Header Ads Widget

ಸರ್ಚ್ ಕೂರ್ಗ್ ಮೀಡಿಯ

ಪ್ರಸನ್ನ ಗಣಪತಿ ದೇವಾಲಯದ ವಾರ್ಷಿಕೋತ್ಸವ


ಪ್ರಸನ್ನ ಗಣಪತಿ ದೇವಾಲಯದ ವಾರ್ಷಿಕೋತ್ಸವ 

ಮಡಿಕೇರಿ ನಗರದ ಹೊಸ ಬಡಾವಣೆಯ ಪ್ರಸನ್ನ ಗಣಪತಿ ದೇವಾಯದ 22ನೇ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಪೂಜಾ ವಿಧಿ ವಿಧಾನಗಳು ಶ್ರದ್ಧಾಭಕ್ತಿಯಿಂದ ಜರುಗಿತು.

ಮುಂಜಾನೆಯಿಂದಲೇ ಪ್ರಸನ್ನ ಗಣಪತಿಗೆ ಎಳನೀರು ಅಭಿಷೇಕ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ಮತ್ತು ಅಲಂಕಾರ ಪೂಜೆ ಜರುಗಿತು.

ನಂತರ ಮಹಾಗಣಪತಿ ಹೋಮ ಹಾಗೂ ನವ ಕಲಶ ಪೂಜೆ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ಹಾಗೂ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಸಂಜೆ ಸತ್ಯನಾರಾಯ ಪೂಜೆ, ರಂಗಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತ್ತು.