Header Ads Widget

Responsive Advertisement

ಶ್ರೀ ಗೌರಿಶಂಕರ ದೇವಾಲಯ ಮೇಕೇರಿ; ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ


ಶ್ರೀ ಗೌರಿಶಂಕರ ದೇವಾಲಯ ಮೇಕೇರಿ; ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವ                                .                      

ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಮೇಕೇರಿ ಗ್ರಾಾಮದಲ್ಲಿ ನೆಲೆನಿಂತಿರುವ ಶ್ರೀ ಗೌರಿಶಂಕರ ದೇವಾಲಯದ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು  28-12-2022ರ ಬುಧವಾರದಿಂದ 01-01-2023 ಭಾನುವಾರದವರೆಗೆ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ 5 ದಿನಗಳ ಕಾಲ ನಡೆಯಲಿದೆ.

ಡಿಸೆಂಬರ್ 28 ಬುಧುವಾರ ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ  12 ಗಂಟೆಯವರೆಗೆ ದೇವರಲ್ಲಿ ಪ್ರಾರ್ಥನೆ, ಶ್ರೀ ಗಣಪತಿ ಹೋಮ, ಬೆಳಿಗ್ಗೆ 7 ಗಂಟೆಗೆ ತೋರಣ ಸಂಸ್ಕಾರ, ಧ್ವಜಸ್ಥಂಭ ಪೂಜೆ, ಧ್ವಜಾರೋಣ, ಉಗ್ರಾಣ ಪೂಜೆ, ಬೆಳಿಗ್ಗೆ 7.30 ಕ್ಕೆ  ಶ್ರೀ ಪನ್ನಂಗಾಲತಮ್ಮೆ ದೇವಿ ಸನ್ನಿಧಿಗೆ ಮೆರವಣಿಗೆ ತೆರಳಿ ಪೂಜೆ ಹಾಗೂ ಅನುಗ್ರಹ ಬೇಡಿಕೆ ಪೂಜೆ. ಬೆಳಿಗ್ಗೆ 10.30ರಿಂದ 12 ಗಂಟೆಯವರೆಗೆ ಗ್ರಾಮದ ನಾಲ್ಕು ದಿಕ್ಕುಗಳಿಂದ ಕಾಲ್ನಡಿಗೆಯ ಮೂಲಕ ಸಾಗಿ  ಬಂದು ದೇವಸನ್ನಿಧಿಯಲ್ಲಿ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ತದನಂತರ ಅನ್ನಸಂತರ್ಪಣೆ ನಡೆಯಲಿದೆ. 

ಸಂಜೆ 7.30ರಿಂದ 9.30ರವರೆಗೆ ಶ್ರೀ ಕಲ್ಲಡ್ಕ ವಿಠ್ಠಲ ನಾಯಕ್ ಹಾಗೂ ತಂಡದವರಿಂದ  ಗೀತಾ ಸಾಹಿತ್ಯ ಸಂಭ್ರಮ  ಕಾರ್ಯಕ್ರಮ ನಡೆಯಲಿದೆ. 

ಡಿಸೆಂಬರ್ 29 ಗುರುವಾರ ರಂದು  ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12.30ರವೆಗೆ ಪುಣ್ಯಾಹವಾಚನ, ದೇವನಾಂದಿ, ಶ್ರೀ ಗಣಪತಿ ಹೋಮ, ಬ್ರಹ್ಮಕೂರ್ಚ ಹೋಮ, ಅಂಕುರ ಪೂಜೆ, ನವಗ್ರಹ ಹೋಮ, ನವಗ್ರಹರಿಗೆ ಅನುಜ್ಞಾಕಲಶ, ಸಂಜೀವಿನಿ ಮಹಾ ಮೃತ್ಯುಂಜಯ ಹೋಮ, ಬಿಂಬ ಶುದ್ಧಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ., ಸಂಜೆ 6 ರಿಂದ 9.30ರವೆಗೆ ದುರ್ಗಾ ದೀಪ ನಮಸ್ಕಾರ ಪೂಜೆ, ಅಘೋರ ಹೋಮ, ಪ್ರಾಾಯಶ್ಚಿತ ಹೋಮ, ದೇವರಿಗೆ ಅದಿವಾಸ ಹೋಮ, ಮಹಾ ಪೂಜೆ, ದೇವರಿಗೆ ಶಯನ, ಅಂಕುರ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಇದರೊಂದಿಗೆ ಸಂಜೆ 7.30ರಿಂದ 9.30ರವರೆಗೆ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಮಡಿಕೇರಿ ಇವರ ವತಿಯಿಂದ ಭಕ್ತಿ ಪೂರಿತ ಸಂಗೀತ ಸುಧೆ ಕಾರ್ಯಕ್ರಮ ನಡೆಯಲಿದೆ.

