ಗ್ರಾಮ, ಗ್ರಾಮಗಳ ನಡುವಿನ ಹತ್ತು ಕುಟುಂಬ ಹದಿನೆಂಟು ಗೋತ್ರದ ಕೊಡಗು ಗೌಡ ಜನಾಂಗದ ಕ್ರಿಕೆಟ್ ಪಂದ್ಯಾವಳಿ ಹಾಗು 0.22 ಮತ್ತು 12 ಬೋರ್ ಬಂದೂಕಿನ ಗುರಿ ಹೊಡೆತ ಸ್ಪರ್ಧೆ
ಚೇರಂಬಾಣೆ ಗೌಡ ಸಮಾಜ ಮತ್ತು ಕೊಡಗು ಗೌಡ ಯುವ ವೇದಿಕೆ ವತಿಯಿಂದ ಡಿ.25 ರಿಂದ ಗ್ರಾಮ, ಗ್ರಾಮಗಳ ನಡುವಿನ ಹತ್ತು ಕುಟುಂಬ ಹದಿನೆಂಟು ಗೋತ್ರದ ಕೊಡಗು ಗೌಡ ಜನಾಂಗದ ಕ್ರಿಕೆಟ್ ಪಂದ್ಯಾವಳಿ ಹಾಗು 0.22 ಮತ್ತು 12 ಬೋರ್ ಬಂದೂಕಿನ ಗುರಿ ಹೊಡೆತ ಸ್ಪರ್ಧೆ ನಡೆಯಲಿದೆ.
ಪುರುಷರ ಹಾಗೂ ಮಹಿಳೆಯರ ಮುಕ್ತ ಪಂದ್ಯಾವಳಿ ಇದಾಗಿದ್ದು, ಚೇರಂಬಾಣೆಯ ಅರುಣ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಡಿ.25 ರಂದು ಬೆಳಗ್ಗೆ 9 ಗಂಟೆಗೆ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ.
ಕ್ರಿಕೆಟ್ ಪಂದ್ಯಾವಳಿಯ ಪ್ರವೇಶ ಶುಲ್ಕ ರೂ.2 ಸಾವಿರ ಆಗಿದ್ದು, ಆಸಕ್ತರು ಡಿ.20 ರೊಳಗೆ ರೂ.500 ನ್ನು ಮುಂಗಡವಾಗಿ ಪಾವತಿಸಿ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಆಕರ್ಷಕ ನಗದು ಮತ್ತು ಟ್ರೋಫಿಯನ್ನು ನೀಡಲಾಗುವುದು. ಅಲ್ಲದೆ ಪಂದ್ಯಶ್ರೇಷ್ಠ, ಉತ್ತಮ ಎಸೆತಗಾರ, ಉತ್ತಮ ಕ್ಷೇತ್ರ ರಕ್ಷಕ, ಉತ್ತಮ ದಾಂಡಿಗ ಪ್ರಶಸ್ತಿಯನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಕೂರನ ಪ್ರವೀಣ್-876289716, ಕಟ್ಟೆಮನೆ ರಾಜೇಶ್-7483976628 ಹಾಗೂ ಕೂಡಕಂಡಿ ಡಾಲಿ-9481484401 ಸಂಪರ್ಕಿಸಬಹುದಾಗಿದೆ. 0.22 ಮತ್ತು 12 ಬೋರ್ ಬಂದೂಕಿನ ಗುರಿ ಹೊಡೆತ ಸ್ಪರ್ಧೆಗೆ ಹೆಸರು ನೋಂದಾಯಿಸಲು ಪುದಿಯನೆರವನ ರಿಷಿತ್ ಮಾದಯ್ಯ – 9972376151 ಸಂಪರ್ಕಿಸಬಹುದಾಗಿದೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network