ಕೊಡಗಿನ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿರುವ ಶ್ರೀ ಬೆಟ್ಟಚಿಕ್ಕಮ್ಮ ದೇವಾಲಯದ ಜೀರ್ಣೋದ್ದಾರ ಕಾರ್ಯವು ಅಂತಿಮ ಹಂತದಲ್ಲಿದ್ದು, ಜನವರಿ 25ರಿಂದ 27ರವರಗೆ ಹರಿಹರ ಶ್ರೀ ಬೆಟ್ಟಚಿಕ್ಕಮ್ಮ ದೇವಿಯ ಪುನರ್‌ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ನಡೆಯಲಿದೆ.
ಕಾರ್ಯಕ್ರಮಗಳ ವಿವರ:
ದಿನಾಂಕ: 25-01-2023ರ ಬುಧವಾರ; ಸಂಜೆ 4-30 ಗಂಟೆಗೆ ಸ್ವಸ್ತಿ ಪುಣ್ಯಾಹವಾಚನ ಸಪ್ತಶುದ್ಧಿ, ಪ್ರಸಾದ ಶುದ್ಧಿ, ವಾಸ್ತು ಹೋಮ, ವಾಸ್ತು ಪೂಜೆ, ರಕ್ಷೋಘ್ನ ಹೋಮ, ಬಿಂಬ ಶುದ್ಧಿ, ಬಿಂಬಾಧಿವಾಸ, ಶಯ್ಯಾಧಿವಾಸ, ಅಷ್ಟಾವಾದನ
ದಿನಾಂಕ: 26-01-2023ರ ಗುರುವಾರ; ಬೆಳ್ಳಿಗ್ಗೆ 6-00 ಗಂಟೆಗೆ ಸ್ವಸ್ತಿ ಪುಣ್ಯಾಹವಾಚನ, ಪ್ರಾಯಶ್ಚಿತ ಹೋಮಗಳು, 48 ತೆಂಗಿನಕಾಯಿಯ ಗಣಪತಿ ಹೋಮ.
ಬೆಳ್ಳಿಗ್ಗೆ 9-50 ರಿಂದ 10-33ರವರಗೆ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವಿಯ ಮತ್ತು ಪರಿವಾರ ದೇವರ ಪ್ರತಿಷ್ಠಾಪನೆ, ಸಾನ್ನಿಧ್ಯ ಕಲಶಾಭಿಷೇಕ, ಸರ್ಪಶಾಂತಿ, ಪ್ರಸನ್ನ ಪೂಜೆ ನಡೆಯಲಿದೆ.
ಸಂಜೆ 4-00 ಗಂಟೆಗೆ ಸ್ವಸ್ತಿ ಶ್ರೀ ಪುಣ್ಯಾಹವಾಚನ, ಕಲಶಮಂಡಲ ಪ್ರತಿಷ್ಠಾಪನೆ, ಕಲಶಾಂಗ ಪ್ರಧಾನ ಹೋಮ, ಕಲಶ ಪ್ರಸನ್ನ ಪೂಜೆ.
ದಿನಾಂಕ: 27-01-2023ರ ಶುಕ್ರವಾರ; ಬೆಳ್ಳಿಗ್ಗೆ 6-00 ಗಂಟೆಗೆ ಸ್ವಸ್ತಿಶ್ರೀ ಪುಣ್ಯಾಹವಾಚನ, ದುರ್ಗಾಹವನ ಬೆಳ್ಳಿಗ್ಗೆ 10-10 ಗಂಟೆಗೆ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಬ್ರಾಹ್ಮಣ ಆರಾಧನೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ
ಪ್ರತಿದಿನವೂ ಅನ್ನಸಂತರ್ಪಣೆ ಇರುತ್ತದೆ.
ಸರ್ವರಿಗೂ ಆದರದ ಸ್ವಾಗತವನ್ನು ಬಯಸುತ್ತಿರುವವರು:
ಅಧ್ಯಕ್ಷರು: ಮುಕ್ಕಾಟಿರ .ಪಿ. ವೇಣು, (ನಿವೃತ್ತ ಫ್ರೌಡ ಶಾಲಾ ಮುಖ್ಯೋಪಾದ್ಯಾಯರು), ಕಾರ್ಯದರ್ಶಿ: ಪರಿವಾರ ಎಸ್. ನಟೇಶ, ಸಹ ಕಾರ್ಯದರ್ಶಿ: ಮುಕ್ಕಾಟಿರ ಬಿ. ಪೂಮಣಿ, ಖಜಾಂಚಿ: ಮುಕ್ಕಾಟಿರ ಕೆ. ಕರುಂಬಯ್ಯ, ಅರ್ಚಕರು: ಲೋಕೇಶ್ ಪಿ.ವಿ. ಕುಟುಂಬಸ್ಥರು, ಗುರು ಹಿರಿಯರು, ಗ್ರಾಮಸ್ಥರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network