ಘಟ್ಟ ಏರಿ ಬಂದವರು .. ಸಾಧಿಸಿದ್ದು ಬೆಟ್ಟದಷ್ಟು...!!..
ಕನಾ೯ಟಕ ಅರೆಭಾಷೆ ಸಾಹಿತ್ಯ ಸಂಸ್ಕೖತಿ ಅಕಾಡೆಮಿ ಅಧ್ಯಕ್ಷರಾಗಿ ಲಕ್ಷೀನಾರಾಯಣ ಕಜೆಗದ್ದೆ ನೇಮಕ ಎಂಬ ಸುದ್ದಿ ನೋಡುತ್ತಿದ್ದಂತೆಯೇ ಹಲವರಿಗೆ ಅಚ್ಚರಿಯಾಗಿತ್ತು.
ಯಾರಿದು ಹೊಸ ವ್ಯಕ್ತಿ? ಹೇಗೆ ನಿಭಾಯಿಸುತ್ತಾರೆ ಅಕಾಡೆಮಿಯನ್ನು ಎಂಬುದೇ ಮೊದಲ ಪ್ರಶ್ನೆಯಾಗಿತ್ತು. ಸುಳ್ಯದ ಪತ್ರಕತ೯ ಗೆಳೆಯ ಗಂಗಾಧರ್ ಅವರಿಗೆ ಕರೆ ಮಾಡಿ ಕಜೆಗದ್ದೆ ಯಾರು ಅಂಥ ಕೇಳಿದೆ.
ಓ.. ಕಜೆಗದ್ದೆಯಾ.. ಸೂಪರ್ ಮನುಷ್ಯ ಮಾರಾಯ್ರೆ... ಅಕಾಡೆಮಿಗೆ ಉತ್ತಮ ಆಯ್ಕೆ. ಸ್ವಲ್ಪ ಜಾಸ್ತಿ ಶಿಸ್ತಿನ ವ್ಯಕ್ತಿ, ಕೈ ಬಾಯಿ ಸ್ವಚ್ಚ ಎಂದಿದ್ದರು.
ಇಂಥ ಲಕ್ಷೀನಾರಾಯಣ ಕಜೆಗದ್ದೆ ಘಟ್ಟ ಹತ್ತಿ ಮಡಿಕೇರಿಗೆ ಬಂದು 3 ವಷ೯ಗಳ ಕಾಲ ಅರೆಭಾಷೆ ಸಾಹಿತ್ಯ ಸಂಸ್ಕೖತಿ ಅಕಾಡೆಮಿಯನ್ನು ಅಧ್ಯಕ್ಷರಾಗಿ ನಿವ೯ಹಿಸಿದರು.
ಕಜೆಗದ್ದೆ ಎಂಬ ಅಪರಿಚಿತ ವ್ಯಕ್ತಿ ಇದೀಗ 3 ವಷ೯ಗಳ ಬಳಿಕ ಅಕಾಡೆಮಿ ಅಧ್ಯಕ್ಷರಾಗಿ ನಿಗ೯ಮಿಸುವ ಸಂದಭ೯ ಎಲ್ಲರಿಗೂ ಪರಿಚಿತರಾಗಿಬಿಟ್ಟರು. ಎಲ್ಲರಿಗೂ ಆತ್ಮೀಯರಾಗಿಬಿಟ್ಟಿದ್ದರು. ಕಜೆಗದ್ದೆ ಎಂಬ ಹೆಸರೇ ಎಲ್ಲರ ಮನಸ್ಸಿಗೆ ಕುಷಿ ಕೊಡವ ವ್ಯಕ್ತಿತ್ವದ್ದಾಗಿತ್ತು.
ವಿವಾದವನ್ನು ಮೈ ಮೇಲೆ ಎಳೆದುಕೊಳ್ಳದೇ, ತನ್ನ ಪಾಡಿಗೆ ತಾನು ಅನೇಕ ಕಾಯ೯ಕ್ರಮಗಳನ್ನು ರೂಪಿಸುತ್ತಾ ಸಾಗಿದ ಲಕ್ಷ್ಮೀನಾರಾಯಣ ಕಜೆಗದ್ದೆ ಅಕಾಡೆಮಿಗೆ ಒಂದು ನಿಧಿ೯ಷ್ಟ ರೂಪು ಕೊಟ್ಟರು. ಯೋಜನೆಗಳಿಗೆ ದಾರಿ ತೋರಿಸಿದರು.
