ಆಯುಷ್ಮಾನ್ ಭಾರತ್ ನೋಂದಣಿ ಹಾಗೂ ಡಾಟಾ ಅಪ್ಡೇಟ್ ಮಾಡಲು ಗೃಹ ವೈದ್ಯರನ್ನು ಬಳಕೆ
ಆಯುಷ್ಮಾನ್ ಭಾರತ್ ನೋಂದಣಿ ಹಾಗೂ ಡಾಟಾ ಅಪ್ಡೇಟ್ ಮಾಡಲು ಗೃಹ ವೈದ್ಯರನ್ನು ಕೊಡಗು ವೈದ್ಯಕೀಯ ವಿಜ್ಞಾನ ಗಳ ಸಂಸ್ಥೆ ಬೋಧಕ ಆಸ್ಪತ್ರೆ ಮಡಿಕೇರಿಯಲ್ಲಿ ಬಳಸುತ್ತಿದ್ದು, ಕಂಪ್ಯೂಟರ್ ಆಪರೇಟರ್ ಮಾಡುವ ಎಲ್ಲಾ ಕೆಲಸಗಳಾದ ಸ್ಕ್ಯಾನ್ ಮಾಡುವುದು, ಶುಲ್ಕ ಮೊತ್ತವನ್ನು ಕೂಡಿಸುವ ಕೆಲಸವನ್ನು ಮಾಡುತ್ತಿದ್ದು ಆಸ್ಪತ್ರೆಗೆ ಬಂದ ರೋಗಿಗಳು ಹಾಗೂ ಸ್ಥಳೀಯರು ವೈದ್ಯರನ್ನು ವಿಚಾರಿಸಿದಾಗ ನಾವು ಕಲಿಯುವ ಸಮಯದಲ್ಲಿ ನಮ್ಮ ವ್ಯಾಪ್ತಿಗೆ ಬರದ ಕೆಲಸಗಳನ್ನು ಆಡಳಿತ ಮಂಡಳಿ ಒತ್ತಾಯದಿಂದ ಮಾಡಿಸುತಿದ್ದು ಅಲ್ಲದೆ ದಿನಕ್ಕೆ ನಿರ್ದಿಷ್ಟ ಗುರಿ ತಲುಪದಿದ್ದರೆ ಹಾಜರಾತಿ ನೀಡುವುದಿಲ್ಲ ಎಂದು ಹೆದರಿಸುತಿದ್ದಾರೆ ಇದರಿಂದ ನಮ್ಮ ಕಲಿಕೆಗೆ ತೊಡಕು ಉಂಟಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಆದರಿಂದ ಕೊಡಗು ವೈದ್ಯಕೀಯ ವಿಜ್ಞಾನ ಗಳ ಸಂಸ್ಥೆ ಬೋಧಕ ಆಸ್ಪತ್ರೆ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹ ವೈದ್ಯರು ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network