ಡಿಸಂಬರ್ 30  ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ 12.30ರವರೆಗೆ ಸ್ವಸ್ತಿ ಪುಣ್ಯಾಹವಾಚನ, ಅಂಕುರಪೂಜೆ, ಶ್ರೀ ಗಣಹೋಮ, ಪ್ರತಿಷ್ಠಾ ಹೋಮ(ಬೆ.11.30ರ ಮೀನಲಗ್ನದಲ್ಲಿ ನೂತನ ಗರ್ಭಗ್ರಹದಲ್ಲಿ) ಶ್ರೀ ಗೌರಿಶಂಕರನ ಪುನರ್‌ಪ್ರತಿಷ್ಠೆ ಪರಿವಾರ ದೇವತೆಗಳಾದ ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ, ನವಗ್ರಹ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಅಷ್ಠಬಂಧ ಲೇಪನ, ಮಹಾಪೂಜೆ, ಆಶ್ಲೇಷ ಬಲಿ, ನಾಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ರಿಂದ 8.30ರವೆಗೆ ಸುರ್ದಶನ ಹೋಮ, ಅಂಕುರ ಪೂಜೆ, ಶಾಂತಿ ಪ್ರಾಾಯಶ್ಚಿತ ಹೋಮ, ಸಾಮಾನ್ಯ ಪ್ರಾಾಯಶ್ಚಿತ ಹೋಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಇದರೊಂದಿಗೆ

ಸಂಜೆ 7.30ರಿಂದ 9.30ರವೆಗೆ ಶ್ರೀ ವಿನಾಯಕ ಸೇವಾ ಸಮಿತಿ, ತೊಂಬತ್ತುಮನೆ, ಹಾಕತ್ತೂರು ಭಜನಾ ತಂಡದಿಂದ ಭಕ್ತಿಪೂರಿತ ಸಂಗೀತ ಶಿವಾರ್ಚನೆ  ಕಾರ್ಯಕ್ರಮ ನಡೆಯಲಿದೆ. 

ಡಿಸೆಂಬರ್ 31 ಶನಿವಾರ ಬೆಳಗ್ಗೆ 6 ಗಂಟೆಯಿಂದ 12.30ರವೆಗೆ ಪುಣ್ಯಾಹವಾಚನ, ಶ್ರೀ ಗಣಹೋಮ, ಶ್ರೀ ರುದ್ರ ಪಾರಾಯಣ, ರುದ್ರಹೋಮ, ತತ್ವಹೋಮ, ತತ್ವಕಲಶ ಪೂಜೆ, ತತ್ವಕಲಶ ಅಭಿಷೇಕ, ಮಹಾಪೂಜೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಯಿಂದ 8.30ರವೆಗೆ ಕಲಶ ಮಂಟಪ ಸಂಸ್ಕಾರ, ಅಂಕುರಪೂಜೆ, ಕುಂಭೇಷ ಪೂಜೆ, ಕರ್ಕರಿ ಪೂಜೆ, ಕಲಶಪುರಣೆ, ಬ್ರಹ್ಮ ಕಲಶ ಪೂಜೆ, ಅಧಿವಾಸ ಹೋಮ, ಅಂಕುರ ಪೂಜೆ, ಅಂಕುರ ವಿಸರ್ಜನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ನಂತರ ರಾತ್ರಿ 8:30 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. 