ಸರಿಯಾಗಿ ಹೇಳಬೇಕೆಂದರೆ, ಅಕಾಡೆಮಿಯೊಂದು 10 ವಷ೯ಗಳಲ್ಲಿ ಮಾಡಬಹುದಾದ ಕೆಲಸ, ಯೋಜನೆಗಳನ್ನು ತನ್ನ ತಂಡದೊಂದಿಗೆ ಕೇವಲ 3 ವಷ೯ಗಳಲ್ಲಿ ಕಜೆಗದ್ದೆ ಪೂರೈಸಿದ ಸಾಧನೆ ತೋರಿದರು.
ಕೋವಿಡ್ ಕಾರಣದಿಂದಾಗಿ 1 ವಷ೯ ವ್ಯಥ೯ವಾದರೂ ಉಳಿದ 2 ವಷ೯ಗಳಲ್ಲಿ ಅಕಾಡೆಮಿಯ ಅಧ್ಯಕ್ಷರು ಮತ್ತು ತಂಡದ ಸದಸ್ಯರ ಕಾಯ೯ವೈಖರಿ ಶ್ಲಾಘನೀಯವಾಗಿತ್ತು.
ಮಡಿಕೇರಿಯ ಕಾಫಿ ಕೖಪಾ ಕಟ್ಟಡದ ಜಿಲ್ಲಾ ಬಿಜೆಪಿ ಕಛೇರಿಯಿಂದ ಕರೆದರೂ ಕೇಳುವಷ್ಟು ದೂರದಲ್ಲಿದ್ದರೂ ರಾಜಕೀಯ ಸೋಂಕು ತಗುಲದಂತೆ ಸೂಕ್ಷ್ಯವಾಗಿ ಅಕಾಡೆಮಿಯ ಕೆಲಸ ಕಾಯ೯ ನಿಭಾಯಿಸಿದರು.
2019 ರ ಅಕ್ಟೋಬರ್ ನಿಂದ 2022 ರ 14 ರವರೆಗಿನ ಕಾಲಾವಧಿಯಲ್ಲಿ ಸುಮಾರು 190 ಕಾಯ೯ಕ್ರಮಗಳನ್ನು ಅಕಾಡೆಮಿ ವತಿಯಿಂದ ಜಾರಿಗೊಳಿಸಿದರು.
ಅರೆಭಾಷೆ ಸಾಹಿತ್ಯ, ಅಂಚೆಲಕೋಟೆ, ಚಲನಚಿತ್ರ, ಸಾಕ್ಷ್ಯ ಚಿತ್ರ, ಅರೆಭಾಷೆ ಪುಸ್ತಕಗಳ ಡಿಜಟಲೀಕರಣ, ರಂಗಭೂಮಿ ಚಟುವಟಿಕೆ, ಸುಗಮಸಂಗೀತ, ತಾಳಮದ್ದಲೆ, ಚಿತ್ರಕಲಾ ಶಿಬಿರ .. ಒಂದೇ ಎರಡೇ ನೂರಾರು ಚಟುವಟಿಕೆಗಳ ಸಾರಥಿ ಕಜೆಗದ್ದೆಯಾಗಿದ್ದರು.
ಪ್ರಾರಂಭದಲ್ಲಿ ಇಂವ ಘಟ್ಟದ ಕೆಳಗಿನವ.. ಇಂವ ನಮ್ಮವ ಅಲ್ಲ ಎಂದು ಕೊಡಗಿನಲ್ಲಿ ಕೇಳಿಬಂದಿದ್ದ ಕೆಲವು ಕೂಗುಗಳಿಗೆ ಕಜೆಗದ್ದೆ ತನ್ನ ಕಾಯ೯ವೈಖರಿ ಮೂಲಕವೇ ಉತ್ತರ ನೀಡಿದರು. ಘಟ್ಟ ಇಳಿಯುವಾಗ ಕೊಡಗಿನವರು ಇಂವ ನಂಮವ. ಇಂವ ನಮ್ಮವ ಎಂಬ ಶ್ಲಾಘನೆಗೆ ಪಾತ್ರರಾದರು.
ಅರೆಭಾಷೆಯಲ್ಲಿ ಮೂಡಿಬಂದ ಸಾಹೇಬರು ಬಂದವೇ ನಾಟಕ ರಾಜ್ಯವ್ಯಾಪಿ ಯಶಸ್ನಿ ಪ್ರದಶ೯ನ ಕಂಡು ದಾಖಲೆ ಮಾಡಿತು. 7 ಸಾವಿರ ಮಂದಿ 16 ತಿರುಗಾಟದ ಪ್ರದಶ೯ನದಲ್ಲಿ ಈ ನಾಟಕ ನೋಡಿದ್ದು ಗಮನಾಹ೯..
