ಪಾರಾಣೆ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭ
ಮೂರ್ನಾಡು: ಇಲ್ಲಿಗೆ ಸಮೀಪದ ಪಾರಾಣೆ ಪ್ರೌಢಶಾಲೆಯ ವಾರ್ಷಿಕೋತ್ಸವ ದಿನಾಚರಣೆಯ ವಿಜೃಂಭಣೆಯಿಂದ ಜರುಗಿತು.
ಪಾರಾಣೆ ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಬೆಂಗಳೂರಿನ ಉದ್ಯಮಿ ಗುಡ್ಡೇರ. ಬಿ. ಸತೀಶ್ ಉದ್ಘಾಟಿಸಿದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಣಂಜಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಎಸ್. ಬೆಳ್ಳಮ್ಮಯ್ಯ, ಬೆಂಗಳೂರಿನ ಉದ್ಯಮಿ ವೆಂಕಪ್ಪ ಪೂಜಾರಿ, ವಿರಾಜಪೇಟೆಯ ಮಕ್ಕಳ ತಜ್ಞ ಡಾ. ಬಾದ್‌ಶ. ಕೆ.ಎ, ನಿವೃತ್ತ ಟಾಟಾ ಕಾಫಿ ಉದ್ಯೋಗಿ ಐಚೋಡಿಯಂಡ ಪಿ. ಕುಶಾಲಪ್ಪ ಮತ್ತು ಬೆಂಗಳೂರಿನ ಸಫ್ಲೆöÊ ಚೈನ್ ಮ್ಯಾನೇಜ್‌ಮೆಂಟ್‌ನ ಮ್ಯಾನೇಜರ್ ಕೆ.ಎ. ರಿಯಾಜ್ ಅವರುಗಳು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪಾರಾಣೆ ಪ್ರೌಢಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪೆಬ್ಬಾಟಂಡ ಎ. ಪೆಮ್ಮಯ್ಯ ಮಾತನಾಡಿ ಕಳೆದ ಐದು ವರ್ಷಗಳಿಂದ ಶಾಲೆಯs ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತç, ನೋಟು ಪುಸ್ತಕಗಳು ನೀಡುತ್ತಿದ್ದು, ಶಾಲಾ ಬಸ್ಸಿನ ಸೌಕರ್ಯ ಕೂಡ ಇದ್ದು, ಯಾವುದೆ ಶುಲ್ಕವಿಲ್ಲದೆ ಉಚಿತವಾಗಿ ಸೇವೆ ನೀಡುತ್ತಿದ್ದೇವೆ ಎಂದು ತಿಳಿಸಿದರು. ವೇದಿಕೆಯಲ್ಲಿ ಕಾಫಿ ಬೆಳೆಗಾರ ಕನ್ನಂಡ ಕೆ. ಕಾಳಪ್ಪ, ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಬೊಳಕಾರಂಡ ನಾಣಯ್ಯ, ಕಾರ್ಯದರ್ಶಿ ಮುಕ್ಕಾಟೀರ ಪುಟ್ಟು ಕುಶಾಲಪ್ಪ, ನಿರ್ದೇಶಕರಾದ ಕಾದಿರ ಉಮೇಶ್ ಪಳಂಗಪ್ಪ, ಪಾಲಂದಿರ ರವಿ ಮಂದಣ್ಣ, ಕೋಚಮಂಡ ತಮ್ಮಯ್ಯ, ಇಗ್ಗುಡ ಪೆಮ್ಮಯ್ಯ, ಮುಕ್ಕಾಟೀರ ಹರೀಶ್, ಅಪ್ಪನರೆವಂಡ ಪೂವಯ್ಯ, ಕುಲ್ಲಚೆಟ್ಟಿರ ಬಾಲಕೃಷ್ಣ, ಮುಕ್ಕಾಟೀರ ಪ್ರೀಟಾ ಗಣಪತಿ, ಕೆ.ಎ. ಉಮ್ಮರ್, ಶಾಲಾ ಮುಖ್ಯ ಶಿಕ್ಷಕಿ ಎ.ಜಿ. ರಜನಿ ಉಪಸ್ಥಿತರಿದ್ದರು.
ಪಾರಾಣೆ ಪ್ರೌಢಶಾಲೆಯ ಪ್ರಾರಂಭದಲ್ಲಿ ಉದಾರವಾಗಿ ಸ್ಥಳ ದಾನ ಮಾಡಿದ ಚೊಳ್ಳಂಡ ಕುಟುಂಬಸ್ಥರ ದಿವಂಗತ ಚೊಳ್ಳಂಡ ಟೀನಾ ಅಯ್ಯಣ್ಣನವರ ಸಹೋದರಿ ಮೂರ್ನಾಡಿನ ಬಾರಿಯಂಡ ನೈಲಾ ಸಂಪತ್ತು ಮತ್ತು ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಕೆ.ಯು. ಸಾನಿಯ ವಿದ್ಯಾರ್ಥಿನಿಯನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಶಿಕ್ಷಕಿ ಸಿ.ಕೆ. ಮಮತ ಸ್ವಾಗತಿಸಿ, ಎ.ಜಿ. ರಜನಿ ವಾರ್ಷಿಕ ವರದಿ ವಾಚಿಸಿ, ಎಸ್. ತಿಪ್ಪೆಸ್ವಾಮಿ ಕಾರ್ಯಕ್ರಮ ನಿರೂಪಿಸಿ, ಹೆಚ್.ಎಲ್. ಭೈರ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಚಿತ್ರ-ವರದಿ : ಟಿ. ಸಿ. ನಾಗರಾಜ್,
ಮೂರ್ನಾಡು
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network