Header Ads Widget

ಸರ್ಚ್ ಕೂರ್ಗ್ ಮೀಡಿಯ

ಬಾಳುಗೋಡಿವಿನಲ್ಲಿ ನಡೆದ ಕೊಡವ ಸಮಾಜದ ಸಾಂಸ್ಕೃತಿಕ ಹಬ್ಬ 2022


ಬಾಳುಗೋಡಿವಿನಲ್ಲಿ ನಡೆದ ಕೊಡವ ಸಮಾಜದ ಸಾಂಸ್ಕೃತಿಕ ಹಬ್ಬ 2022 

ಕೊಡವ ಜನಾಂಗದ ಅಭಿವೃದ್ಧಿಯ ನಿಟ್ಟಿನಲ್ಲಿ ಫೆಡರೇಶನ್ ಆಫ್ ಕೊಡವ ಸಮಾಜ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಸಮಾಜದ ಪೂರ್ವಾಧ್ಯಕ್ಷರಾದ ಮಲ್ಲೇಂಗಡ ದಾದಾ ಬೆಳ್ಳಿಯಪ್ಪ ಅಭಿಪ್ರಾಯ ಪಟ್ಟಿದ್ದಾರೆ. ಇಂದು ಬಾಳುಗೋಡಿನ ಕೊಡವ ಸಮಾಜ ಒಕ್ಕೂಟದ ಆವರಣದಲ್ಲಿ ನಡೆದ ಸಮಾಜದ ಸಾಂಸ್ಕೃತಿಕ ಹಬ್ಬ 2022 ಅನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಸಂಘಟನೆಯನ್ನು ಬಲಿಷ್ಠ ಗೊಳಿಸಲು ಪೂರ್ವ ಕಾನೂನು ಮಂತ್ರಿಗಳಾದ ಎಂ. ಸಿ. ನಾಣಯ್ಯ ಅವರ ಕೊಡುಗೆ ಅಪಾರ ಹಾಗೂ ಕರ್ನಾಟಕ ಸರ್ಕಾರ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಕೊಡವ ಜನಾಂಗ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿ ಶ್ರೀಮಂತ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಶ್ರಮಿಸಬೇಕಿದೆ ಎಂದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜ ಒಕ್ಕೂಟಗಳ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ ಸಂಸ್ಕೃತಿ ಉಳಿದರೆ ಮಾತ್ರ ಜನಾಂಗದ ಉಳಿಯುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸಲು ಆಗಲಿಲ್ಲ. ಈಗ ಮತ್ತೊಮ್ಮೆ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು ಮುಂದಿನ ದಿನಗಳಲ್ಲಿ ಪ್ರತಿವರ್ಷ ಈ ಹಬ್ಬವನ್ನು ನಡೆಸುವುದರ ಮುಖಾಂತರ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸಲಾಗುವುದು ಎಂದರು. 

ವೇದಿಕೆಯಲ್ಲಿ ಬೆಂಗಳೂರು, ವಿರಾಜಪೇಟೆ ಸೇರಿದಂತೆ ವಿವಿಧ ಕೊಡವ ಸಮಾಜಗಳ  ಅಧ್ಯಕ್ಷರು  ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಕಾಳಿಮಾಡ ಮೋಟಯ್ಯ ಇತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉಮ್ಮತಾಟ್ ,ಕೋಲಾಟ್, ಕಪ್ಪೆಯಾಟ್,  ಕತ್ತಿ ಆಟ್  ಹೀಗೆ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.