Header Ads Widget

Responsive Advertisement

ಮಡಿಕೇರಿ-ವಿರಾಜಪೇಟೆ ಮಾರ್ಗ ವಿದ್ಯುತ್ ಲಿಂಕ್ ಲೈನ್ ಶೀಘ್ರ ಪೂರ್ಣ: ಸೋಮರಾಜ್


ಮಡಿಕೇರಿ-ವಿರಾಜಪೇಟೆ ಮಾರ್ಗ ವಿದ್ಯುತ್ ಲಿಂಕ್ ಲೈನ್ ಶೀಘ್ರ ಪೂರ್ಣ: ಸೋಮರಾಜ್

ಮಡಿಕೇರಿ ಡಿ.20: ಮಡಿಕೇರಿಯಿಂದ ವಿರಾಜಪೇಟೆ ಮಾರ್ಗದಲ್ಲಿ 66/11 ಕೆ.ವಿ.ಸಾಮಥ್ರ್ಯದ ವಿದ್ಯುತ್ ಲಿಂಕ್ ಲೈನ್ ಮಾರ್ಗ ಆರಂಭವಾಗಿದ್ದು, ಶೀಘ್ರ ಪೂರ್ಣಗೊಳ್ಳಲಿದೆ ಎಂದು ಕೊಡಗು ಮತ್ತು ಚಾಮರಾಜನಗರ ವೃತ್ತದ ಅಧೀಕ್ಷಕ ಎಂಜಿನಿಯರ್ ಸೋಮರಾಜ್ ಅವರು ತಿಳಿಸಿದ್ದಾರೆ.

ಮಡಿಕೇರಿಗೆ ಕುಶಾಲನಗರ ಮಾರ್ಗದಿಂದ ವಿದ್ಯುತ್ ಪೂರೈಕೆಯಾಗುತ್ತಿದೆ. ಈ ಮಾರ್ಗದಲ್ಲಿ ವಿದ್ಯುತ್ ಅಡಚಣೆ ಉಂಟಾದಲ್ಲಿ ವಿರಾಜಪೇಟೆ ಮಾರ್ಗದಿಂದ ವಿದ್ಯುತ್ ಸಂಪರ್ಕ ಪಡೆಯಬಹುದಾಗಿದೆ. ಆ ನಿಟ್ಟಿನಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಅಧೀಕ್ಷಕ ಎಂಜಿನಿಯರ್ ಸೋಮರಾಜ್ ಅವರು ತಿಳಿಸಿದ್ದಾರೆ. 

ನಗರದ ಸೆಸ್ಕ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾಹಿತಿ ನೀಡಿ ಅವರು ಮಾತನಾಡಿದರು. ಶ್ರೀಮಂಗಲದಲ್ಲಿ ನಿರ್ಮಾಣವಾಗುತ್ತಿರುವ 66/11 ಕೆವಿ ವಿದ್ಯುತ್ ಉಪ ಕೇಂದ್ರ ಕಾಮಗಾರಿ ಶೇ.90 ರಷ್ಟು ಪೂರ್ಣಗೊಂಡಿದೆ. ಹಾಗೆಯೇ ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ ಶೆಟ್ಟಿಹಳ್ಳಿಯಲ್ಲಿ ಶೇ.60 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು. 

ಹಾಗೆಯೇ ಮಾದಾಪುರ, ಹುದಿಕೇರಿ, ಮೂರ್ನಾಡು, ಸಿದ್ದಾಪುರದಲ್ಲಿ 66/11 ಕೆವಿ ಉಪ ಕೇಂದ್ರ ಆರಂಭಿಸುವ ಸಂಬಂಧ ಟೆಂಡರ್ ಆಹ್ವಾನಿಸಬೇಕಿದೆ. ಭಾಗಮಂಡಲ-ಕೋಪಟ್ಟಿ, ಸಂಪಾಜೆ, ಕೊಡ್ಲಿಪೇಟೆ, ಮರಗೋಡು, ಬಾಳೆಲೆ, ಕಳತ್ಮಾಡು ಇಲ್ಲಿ ಸಹ 66/11 ಕೆವಿ ವಿದ್ಯುತ್ ಉಪಕೇಂದ್ರ ಆರಂಭಿಸಲು ಮಂಜೂರಾತಿ ದೊರೆತಿದೆ. ಈ ಎಲ್ಲಾ ವಿದ್ಯುತ್ ಉಪ ಕೇಂದ್ರಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಜಾಗ ಒದಗಿಸಿದೆ ಎಂದು ಸೋಮರಾಜ್ ಅವರು ತಿಳಿಸಿದ್ದಾರೆ. ಸೆಸ್ಕ್ ಇಇ ಅನಿತಾ ಬಾಯಿ, ಎಇಇ ವಿನಯ್ ಕುಮಾರ್ ಇತರರು ಇದ್ದರು.