"ತಣಲ್ ಕೂರ್ಗ್ ವೃದ್ಧಾಶ್ರಮ"ದಲ್ಲಿ ತೀವ್ರ ನಿಗಾ ಘಟಕ(ಐಸಿಯು) ಉದ್ಘಾಟನೆ
ಮಡಿಕೇರಿ: ನಗರದ ತ್ಯಾಗರಾಜ ಕಾಲೋನಿಯಲ್ಲಿರುವ "ತಣಲ್ ಕೂರ್ಗ್ ವೃದ್ಧಾಶ್ರಮ"ದಲ್ಲಿ ನೂತನವಾಗಿ ರೂ.3 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ತೀವ್ರ ನಿಗಾ ಘಟಕವನ್ನು (ಐಸಿಯು) ಕಣ್ಣನೂರಿನ ವೈದ್ಯ ಡಾ.ಅಬ್ದುಲ್ ಸಲಾಂ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸಂಸ್ಥೆಯ ಸೇವಾ ಕಾರ್ಯವನ್ನು ಶ್ಲಾಘೀಸಿ ಇದೇ ರೀತಿ ಸಾಮಾಜಿಕ ಸೇವೆಯನ್ನು ಮುಂದುವರೆಸುವಂತೆ ಕರೆ ನೀಡಿದರು.
ಆಕಾಶವಾಣಿ ಉದ್ಘೋಷಕಿ ಬಾಳೆಯಡ ದಿವ್ಯ ಮಾತನಾಡಿ, ಕುಟುಂಬದಿಂದ ದೂರವಾಗಿ ಯಾರಿಗೂ ಬೇಡದವರಿಗೆ ಆಶ್ರಯದ ಜೊತೆಗೆ ಪ್ರೀತಿ, ವಾತ್ಸಲ್ಯ ಲೋರಿ ವೃದ್ಧರ ಬಾಳಿಗೆ ಆಶ್ರಮ ಬೆಳಕಾಗಿದೆ. ಸಾಮಾಜಿಕ ಸೇವೆಗಳಿಂದ ಆತ್ಮತೃಪ್ತಿ ದೊರಕುತ್ತದೆ ಎಂದರು.
ಈ ಸಂದರ್ಭ ತಣಲ್ ಆಶ್ರಮದ ಅಧ್ಯಕ್ಷ ಮಹಮ್ಮದ್ ಮುಸ್ತಾಫ, ಪ್ರಧಾನ ಕಾರ್ಯದರ್ಶಿ ಕೆ.ಜಿ.ಪೀಟರ್, ಉಪಾಧ್ಯಕ್ಷ ಬಾಬುಚಂದ್ರ ಉಳ್ಳಾಗಡ್ಡಿ, ಪ್ರಮುಖರಾದ ಕರಮತ್ತಲ್ಲ, ಬಸಂ ಸೇರಿದಂತೆ ಇನ್ನಿತರರು ಹಾಜರಿದ್ದರು.
ಆಶ್ರಮದ ಸ್ವಯಂ ಸೇವಕ ವಿಭಾಗದ ವತಿಯಿಂದ ನಿರ್ಮಿಸಲಾಗಿರುವ ಒಂದು ಹಾಸಿಗೆಯ ಐಸಿಯು ಘಟಕದಲ್ಲಿ ವೆಂಟಿಲೇಟರ್, ಆಕ್ಸಿಜನ್, ಇಸಿಜಿ ಸೇರಿದಂತೆ ಇನ್ನಿತರ ವೈದ್ಯಕೀಯ ವ್ಯವಸ್ಥೆಗಳಿವೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network