Header Ads Widget

ಸರ್ಚ್ ಕೂರ್ಗ್ ಮೀಡಿಯ

ಅ.23 ರಂದು ಮಡಿಕೇರಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ


ಅ.23 ರಂದು ಮಡಿಕೇರಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಡಿಕೇರಿ:‌ 7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಅ.23 ರಂದು ಮಡಿಕೇರಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ನೀಮಾ ಅಧ್ಯಕ್ಷ ರಾಜಾರಾಮ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಪ್ ಇಲಾಖೆ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ರೆಡ್ ಕ್ರಾಸ್ ಸಂಸ್ಥೆ, ರೋಟರಿ ವುಡ್ಸ್, ಕೊಡಗು ಹವ್ಯಕ ವಲಯ, ಬಿ.ಜೆ.ಪಿ ಯುವ ಮೋರ್ಚಾ, ಸಿದ್ದಾಪುರ ಕೇಸರಿ ಯೂತ್ ಮೂಮ್ಮೆಮೆಂಟ್, ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಹಾಗೂ ಕೊಡಗು ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಬೆಳಿಗ್ಗೆ 9 ಗಂಟೆಗೆ ನಗರದ ಕೆಳಗಿನ ಗೌಡ ಸಮಾಜದಲ್ಲಿ ಶಿಬಿರ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಶಿಬಿರದಲ್ಲಿ ಸೊಂಟನೋವು, ಬೆನ್ನು ನೋವು, ಕತ್ತು ನೋವು, ಸಂಧಿನೋವು, ಪಕ್ಷಾಘಾತ, ಆಮವಾತ, ಸ್ತೂಲಕಾಯದ ಸಮಸ್ಯೆ, ಥೈರಾಯಿಡ್ ಸಮಸ್ಯೆ, ಮೂಲವ್ಯಾಧಿ, ಹರ್ನಿಯ, ಭಗಂಧರ, ಆಣಿ, ಕೆಡು, ದೀರ್ಫಕಾಲದ ಹುಣ್ಣು ಮೂಳೆಮುರಿತ, ವೆರಿಕೋಸ್ ಸಮಸ್ಯೆ, ಉರಿಯೂತ, ಕಿವಿ, ಕಣ್ಣು ಮೂಗು ಮತ್ತು ಗಂಟಲಿನ ಸಮಸ್ಯೆಗಳು, ಮೊಡವೆ, ಸಂತಾನ ಹೀನತೆ, ಸ್ತ್ರೀ ರೋಗ, ಲೈಂಗಿಕ ಸಮಸ್ಯೆ, ಮಕ್ಕಳಲ್ಲಿ ಕಂಡು ಬರುವ ಸಮಸ್ಯೆಗಳು, ತಲೆ ನೋವು, ಮೈಗ್ರೇನ್ ಶೀತ, ಜ್ವರ, ಚರ್ಮವ್ಯಾಧಿ, ನಿದ್ರಾಹೀನತೆ, ಆಸ್ತಮಾ, ದೀಘಕಾಲದ ಕೆಮ್ಮು, ಅಧಿಕ ರಕ್ತದ ಒತ್ತಡ, ರಕ್ತಹೀನತೆ, ಜಾಂಡೀಸ್, ಕೊಲೆಸ್ಟ್ರಾಲ್, ಉರಿಮೂತ್ರ ಮಧುಮೇಹ, ಜಠರ ಸಂಬಂಧಿ ತೊಂದರೆಗಳು, ಮಾನಸಿಕ ಖಿನ್ನತೆ, ಸಕ್ಕರೆ ಖಾಯಿಲೆ, ನರದೌರ್ಬಲ್ಯ ಮತ್ತು ಇನ್ನಿತರ ದೀರ್ಫಕಾಲದ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ನುರಿತ ಆಯುರ್ವೇದ ತಜ್ಞರಿಂದ ತಪಾಸಣೆ ಮತ್ತು ಸಲಹೆ ನೀಡಲಾಗುವುದು. ಅಗತ್ಯವಿದ್ದಲ್ಲಿ ಒಳರೋಗಿಗಳಾಗಿ ಜನರಲ್ ವಾರ್ಡ್‍ನಲ್ಲಿ ದಾಖಲಾದಲ್ಲಿ ವಿಶೇಷ ರಿಯಾಯಿತಿಯೊಂದಿಗೆ ಚಿಕಿತ್ಸೆ ನೀಡಲಾಗುವುದು ಎಂದರು.

ಆಯುಷ್ ಅಧಿಕಾರಿ ರೇಣುಕಾ ದೇವಿ ಮಾತನಾಡಿ, ಕೊಡಗಿನಲ್ಲಿ ಪ್ರಥಮ ಬಾರಿಗೆ ಒಂದೇ ಶಿಬಿರದಲ್ಲಿ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ ವೈದ್ಯರುಗಳು ಲಭ್ಯವಿದ್ದು, ಕೊಡಗಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ವುಡ್ಸ್ ಅಧ್ಯಕ್ಷ ಸಂಪತ್ ಕುಮಾರ್, ಜೌಷಧಿ ವ್ಯಾಪಾರಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ ವಸಂತ್ ಕುಮಾರ್, ಕೊಡಗು ಪತ್ರಕರ್ತರ ಸಂಘದ ಕ್ಷೇಮನಿಧಿ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ಕೂರ್ಗ್, ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ರವೀಂದ್ರ ಉಪಸ್ಥಿತರಿದ್ದರು.