3 ಸಾಥ೯ಕ ವಷ೯ಗಳ ಅಧ್ಯಕ್ಷಗಾದಿಯ ನೇತೖತ್ವ ಮುಗಿಸಿ ಘಟ್ಟ ಇಳಿದು ಹೊರಡುವ ಹೊತ್ತಿನಲ್ಲಿಯೂ ಕಜೆಗದ್ದೆ ವಿಶೇಷವಾದದ್ದನ್ನು ನೀಡಿದ್ದಾರೆ.
ಅರೆಭಾಷೆ ಅಕಾಡೆಮಿ ಸಾಧನೆಯ ಹಾದಿ.. ಎಂಬ ದಾಖಲಾಹ೯ ಕೖತಿಯನ್ನು ಅತ್ಯಂತ ಅಂದವಾಗಿ ಮುದ್ರಿಸಿ ಭವಿಷ್ಯಕ್ಕೆ ಅಕಾಡೆಮಿಯ ಕಾಯ೯ಯೋಜನೆ ಹೇಗಿರಬೇಕು. ತಮ್ಮ ಅವಧಿಯಲ್ಲಿ ಹೇಗೆ ಕೆಲಸ ಮಾಡಿದ್ದೇವು ಎಂಬ ಹೆಜ್ಜೆ ಗುರುತನ್ನು ದಾಖಲಿಸಿದ್ದಾರೆ.
ಕಜೆಗದ್ದೆ ಹತ್ತಿರ ಮಾತನಾಡುತ್ತಿದ್ದರೆ.. ಅವರ ಚಿಂತನೆಗಳು... ಕನಸುಗಳು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತಿದ್ದವು. ಈ ಮನುಷ್ಯ ಮತ್ತಷ್ಟು ಉನ್ನತ ಹುದ್ದೆಯಲ್ಲಿರಬೇಕಿತ್ತು ಎಂಬ ಭಾವನೆ ಮೂಡುತ್ತಿತ್ತು.
ಸಕಾ೯ರಿ ಅಕಾಡೆಮಿಯ ಸೀಮಿತ ಚೌಕಟ್ಟಿನಲ್ಲಿಯೂ ಅತ್ಯಂತ ವಿಭಿನ್ನವಾಗಿ ಹೊಸ ಪ್ರಯೋಗಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಅರೆಭಾಷೆ ಅಕಾಡೆಮಿಗೆ ಕಾಯಕಲ್ಪ ನೀಡಿದ ಕೀತಿ೯ ಖಂಡಿತಾ ಕಜೆಗದ್ದೆಗೆ ಸೇರಲೇಬೇಕು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷನಾಗಿ ನಾನು ಆಹ್ವಾನಿಸಿದ ಕಾಯ೯ಕ್ರಮಕ್ಕೆ ಸುಳ್ಯದಿಂದ ಬಂದು ಸಮಯದ ಮಿತಿಯರಿತು ಹಿತ ಮತ್ತು ಮಿತವಾಗಿ ಮಾತನಾಡಿದ ಕಜೆಗದ್ದೆ ಜತೆ ಅನೇಕ ಕಾಯ೯ಕ್ರಮಗಳನ್ನು ಜಾನಪದ ಪರಿಷತ್ ನಿಂದ ಆಯೋಜಿಸಬೇಕೆಂಬ ಯೋಜನೆ ಇದೀಗ ಮೂಲೆಗುಂಪಾಗಿದೆ.
ಮುಂದಿನ ವಷ೯ ಮತ್ತೆ ಅಕಾಡೆಮಿಗೆ ಹೊಸ ಅಧ್ಯಕ್ಷರು, ಸದಸ್ಯರು ನೇಮಕಗೊಳ್ಳುತ್ತಾರೆ. ಆದರೆ ಕಜೆಗದ್ದೆಯಂಥ ಚಿಂತನಶೀಲರು ಅಕಾಡೆಮಿಗೆ ದೊರಕಲಿ ಎಂಬುದೇ ಈಗಿನ ಆಶಯ.
