Header Ads Widget

ಸರ್ಚ್ ಕೂರ್ಗ್ ಮೀಡಿಯ

ಸಿಗ್ನೇಚರ್ ಡ್ಯಾನ್ಸ್ ಕಂಪನಿಗೆ ಸಮಗ್ರ ಚಾಂಪಿಯನ್ಶಿಪ್ ಪಟ್ಟ


ಸಿಗ್ನೇಚರ್ ಡ್ಯಾನ್ಸ್ ಕಂಪನಿಗೆ  ಸಮಗ್ರ ಚಾಂಪಿಯನ್ಶಿಪ್ ಪಟ್ಟ

ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಅಸೋಸಿಯೇಷನ್ ವತಿಯಿಂದ ಮೈಸೂರಿನ ಎಂ ಎಂ ಸಿ  ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಸ್ಪೋರ್ಟ್ ಡ್ಯಾನ್ಸ್ ಚಾಂಪಿಯನ್ಶಿಪ್ ನಲ್ಲಿ ಸಿಗ್ನೇಚರ್ ಡ್ಯಾನ್ಸ್ ಕಂಪನಿ ಸಮಗ್ರ ಚಾಂಪಿಯನ್ಶಿಪ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.

14 ಚಿನ್ನದ ಪದಕ 3 ಬೆಳ್ಳಿ ಪದಕ ಒಂದು ಕಂಚಿನ ಪದಕ ಸೇರಿದಂತೆ ಒಟ್ಟಾರೆ 18 ಪದಕಗಳನ್ನು ಪಡೆಯಿತು.

ಹರ್ಷಿತ್ ಕುಮಾರ್ ಮೂರು ಚಿನ್ನದ ಪದಕ ಗಳಿಸಿದರೆ, ಸನಿಹ, ಸಿಂಚನ, ನಿಶ್ಚಲ್, ಮಾನ್ಯ, ಚರಿತ್, ಧೀರಜ್ ತಲಾ ಎರಡು ಚಿನ್ನದ ಪದಕ ಪಡೆದರು.

ಒಟ್ಟು 51 ಮಂದಿಯ ಸಿಗ್ನೇಚರ್ ಡ್ಯಾನ್ಸ್ ಕಂಪನಿ ತಂಡ ಪ್ರಥಮ ಸ್ಥಾನ ಪಡೆಯಿತು. ಪದಕ ವಿಜೇತರು ಫೆಬ್ರವರಿ ತಿಂಗಳಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ಪೋರ್ಟ್ ಡ್ಯಾನ್ಸ್ ಚಾಂಪಿಯನ್ಶಿಪ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಾರೆ.

ತಂಡಕ್ಕೆ ಡಿಕೆಡಿ ವಿಜೇತ ರಾಹುಲ್ ರಾವ್ ಹಾಗೂ ಸಹ ತರಬೇತುದಾರ ಪೃಥ್ವಿ ನಾಯಕ್  ತರಬೇತಿ ನೀಡಿದರು.