ಈ ಸಭಾ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲೆಯ  ಜನಪ್ರತಿನಿಧಿಗಳು ಆಗಮಿಸಲಿರುವರು.   ಇದರೊಂದಿಗೆ

ಸಂಜೆ 7.30ರಿಂದ 9.30ರವರೆಗೆ ಜಿಲ್ಲೆಯ ಖ್ಯಾತ ಹಿನ್ನೆಲೆ ಗಾಯಕ ರವಿ ಭೂತನಕಾಡು, ಆದಿಚುಂಚನಗಿರಿ ಮಠ, ಮಂಡ್ಯ ಇವರ ತಂಡದ ಭಕ್ತಿ ಲಹರಿ ಕಾರ್ಯಕ್ರಮ ನಡೆಯಲಿದೆ. 

ಜನವರಿ 1 ರಂದು ಬೆಳಗ್ಗೆ 6 ಗಂಟೆಯಿಂದ 12.30ರವರೆಗೆ ಪುಣ್ಯಾಾಹವಾಚನ, ಮಂಗಳ ಗಣಯಾಗ, ಗ್ರಹ್ಮಕಲಶ ಪೂಜೆ, ಶ್ರೀ ಗೌರಿಶಂಕರ ದೇವರಿಗೆ ಬ್ರಹ್ಮಕಲಶಾಭಿಷೇಕ, ಶ್ರೀ ಗಣಪತಿ ಮತ್ತು ಶ್ರೀ ಸುಬ್ರಹ್ಮಣ್ಯ ದೇವರಿಗೆ ಕಲಶ ಅಭಿಷೇಕ, ದೇವರಿಗೆ ಅಲಂಕಾರ, ಮಹಾಪೂಜೆ, ಮಂಗಳ ಮಂತ್ರಾಕ್ಷತೆ, ಆಶೀರ್ವಚನ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಇದರೊಂದಿಗೆ ಬೆಳಿಗ್ಗೆ 11 ರಿಂದ 12 ಗಂಟೆಯವರೆಗೆ ಖ್ಯಾತ ವಾಗ್ಮಿಗಳು ಹಿಂದು ಜಾಗರಣ ವೇದಿಕೆಯ ಪ್ರಾಂತ ಸಮಿತಿಯ ಪ್ರಮುಖರಾದ ಶ್ರೀ ರಾಧಾಕೃಷ್ಣ ಅಡ್ಯಂತಾಯ(ಕಲ್ಲಡ್ಕ) ಇವರಿಂದ ಧಾರ್ಮಿಕ ಉಪನ್ಯಾಾಸ ಕಾರ್ಯಕ್ರಮ ನಡೆಯಲಿದೆ. 

ಶ್ರೀ ಗೌರಿಶಂಕರ ದೇವಾಲಯದ ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವದ ಈ ಎಲ್ಲಾ ದೇವತಾ  & ಧಾರ್ಮಿಕ ಕಾರ್ಯಕ್ರಮಗಳಿಗೆ ಈ ನಾಡಿನ ಸಮಸ್ಥ ಭಕ್ತಾಧಿಗಳನ್ನು ಗೌರವಪೂರ್ವಕವಾಗಿ ಆಮಂತ್ರಿಸುತ್ತಾ ಸರ್ವ ಭಕ್ತಾಧಿಗಳು ಶಿವ ಸನ್ನಿಧಿಗೆ ಆಗಮಿಸಿ ತಮ್ಮ ಸಮಸ್ತ ಕುಟುಂಬ ಮತ್ತು ಈ ನಾಡಿನ ಒಳಿತಿಗಾಗಿ ಪ್ರಾರ್ಥನೆಗೈದು ದೇವರ ಪ್ರಸಾದ ಸ್ವೀಕರಿಸಬೇಕೆಂದು   ಶ್ರೀ ಗೌರಿಶಂಕರ ದೇವಾಲಯ ಪುನರ್ ಪ್ರತಿಷ್ಠಾಪನಾ ಸಮಿತಿ,ಶ್ರೀ ಗೌರಿಶಂಕರ ದೇವಾಲಯ ಟ್ರಸ್ಟ್ (ರಿ) ಮೇಕೇರಿ ಮತ್ತು ಕಾರ್ಯಕಾರಿ ಸಮಿತಿಯು ಆದರದಿಂದ ಕೋರಿರುತ್ತದೆ.