ಸಾಧನೆಯ ಹಾದಿ ಕೖತಿಯನ್ನು ಅಧಿಕಾರವಾಧಿಯ ಕೊನೇ ದಿನ.. ಕೊನೇ ಕ್ಷಣ... ನನ್ನನ್ನು ಹುಡುಕಿಕೊಂಡು ಬಂದಿದ್ದ ಲಕ್ಷ್ಮೀನಾರಾಯಣ ಕಜೆಗದ್ದೆ ಮೊದಲು ಬಂದಾಗ ಹೇಗೆ ಮಂದಸ್ಮಿತರಾಗಿದ್ದರೋ ಹಾಗೇ ಪಟ್ಟ ಮತ್ತು ಘಟ್ಟ ಇಳಿಯುವ, ಸಂದಭ೯ವೂ ಕಂಡು ಬಂದರು.
ಕೈ ಹಿಡಿದುಕೊಂಡು ಪುಸ್ತಕವಿತ್ತು ಹೋಗುತ್ತೇನೆ ಹಾಗಾದರೆ ಎಂದಾಗ ಬೇಸರವಾಯಿತು.. ಹೋಗುತ್ತೇನೆ ಎನ್ನದಿರಿ.. ಬರುತ್ತೇನೆ ಎನ್ನಿ ಎಂದೆ ಕುಶಲವಾಗಿ.. ಇಲ್ಲ.. ನಾನಿನ್ನು ಕೖಷಿಕ ಮಾತ್ರ .. 3 ವಷ೯ಗಳಿಂದ ಅಡಕೆ ತೋಟ ಕಡೆ ತಲೆಹಾಕಿಲ್ಲ.. ಇನ್ನು ಅಡಕೆ ತೋಟದ ಹೊಣೆಗಾರಿಕೆ ನನ್ನದು.. ಎಂದು ಬಿಟ್ಟರು.
ದೊಡ್ಡ ಹೊಣೆ ಹೊರಲು ಎಲ್ಲಾ ರೀತಿಯಲ್ಲಿಯೂ ಸಾಮಥ್ಯ೯ವಿರುವ ಕಜೆಗದ್ದೆಯಂಥವರು ತೋಟದಲ್ಲಿ ಕೖಷಿಕರಾಗಿರುವುದು ಊಹಿಸಿಕೊಳ್ಳಲು ಕಷ್ಟ ಎನಿಸಿತು.. ಮತ್ತೆ.. ಮತ್ತೆ ಬರುತ್ತಿರಿ.. ಮಡಿಕೇರಿ ನಂಟು ಬಿಡಬೇಡಿ ಎಂದೆ..
ಛೇ.. ಎಲ್ಲಾದರೂ ಉಂಟೇ,, ನೂರಾರು ಗೆಳೆಯರ ಬೆಸುಗೆ ಕೊಟ್ಟ ಊರನ್ನು ಮರೆಯುವುದುಂಟೇ ಎಂದು ಕಜೆಗದ್ದೆ ಮುಗಳು ನಗಲು ಯತ್ನಿಸಿದರು.
ಊರು ಬಿಡುವ ನೋವಿತ್ತು..ಕಂಗಳಲ್ಲಿ ನೀರಿನ ಹನಿಯಿತ್ತು...ಕಾರನ್ನೇರುವ ಮುನ್ನ ಕಾಫಿ ಕೖಪಾವನ್ನೊಮ್ಮೆ ನೋಡಿದರು.. ಅಲ್ಲಿ.. ಸಾಥ೯ಕತೆಯ ಭಾವನೆ ಇತ್ತು..
ಕಜೆಗದ್ದೆ ಎಂಬ ಗೆಳೆಯ ಅಡಕೆ ತೋಟಗಳಿಂದ ಮತ್ತೆ ಹೊರಬಂದು ಘಟ್ಟವನ್ನೇರಿ.. ದೂರದೂರಕ್ಕೆ . ಎತ್ತರೆತ್ತರಕ್ಕೆ ಸಾಗಲಿ.. ಮನದಲ್ಲಿಯೇ ಇರುವ ಇನ್ನೂ ಹೊಸ ಹೊಸ ಯೋಜನೆಗಳು.. ನನಸಾಗಲಿ ಎಂದು ಹಾರೈಕೆ.
ಅಪ್ಪಟ ಸ್ನೇಹಕ್ಕೆ ಥ್ಯಾಂಕ್ಯು ಕಜೆಗದ್ದೆ.. ಶುಭವಾಗಲಿ.. !!!
ಬರಹ: ✍️.... ಅನಿಲ್ ಎಚ್.ಟಿ.
( ಪತ್ರಕರ್ತರು )
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network