Header Ads Widget

ಸರ್ಚ್ ಕೂರ್ಗ್ ಮೀಡಿಯ

ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದ ಕಾಫಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ


ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದ ಕಾಫಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ

ಮಡಿಕೇರಿ: ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳ ಯೋಜನೆಯಲ್ಲಿ ಕಾಫಿ ಮಂಡಳಿಯು 2022 ನೇ ಸಾಲಿಗೆ ಅನ್ವಯಿಸುವಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಫಿ ಕೃಷಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

2021-22 ರಲ್ಲಿ 10 ನೇ ತರಗತಿ ಉತ್ತೀರ್ಣ ಹೊಂದಿ ಪ್ರಸಕ್ತ ಸಾಲಿನಲ್ಲಿ ಪ್ರಥಮ ಪಿಯುಸಿ, ವೃತ್ತಿಪರ ಕೋರ್ಸ್‍ಗಳು ಪಾಲಿಟೆಕ್ನಿಕ್ ಓದುತ್ತಿರುವ ವಿದ್ಯಾರ್ಥಿಗಳು. 2021-22 ರಲ್ಲಿ ಪಿಯುಸಿ ಉತ್ತೀರ್ಣ ಹೊಂದಿ ಪ್ರಸಕ್ತ 2022-23 ರಲ್ಲಿ ಯಾವುದೇ ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‍ಗಳು, ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ, ಪಾರ್ಮಸಿ ಮತ್ತು ನಸಿರ್ಂಗ್‍ಗೆ ಪ್ರವೇಶ ಹೊಂದಿರುವ ವಿದ್ಯಾರ್ಥಿಗಳು. ಅನುದಾನದ ಲಭ್ಯತೆ ಹಾಗೂ ಮೆರಿಟ್ ಆಧಾರದಲ್ಲಿ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಗುವುದು. ಮೊದಲು ಬಂದವರಿಗೆ ಆಧ್ಯತೆ. ಅರ್ಜಿ ಸಲ್ಲಿಸಲು ಜನವರಿ, 20 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾಫಿ ಮಂಡಳಿ ಉಪ ನಿರ್ದೇಶಕರು ತಿಳಿಸಿದ್ದಾರೆ.