ಫಲಪುಷ್ಪ ಪ್ರದರ್ಶನ; ವಸ್ತುಪ್ರದರ್ಶನ ಮಳಿಗೆ ಹೆಸರು ನೋಂದಣಿಗೆ ಮನವಿ
ಮಡಿಕೇರಿ ಜ.21: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಫೆಬ್ರವರಿ, 03 ರಿಂದ 06 ರವರೆಗೆ ಏರ್ಪಡಿಸಲಾಗುವ ಫಲಪುಷ್ಪ ಪ್ರದರ್ಶನದ ಅಂಗವಾಗಿ ರಾಜಾಸೀಟು ಉದ್ಯಾನವನ ಹಾಗೂ ಗಾಂಧಿ ಮೈದಾನದಲ್ಲಿ ಹಲವು ಕಾರ್ಯಕ್ರಮ ಹಾಗೂ ಸ್ಪರ್ಧೆ ಏರ್ಪಡಿಸಲಾಗಿದೆ, ಆಸಕ್ತರು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಪ್ರಮೋದ್ ಅವರು ತಿಳಿಸಿದ್ದಾರೆ.
ರೈತರು ಸ್ವತ: ಬೆಳೆದ ವಿವಿಧ ತಳಿಯ ಹಣ್ಣು, ತರಕಾರಿ ಬೆಳೆಗಳು, ಸಾಂಬಾರು ಪದಾರ್ಥಗಳು, ತೋಟದ ಬೆಳೆಗಳನ್ನು ಪ್ರದರ್ಶನದಲ್ಲಿ ಇಡಬಹುದಾಗಿದೆ. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಆದ್ದರಿಂದ ರೈತರು ತಾವು ಬೆಳೆದಂತಹ ಪದಾರ್ಥಗಳನ್ನು ಫೆಬ್ರವರಿ, 03 ರಂದು ಬೆಳಗ್ಗೆ 9 ಗಂಟೆಗೆ ಗಾಂಧಿ ಮೈದಾನದಲ್ಲಿರುವ ತೋಟಗಾರಿಕೆ ಇಲಾಖೆಯ ಮಳಿಗೆಗೆ ನೇರವಾಗಿ ತಂದು ಪ್ರದರ್ಶನದಲ್ಲಿ ಇಡಲು ಕೋರಿದೆ.
ರಾಜಾಸೀಟು ಉದ್ಯಾನವನದಲ್ಲಿ ಅಲಂಕಾರಿಕೆ ಹೂವಿನ ಜೋಡಣೆ, ಒಣಹೂವು ವಿನ ಜೋಡಣೆ, ಇಕೇಬಾನಾ, ಮೋರಿಬಾನ, ಪುಷ್ಪ ರಂಗೋಲಿ, ಬೋನಸಾಯ್ ಗಿಡಗಳ ಪ್ರದರ್ಶನ, ಹೂವಿನ ಕುಂಡಗಳ ಪ್ರದರ್ಶನ, ಇತ್ಯಾದಿ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತರು ಫೆಬ್ರುವರಿ 3 ರಂದು ಬೆಳಗ್ಗೆ 9 ಗಂಟೆಗೆ ರಾಜಾಸೀಟು ಉದ್ಯಾನವನಕ್ಕೆ ಆಗಮಿಸಿ ಭಾಗವಹಿಸಲು ಕೋರಿದೆ.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಫೆಬ್ರವರಿ 3 ರಿಂದ 6 ರ ವರೆಗೆ ವೈನ್ ಉತ್ಸವವನ್ನು ಗಾಂಧಿ ಮೈದಾನದಲ್ಲಿ ಏರ್ಪಡಿಸಲಾಗಿದೆ. ವೈನ್ ಉತ್ಸವದಲ್ಲಿ ಭಾಗವಹಿಸುವವರು ಸ್ವತ: ಉತ್ಪಾದಕರಾಗಿದ್ದು, FSSAI ನೋಂದಣಿ ಪ್ರಮಾಣ ಪತ್ರ ಹೊಂದಿರಬೇಕು. ಆಸಕ್ತರು ತೋಟಗಾರಿಕೆ ಇಲಾಖೆಯಲ್ಲಿ ಜನವರಿ 31 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳುವಂತೆ ಕೋರಿದೆ.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಫೆಬ್ರುವರಿ 3 ರಿಂದ 6 ರ ವರೆಗೆ ಗಾಂಧಿ ಮೈದಾನದಲ್ಲಿ ತೋಟಗಾರಿಕೆ ಗಿಡಗಳ, ಹೂವಿನ, ಕೃಷಿ, ತೋಟಗಾರಿಕೆಗೆ ಸಂಬಂದಿಸಿದ ಪರಿಕರಗಳ ಮಾರಾಟ ಮಳಿಗೆ/ ವಸ್ತುಪ್ರದರ್ಶನ ಮಳಿಗೆ ಏರ್ಪಡಿಸಲಾಗಿದೆ. ಆಸಕ್ತರು ತೋಟಗಾರಿಕೆ ಇಲಾಖೆಯಲ್ಲಿ ಜನವರಿ 31 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕೋರಿದೆ.
ಹೆಚ್ಚಿನ ವಿವರಗಳಿಗೆ ತೋಟಗಾರಿಕೆ ಇಲಾಖೆಯ ಕಚೇರಿಯನ್ನು ಕಚೇರಿ ವೇಳೆಯಲ್ಲಿ 08272-228432 ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಚೆಕ್ಕೇರ ಪ್ರಮೋದ್ ಅವರು ತಿಳಿಸಿದ್ದಾರೆ.
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network