ಜೇಡ್ಲ ಗೋಶಾಲೆಯಲ್ಲಿ ಅರ್ಥಪೂರ್ಣ ಮಕರ ಸಂಕ್ರಾತಿ ಆಚರಣೆ
ಸಂಪಾಜೆಯ ಜೇಡ್ಲದಲ್ಲಿರುವ ಶ್ರೀ ರಾಮಚಂದ್ರಪುರ ಮಠದ ಅಧೀನದಲ್ಲಿರುವ ಗೋಪಾಲಕೃಷ್ಣ ದೇವಕಿ ಪಶು ಸಂಗೋಪನಾ ಕೇಂದ್ರದಲ್ಲಿ ಭಾನುವಾರ ಮಕರ ಸಂಕ್ರಾಂತಿ ಪ್ರಯುಕ್ತ ಗೋವುಗಳ ಆರೋಗ್ಯ ಸುಧಾರಣೆ ಹಾಗೂ ಗ್ರಾಮದ ಕ್ಷೇಮಾಭಿವೃದ್ಧಿಗೆ ಪ್ರಾರ್ಥಿಸಿ ಗೋಪೂಜೆ ಮತ್ತು ಗೋವುಗಳ ಕಿಚ್ಚು ಹಾಯಿಸುವ ವಿನೂತನ ಕಾರ್ಯಕ್ರಮವನ್ನು ಗೋಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬಯಲುಸೀಮೆಯಲ್ಲಿ ಚಿರಪರಿಚಿತವಾಗಿದ್ದ ಸುಗ್ಗಿಹಬ್ಬದ ಈ ಕಾರ್ಯಕ್ರಮವನ್ನು ಪ್ರಪ್ರಥಮ ಬಾರಿಗೆ ಇಂದು ಇಲ್ಲಿ ಆಚರಿಸಲಾಯಿತು. ಸರಳವಾಗಿ ಅಲಂಕರಿಸಿದ್ದ ಗೋವುಗಳನ್ನು ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಕರೆತರಲಾಯಿತು. ಗೋಶಾಲೆಯ ಕೋಶಾಧಿಕಾರಿಗಳಾದ ಈಶ್ವರಕುಮಾರ ಉಬರಡ್ಕ ಸರ್ವರನ್ನು ಸ್ವಾಗತಿಸಿದರು. ಸುಳ್ಯದ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ನಿತಿನ್ ಪ್ರಭು ಕಾರ್ಯಕ್ರಮ ಉದ್ಘಾಟಿಸಿ ಗೋವುಗಳನ್ನು ಕಿಚ್ಚು ಹಾಯಿಸುವದರ ಪ್ರಾಮುಖ್ಯತೆ ಹಾಗೂ ಇದರ ಹಿಂದೆ ಇರುವ ವೈಜ್ಞಾನಿಕ ಕಾರಣವನ್ನು ವಿವರಿಸಿ ಮಾತನಾಡಿದರು.
ಗೋಶಾಲೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿಜಯಕೃಷ್ಣ ಕಬ್ಬಿನಗದ್ದೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಲ್ಲುಗುಂಡಿಯ ವೈದ್ಯರಾದ ಡಾ.ಜಯರಾಮ್ ಭಟ್ ಅವರು ಗೋಬಂಧು ಯೋಜನೆಯನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಶಾಲೆಯ ಕಾರ್ಯಾಧ್ಯಕ್ಷರಾದ ಡಾ.ರಾಜಾರಾಮ್ ಅಖಿಲಾತಿ ವಹಿಸಿದ್ದರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಭರತ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಆಗಮಿಸಿದ್ದರು. ನಿರಂತರ ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ನಾಲ್ವರು ಗೋಪ್ರೇಮಿಗಳನ್ನು ಇಂದು ಗೌರವಿಸಿ ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮಕ್ಕೂ ಮೊದಲು ಕಾರ್ಯಕ್ರಮದ ಮುಖ್ಯ ಭಾಗವಾಗಿ ಗೋವುಗಳನ್ನು ಕಿಚ್ಚು ಹಾಯಿಸಿ ನಂತರ ಗೋಪೂಜೆ ನೆರವೇರಿಸಿ ಗೋವುಗಳಿಗೆ ಬೆಲ್ಲವನ್ನು ತಿನ್ನಿಸಲಾಯಿತು. ಗವ್ಯಾಧಾರಿತ ಗೊಬ್ಬರವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ಕೊಡಗು, ಸುಳ್ಯ, ಗುತ್ತಿಗಾರು, ಈಶ್ವರಮಂಗಲ ಹವ್ಯಕ ವಲಯದ ಅಧ್ಯಕ್ಷರುಗಳು, ಗುರಿಕ್ಕಾರರು, ಪದಾಧಿಕಾರಿಗಳು, ಗೋಪ್ರೇಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network