳು ಸಂಸ್ಕೃತಿಯ ತುಲನಾತ್ಮಕ ಅಧ್ಯಯನ" ಎಂಬ ಎರಡು ವಿಷಯಗಳ ಬಗ್ಗೆ ವಿಚಾರ ಮಂಡನೆ ಮಾಡುವುದರ ಮೂಲಕ ಕೊಡವ ಹಾಗೂ ತಮಿಳಿನ ನಡುವಿರುವ ಭಾಷಾ ಮತ್ತು ಸಾಂಸ್ಕೃತಿಕ ಸಾಮ್ಯತೆ  ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಇವರು ಸಾಂಪ್ರದಾಯಿಕ ಕೊಡವ ಸೀರೆಯಲ್ಲಿಯೇ ಎಲ್ಲರ ಗಮನ ಸೆಳೆದರು. ಈಗಾಗಲೇ ಇವರು ತಮಿಳು ಭಾಷೆಯ ಪ್ರಾಚೀನ  ಕವಿ ತಿರುವಳ್ಳುವರ್ ಅವರ ತಿರುಕ್ಕುರಳ್ ಎಂಬ ಶ್ರೇಷ್ಠ ಗ್ರಂಥವನ್ನು ಕೊಡವ ಭಾಷೆಗೆ ಭಾಷಾಂತರ ಮಾಡುತ್ತಿದ್ದಾರೆ. ಇದು ಚೆನ್ನೈನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳ್ ಸಂಸ್ಥೆಯ ಯೋಜನೆಯಾಗಿದ್ದು; ಇನ್ನು ಕೆಲವೇ ದಿನಗಳಲ್ಲಿ ಈ ಪುಸ್ತಕ ಸಾಹಿತ್ಯ ಪ್ರೇಮಿಗಳ ಕೈ ಸೇರಲಿದೆ.